Asianet Suvarna News Asianet Suvarna News

ಸ್ಕೈರೂಟ್‌ನಿಂದ 2ನೇ ಉಪಗ್ರಹ ಉಡಾವಣಾ ಪ್ರಯೋಗ ಯಶಸ್ವಿ

ಭಾರತದ ಮೊದಲ ಖಾಸಗಿ ಬಾಹ್ಯಾಕಾಶ ಸಂಸ್ಥೆಯಾಗಿರುವ ಸ್ಕೈರೂಟ್‌ ಏರೋಸ್ಪೇಸ್‌ ಮತ್ತೊಂದು ದಾಖಲೆ ಬರೆದಿದ್ದು, ಪರೀಕ್ಷಾ ಉಡಾವಣೆಯಲ್ಲಿ ಎಲ್ಲ ಮಾನದಂಡಗಳನ್ನು ನಮ್ಮ ಕಲಾಂ-250 ಎಂಬ ರಾಕೆಟ್‌ ಪೂರೈಸಿದೆ. ಇನ್ನು ಕೆಲವೇ ದಿನಗಳಲ್ಲಿ ಭಾರತದಿಂದ ಅಧಿಕೃತವಾಗಿ ಮೊದಲ ಖಾಸಗಿ ಉಪಗ್ರಹ ಕಕ್ಷೆಗೆ ಹಾರಲಿದೆ’ ಎಂದು ತಿಳಿಸಿದ ಕಂಪನಿಯ ಸಹಸಂಸ್ಥಾಪಕ ಪವನ್‌ ಚಂದ್ರ 

2nd Satellite Launched Experiment from Skyroot Aerospace Successful grg
Author
First Published Mar 29, 2024, 10:47 AM IST

ಹೈದರಾಬಾದ್‌(ಮಾ.29):  ಬಾಹ್ಯಾಕಾಶ ಉದ್ಯಮದ ಖಾಸಗಿ ಸಂಸ್ಥೆಯಾಗಿರುವ ಸ್ಕೈರೂಟ್‌ ಏರೋಸ್ಪೇಸ್‌ ತನ್ನ ವಿಕ್ರಂ-1 ಉಪಗ್ರಹ ಉಡಾವಣಾ ವಾಹಕದಿಂದ ಎರಡನೇ ಬಾರಿಗೆ ಮಾಡಿದ ಪ್ರಯೋಗದಲ್ಲಿ ಬುಧವಾರ ಯಶಸ್ವಿಯಾಗಿದೆ.

ಕಂಪನಿಯು ಶ್ರೀಹರಿಕೋಟಾದ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಲ್ಲಿ ಬುಧವಾರ ಮಾಡಿದ ಪ್ರಯೋಗದಲ್ಲಿ ತನ್ನ ವಾಹಕದಿಂದ ಕಲಾಂ-250 ಎಂಬ ರಾಕೆಟ್‌ ಉಡಾವಣೆ ಮಾಡುವಲ್ಲಿ ಯಶಸ್ವಿಯಾಗಿದೆ. ಈ ಕುರಿತು ಸಂತಸ ವ್ಯಕ್ತಪಡಿಸಿದ ಕಂಪನಿಯ ಸಹಸಂಸ್ಥಾಪಕ ಪವನ್‌ ಚಂದ್ರ, ‘ಭಾರತದ ಮೊದಲ ಖಾಸಗಿ ಬಾಹ್ಯಾಕಾಶ ಸಂಸ್ಥೆಯಾಗಿರುವ ಸ್ಕೈರೂಟ್‌ ಏರೋಸ್ಪೇಸ್‌ ಮತ್ತೊಂದು ದಾಖಲೆ ಬರೆದಿದ್ದು, ಪರೀಕ್ಷಾ ಉಡಾವಣೆಯಲ್ಲಿ ಎಲ್ಲ ಮಾನದಂಡಗಳನ್ನು ನಮ್ಮ ಕಲಾಂ-250 ಎಂಬ ರಾಕೆಟ್‌ ಪೂರೈಸಿದೆ. ಇನ್ನು ಕೆಲವೇ ದಿನಗಳಲ್ಲಿ ಭಾರತದಿಂದ ಅಧಿಕೃತವಾಗಿ ಮೊದಲ ಖಾಸಗಿ ಉಪಗ್ರಹ ಕಕ್ಷೆಗೆ ಹಾರಲಿದೆ’ ಎಂದು ತಿಳಿಸಿದ್ದಾರೆ.

Skyroot Aerospace: ದೇಶದ ಮೊದಲ ಖಾಸಗಿ ರಾಕೆಟ್‌ ವಿಕ್ರಮ್‌ ಎಸ್‌ ನಭಕ್ಕೆ ಯಶಸ್ವಿ ಉಡಾವಣೆ!

ಇದಕ್ಕೂ ಮೊದಲು ನವೆಂಬರ್‌ 2022ರಲ್ಲಿ ಮೊದಲ ಬಾರಿಗೆ ಪರೀಕ್ಷಾ ಪ್ರಯೋಗವನ್ನು ಮಾಡಿತ್ತು.

Follow Us:
Download App:
  • android
  • ios