Asianet Suvarna News Asianet Suvarna News

ಮಂಗನಿಂದ ಮಾನವ ವಿಜ್ಞಾನ ಬದಲಾಗುವ ಸಾಧ್ಯತೆ, ಪೂರ್ವಜರಿಗಿಂತ ಭಿನ್ನ ಪುರಾತನ ತಲೆಬುರುಡೆ ಪತ್ತೆ!

ಚೀನಾದಲ್ಲಿ ಅತ್ಯಂತ ಪ್ರಾಚೀನ ಮಾನವ ತಲೆಬರುಡೆ ಪತ್ತೆಯಾಗಿದೆ. ಸದ್ಯ ಇರವು ಮಾನವನ ತಲೆಬುರುಡೆಗಿಂತ ಭಿನ್ನವಾಗಿದೆ. ಈ ತಲೆಬುರುಡೆ ಮಂಗನಿಂದ ಮಾನವ ಅನ್ನೋ ವಿಜ್ಞಾವನ್ನೇ ಬದಲಿಸುವ ಸಾಧ್ಯತೆ ಇದೆ.

Ancient skull found in china scientist may rewrite another lineage of humans evolution ckm
Author
First Published Aug 8, 2023, 8:53 PM IST

ಬೀಜಿಂಗ್(ಆ.08) ಮಾನವನ ವಿಕಸನ ಕುರಿತು ವಿಜ್ಞಾನ ಹೇಳುವ ದಾಖಲೆ ಎಲ್ಲೆಡೆ ಜನಜನಿತವಾಗಿದೆ. ಮಂಗನಿಂದ ಮಾನವ ಅನ್ನೋ ವಿಜ್ಞಾನ ಇದೀಗ ಬದಲಾಗುವ ಸಾಧ್ಯತ ಇದೆ. ಕಾರಣ ಇದೀಗ ಚೀನಾದಲ್ಲಿ ಪುರಾತನ ಮಾನವನ ತಲೆಬರುಡೆಯೊಂದು ಪತ್ತೆಯಾಗಿದೆ. ಈ ತಲೆಬರುಡೆ ಮಾನವನ ಪೂರ್ವಜರ ತಲೆಬುರುಡೆಗಿಂತ ಸಂಪೂರ್ಣ ಭಿನ್ನವಾಗಿದೆ. ಈ ತಲೆಬುರುಡೆ ಮಾನವನ ಮತ್ತೊಂದು ವಂಶದ ಕರುಹನ್ನು ಹೇಳುತ್ತಿದೆ. ಈ ತಲೆಬುರುಡು ಮಾನವನ ಉಗಮ ಹಾಗೂ ವಿಕಸನ ವಿಜ್ಞಾನವನ್ನೇ ಬದಲಿಸುವ ಸಾಧ್ಯತೆಗಳು ಕಾಣಿಸುತ್ತಿದೆ.

ಮಾನವನ ಉಗಮ ಹಾಗೂ ವಿಕಸನ 10 ಸಾವಿರ ವರ್ಷಗಳ ಹಿಂದೆ ಆಗಿಬೇಕು ಎಂದು ಅಂದಾಜಿಸಲಾಗಿದೆ. ಆದರೆ ಚೀನಾದಲ್ಲಿ ಪತ್ತೆಯಾಗಿರುವ ಈ ಪುರಾತನ ತಲೆಬುರುಡೆ ಮ್ಯಾಪಿಂಗ್ ಮಾಡಲಾಗಿದೆ. ಇದು ಬರೋಬ್ಬರಿ 3,00,000 ವರ್ಷಗಳ ಹಿಂದಿನದ್ದಾಗಿದೆ. ಇದು 12 ರಿಂದ 13 ವರ್ಷದ ಮನುಷ್ಯನ ತಲೆಬುರುಡೆ ಎಂದು ಮ್ಯಾಪಿಂಗ್ ಹೇಳುತ್ತಿದೆ. 

15 ಸಾವಿರ ವರ್ಷ ಹಿಂದೆ ಮಾನವನಿಂದ 'ದಾನವ'ನ ಬೇಟೆ: ಸಾಕ್ಷಿಗೆ ಸಿಕ್ತು ಬೃಹತ್ ಮೂಳೆ!

ಪತ್ತೆಯಾಗಿರುವ ಪುರಾತನ ತಲೆಬುರುಡೆ ಆಧುನಿಕ ಮಾನವನ ಕೆಲ ಗುಣಲಕ್ಷಣಗಳನ್ನು ಹೋಲುತ್ತದೆ. ಮಾನವನ ಪೂರ್ವಜರ ತಲೆಬುರುಡೆಗೂ ಇದೀಗ ಪತ್ತೆಯಾಗಿರುವ ತಲೆಬುರುಡಗೂ ಅಜಗಜಾಂತರ ವ್ಯತ್ಯಾಸವಿದೆ. ಹೀಗಾಗಿ ಮಾನವನ ಮತ್ತೊಂದು ವಂಶದ ಕುರುಹು ಗೋಚರಿಸುತ್ತಿದೆ. ಆಧುನಿಕ ಮಾನವನ ವಂಶಕ್ಕೂ ಪತ್ತೆಯಾಗಿರುವ ತಲೆಬುರುಡೆಗೆ ಸಾಮಿಪ್ಯವಿರುವ ಕಾರಣ ಮಂಗನಿಂದ ಮಾನವನ ವಿಜ್ಞಾನ ಬದಲಾಗುವು ಸಾಧ್ಯತೆ ಗೋಚರಿಸುತ್ತಿದೆ. 

ಮಾನವನ ಉಗಮ ಹಾಗೂ ವಿಕಸನ ವಿಜ್ಞಾನದಲ್ಲಿ ಪ್ರಮುಖವಾಗಿ ಮಾನವನ ಪೂರ್ವಜರ ತಲೆಬುರುಡೆ ಹೋಲುವ ವಾನರ ತಲೆಬುರುಡೆಯನ್ನು ವೈಜ್ಞಾನಿಕವಾಗಿ ಸಂಶೋಧನೆ ನಡೆಸಲಾಗಿದೆ. ಈ ಸಂಶೋಧನೆ ಪ್ರಕಾರ, ವಿಕಸನಗೊಳ್ಳುತ್ತಾ ಹೋದ ವಂಶವೊಂದು ಮಂಗನಿಂದ ಮಾನವನಾಗಿದೆ ಎಂದು ವೈಜ್ಞಾನಿಕ ವರದಿ ಹೇಳುತ್ತಿದೆ. ಇದೀಗ ಪತ್ತೆಯಾಗಿರುವ ತಲೆಬುರುಡೆಯಿಂದ 5,50,000 ಹಾಗೂ 7,50,000 ವರ್ಷಗಳ ಹಿಂದೆ ಹೋಮೋ ಎರೆಕ್ಟಸ್ ಎಂದು ಕರೆಯಲ್ಪಡುವ ಮತ್ತೊಂದು ಮಾನವ ಪೂರ್ವಜರಿಂದ ಕವಲೊಡೆದು ವಂಶಾವಳಿ ವಿಕಸನಗೊಂಡಿರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಇದೀಗ ಈ ತಲೆಬುರುಡೆ ಕುರಿತು ಸಂಶೋಧನೆ ಹೆಚ್ಚಾಗುತ್ತಿದೆ.  

ಬೆಳಗಾವಿ-ಮಹಾರಾಷ್ಟ್ರ ಗಡಿಯಲ್ಲಿ 4 ತಲೆಬುರುಡೆ ಪತ್ತೆ, ಬೆಚ್ಚಿಬಿದ್ದ ಜನ!

ಚೀನಾದಲ್ಲಿ ಪತ್ತೆಯಾಗಿರುವ ತಲೆಬುರುಡೆ 4,00,00 ವರ್ಷಗಳ ಹಿಂದೆ ನಿಯಾಂಡರ್ತಲ್‌ಗಳಿಂದ ಬೇರ್ಪಟ್ಟ ಪೂರ್ವ ಏಷ್ಯಾದ ಹೋಮಿನ್‌ಗಳ ವಂಶದಲ್ಲಿ ಪತ್ತೆಯಾಗಿರುವ ಡೆನಿಸೋವನ್ ಮುಖದ ಗುಣಲಕ್ಷಣ ಹೊಂದಿದೆ. ಹೀಗಾಗಿ ಮಾನವನ ವಿಕಸನದಲ್ಲಿ ಪೂರ್ವಜರ ಕುರಿತ ಹಲವು ಗೊಂದಲಗಳಿಗೆ ಈ ತಲೆಬುರುಡೆ ಉತ್ತರ ನೀಡುವ ಸಾಧ್ಯತೆ ಇದೆ.
 

Follow Us:
Download App:
  • android
  • ios