Asianet Suvarna News Asianet Suvarna News

2026ರ ವೇಳೆಗೆ ಜಾಗತಿಕ ತಾಪಮಾನ ತಾತ್ಕಾಲಿಕ 1.5 °C ಮಿತಿ ತಲುಪುವ 50:50 ಸಾಧ್ಯತೆ: ವರದಿ

ಮಾನವ ನಿರ್ಮಿತ ಹವಾಮಾನ ಬದಲಾವಣೆಯು ಮುಂದುವರಿಯುವುದರೊಂದಿಗೆ, 2026ರ ವೇಳೆಗೆ 1800 ರ ದಶಕದ ಅಂತ್ಯದ ಕೈಗಾರಿಕಾ ಪೂರ್ವದ ಮಟ್ಟಕ್ಕಿಂತ ವಾರ್ಷಿಕ ಸರಾಸರಿ 1.5 ಡಿಗ್ರಿ ಸೆಲ್ಸಿಯಸ್ ತಲುಪುವ 50-50 ಸಾಧ್ಯತೆಗಳಿವೆ 

50 50 chance of global temperature temporarily reaching 1 5 Celsius threshold by 2026 Report mnj
Author
Bengaluru, First Published May 10, 2022, 4:27 PM IST

ನವದೆಹಲಿ (ಮೇ. 10): ಜಗತ್ತಿನಾದ್ಯಂತ ಪ್ರತಿವರ್ಷ ತಾಪಮಾನದಲ್ಲಿ ಏರಿಕೆ ಕಂಡುಬರುತ್ತಿದ್ದು, ಅಂತಾರಾಷ್ಟ್ರೀಯ ಒಪ್ಪಂದಗಳು ತಡೆಯಲು ಪ್ರಯತ್ನಿಸುತ್ತಿರುವ ತಾಪಮಾನದ ಮಿತಿಗೆ ಜಗತ್ತು ಹತ್ತಿರವಾಗುತ್ತಿದೆ ಎಂದು ಹವಾಮಾನಶಾಸ್ತ್ರಜ್ಞರ ತಂಡಗಳು ಭವಿಷ್ಯ ನುಡಿದಿವೆ. ಮುಂದಿನ ಐದು ವರ್ಷಗಳಲ್ಲಿ ಭೂಮಿಯು ತಾತ್ಕಾಲಿಕವಾಗಿ ತಾಪಮಾನದ ಗಡಿಯನ್ನು ದಾಟುವ ಸುಮಾರು 50-50 ಸಾಧ್ಯತೆ ಇದೆ ಎಂದು ತಜ್ಞರು ಹೇಳಿದ್ದಾರೆ. 

ಮಾನವ ನಿರ್ಮಿತ ಹವಾಮಾನ ಬದಲಾವಣೆಯು ಮುಂದುವರಿಯುವುದರೊಂದಿಗೆ, 1800ರ ದಶಕದ ಅಂತ್ಯದ ಕೈಗಾರಿಕಾ ಪೂರ್ವದ ಮಟ್ಟಕ್ಕೆ ಹೋಲಿಸಿದರೆ  2026ರ ನಡುವೆ ಒಮ್ಮೆಯಾದರೂ ಜಾಗತಿಕ ಸರಾಸರಿ 1.5 ಡಿಗ್ರಿ ಸೆಲ್ಸಿಯಸ್ (2.7 ಡಿಗ್ರಿ ಫ್ಯಾರನ್‌ಹೀಟ್) ಹೆಚ್ಚಾಗುವ  48 ಪ್ರತಿಶತ ಅವಕಾಶವಿದೆ. ಇದು ಹವಾಮಾನ ವೈಪರಿತ್ಯದಲ್ಲಿ ಮಹತ್ವದ ಬದಲಾವಣೆಯಾಗಲಿದೆ ಎಂದು 11 ವಿವಿಧ ಮುನ್ಸೂಚನೆ ಕೇಂದ್ರಗಳ ತಂಡವು ಸೋಮವಾರ ತಡರಾತ್ರಿ ವಿಶ್ವ ಹವಾಮಾನ ಸಂಸ್ಥೆಗೆ ಭವಿಷ್ಯ ನುಡಿದಿದೆ.

ಇದನ್ನೂ ಓದಿ: ಚಂದ್ರಯಾನ-3 ಮಿಷನ್ ಮೊದಲ ನೋಟ ಬಹಿರಂಗ, ಈ ವರ್ಷದ ಆಗಸ್ಟ್‌ನಲ್ಲಿ ಚಾಲನೆ

ಪ್ರತಿ ವರ್ಷ ಪ್ರಪಂಚದಾದ್ಯಂತ ತಾಪಮಾನ ಹೆಚ್ಚುತ್ತಿದೆ. ಕಳೆದ ವರ್ಷ, ಇದೇ ಮುನ್ಸೂಚಕರು ತಾಪಮಾನ ಏರಿಕೆ 40 ಪ್ರತಿಶತ ಸಾಧ್ಯತೆಯಿದೆ ಎಂದು ತಿಳಿಸಿದ್ದರು  ಮತ್ತು ಒಂದು ದಶಕದ ಹಿಂದೆ ಇದು ಕೇವಲ 10 ಪ್ರತಿಶತವಾಗಿತ್ತು. ಯುನೈಟೆಡ್ ಕಿಂಗ್‌ಡಮ್‌ನ ಹವಾಮಾನ ಕಚೇರಿಯಿಂದ ಸಂಘಟಿತವಾಗಿರುವ ತಂಡವು, ತಮ್ಮ ಐದು ವರ್ಷಗಳ ಸಾಮಾನ್ಯ ದೃಷ್ಟಿಕೋನದಲ್ಲಿ, 2026 ರ ಅಂತ್ಯದ ವೇಳೆಗೆ ಪ್ರಪಂಚವು ಅತ್ಯಂತ ಬಿಸಿಯಾದ ವರ್ಷವಾಗಿ ದಾಖಲೆಯನ್ನು ಸ್ಥಾಪಿಸುವ 93 ಪ್ರತಿಶತದಷ್ಟು ಅವಕಾಶವಿದೆ ಎಂದು ತಿಳಿಸಿದ್ದಾರೆ. 

ಅಲ್ಲದೇ 2022 ರಿಂದ 2026 ರವರೆಗಿನ ಐದು ವರ್ಷಗಳು ದಾಖಲೆಯಲ್ಲಿ ಅತ್ಯಂತ ಬಿಸಿಯಾಗಿರುವ ವರ್ಷಗಳಾಗುವ 93 ಪ್ರತಿಶತದಷ್ಟು ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ. ಯುಎಸ್‌ನ ನೈಋತ್ಯದಲ್ಲಿ ವಿನಾಶಕಾರಿ ಬೆಂಕಿ ಪೀಡಿತ ಮೆಗಾಡ್ರಾಟ್ ಮುಂದುವರಿಯುತ್ತದೆ ಎಂದು ಮುನ್ಸೂಚಕರು ಊಹಿಸಿದ್ದಾರೆ. ಮೆಗಾಡ್ರಾಟ್ ಎನ್ನುವುದು ಎರಡು ದಶಕಗಳು ಅಥವಾ ಅದಕ್ಕಿಂತ ಹೆಚ್ಚು ಕಾಲ ಇರುವ ದೀರ್ಘಕಾಲದ ಬರವಾಗಿದೆ.

ಈ ಮುನ್ಸೂಚನೆಗಳು ದೀರ್ಘಾವಧಿಯ ಸರಾಸರಿಗಳು ಮತ್ತು ಸ್ಟೇಟ್ ಆಫ್ ಆರ್ಟ್ ಕಂಪ್ಯೂಟರ್ ಸಿಮ್ಯುಲೇಶನ್‌ಗಳ ಆಧಾರದ ಮೇಲೆ ವಾರ್ಷಿಕ ಮತ್ತು ಕಾಲೋಚಿತ ಸಮಯದ ಪ್ರಮಾಣದಲ್ಲಿ ಜಾಗತಿಕ ಮತ್ತು ಪ್ರಾದೇಶಿಕ ಹವಾಮಾನ ಮುನ್ಸೂಚನೆಗಳಾಗಿವೆ. ನಿರ್ದಿಷ್ಟ ಸ್ಥಳಗಳಲ್ಲಿ ಒಂದು ನಿರ್ದಿಷ್ಟ ದಿನ ಎಷ್ಟು ಬಿಸಿಯಾಗಿರುತ್ತದೆ ಅಥವಾ ತೇವವಾಗಿರುತ್ತದೆ ಎಂದು ಊಹಿಸುವ ಹೆಚ್ಚು ನಿಖರವಾದ ಹವಾಮಾನ ಮುನ್ಸೂಚನೆಗಳಿಗಿಂತ ಅವು ವಿಭಿನ್ನವಾಗಿವೆ.

ಇದನ್ನೂ ಓದಿ: ಗುರುಗ್ರಹದ ಚಂದ್ರ ಯುರೋಪಾದಲ್ಲಿ ವಾಸಯೋಗ್ಯ ಪ್ರದೇಶ ಪತ್ತೆ: ಏಲಿಯನ್ಸ್ ಅಸ್ತಿತ್ವಕ್ಕೆ ಮತ್ತಷ್ಟು ಪುಷ್ಟಿ?

ಆದರೆ ಪ್ರಪಂಚವು ಕೈಗಾರಿಕಾ ಪೂರ್ವದ ಸಮಯಕ್ಕಿಂತ 1.5 ಡಿಗ್ರಿಗಳಷ್ಟು ಗಡಿಯನ್ನು ತಲುಪದಿದ್ದರು ಸಹ - 1800 ರ ದಶಕದ ಉತ್ತರಾರ್ಧದಿಂದ ಭೂಮಿಯ ತಾಪಮಾನ ಈಗಾಗಲೇ ಸುಮಾರು 1.1 ಡಿಗ್ರಿಗಳಷ್ಟು (2 ಡಿಗ್ರಿ ಫ್ಯಾರನ್ಹೀಟ್) ಹೆಚ್ಚಾಗಿದೆ. ಇದು  2015ರ ಪ್ಯಾರಿಸ್ ಒಪ್ಪಂದದಲ್ಲಿ ಅಂತಾರಾಷ್ಟ್ರೀಯ ಸಮಾಲೋಚಕರು ಮೊದಲು ನಿಗದಿಪಡಿಸಿದ ಜಾಗತಿಕ ಮಿತಿಯಂತೆಯೇ ಅಲ್ಲ. 2018 ರಲ್ಲಿ, ವಿಶ್ವಸಂಸ್ಥೆಯ ಪ್ರಮುಖ ವಿಜ್ಞಾನ ವರದಿಯು 1.5 ಡಿಗ್ರಿಗಳಷ್ಟು ತಾಪಮಾನವನ್ನು ಮೀರಿದರೆ ಜನರು ಮತ್ತು ಪ್ರಪಂಚದ  ಅಪಾಯಕಾರಿ ಪರಿಣಾಮಗಳನ್ನು ಬೀಳಲಿದೆ ಎಂದು ತಿಳಿಸಿತ್ತು. 

ಪ್ರಪಂಚವು ಎಲ್ ನಿನೊಗೆ (El Nino) ವಿರುದ್ಧವಾದ ಲಾ ನಿನಾದ (La Nina) ಎರಡನೇ ನೇರ ವರ್ಷದಲ್ಲಿದೆ, ಇದು ಸ್ವಲ್ಪ ಭೂಮಿಯನ್ನು ತಂಪಾಗಿಸುವ ಪರಿಣಾಮವನ್ನು ಹೊಂದಿದೆ ಆದರೆ ಕಲ್ಲಿದ್ದಲು, ತೈಲ ಮತ್ತು ನೈಸರ್ಗಿಕ ಅನಿಲ ಸುಡುವಿಕೆಯಿಂದ ಹೊರಬರುವ ಶಾಖ-ಬಲೆಯ ಅನಿಲಗಳ ಒಟ್ಟಾರೆ ತಾಪಮಾನವನ್ನು ಎದುರಿಸಲು ಇದು ಸಾಕಾಗುವುದಿಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಲಾ ನಿನಾ ಈ ವರ್ಷದ ಕೊನೆಯಲ್ಲಿ ಅಥವಾ 2023 ರಲ್ಲಿ ಕೊನೆಗೊಳ್ಳುವ ಸಾಧ್ಯತೆಯಿದೆ ಎಂದು ಐದು ವರ್ಷಗಳ ಮುನ್ಸೂಚನೆ ಹೇಳುತ್ತದೆ.

ಪಳೆಯುಳಿಕೆ ಇಂಧನಗಳ ಹಸಿರುಮನೆ ಪರಿಣಾಮವು ಜಾಗತಿಕ ತಾಪಮಾನವನ್ನು ಏರಿಸುತ್ತಲ್ಲೇ ಇದೆ. ಎಲ್ ನಿನೋ, ಲಾ ನಿನಾ ಮತ್ತು ಇತರ ಕೆಲವು ನೈಸರ್ಗಿಕ ಹವಾಮಾನ ಬದಲಾವಣೆಗಳು ತಾಪಮಾನ ಏರಿಳಿತ ಹೆಜ್ಜೆಗಳನ್ನು ಮೇಲಕ್ಕೆ ಅಥವಾ ಕೆಳಕ್ಕೆ ತೆಗೆದುಕೊಳ್ಳುವಂತೆಯೇ ಇವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

Follow Us:
Download App:
  • android
  • ios