ರಾಜಕಾರಣಿಗಳ ಮಕ್ಕಳು ಸಿನಿಮಾದತ್ತ ಬರುತ್ತಿದ್ದಾರೆ. ಸಚಿವ ಜಮೀರ್ ಅಹ್ಮದ್ ಪುತ್ರ ಜಾಹಿದ್ ಅಹ್ಮದ್ ಖಾನ್ ಸಿನಿಮಾಗೆ ಬರುತ್ತಾರೆ ಎನ್ನುವ ಸುದ್ದಿ ಬಹಳ ದಿನಗಳಿಂದ ಓಡಾಡುತ್ತಿದೆ. 

ಮದುವೆ ನಂತರ ಸರ್ಪ್ರೈಸ್ ಕೊಟ್ಟ ಐಂದ್ರಿತಾ ರೈ?

ಇದೀಗ ಜಾಹೀದ್ ಖಾನ್ ಸ್ಯಾಂಡಲ್ ವುಡ್ ಮೂಲಕ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಜಯತೀರ್ಥ ಅವರ ನಿರ್ದೇಶನದಲ್ಲಿ ಜಮೀರ್ ಸ್ಯಾಂಡಲ್ ವುಡ್ ಪ್ರವೇಶಿಸಲಿದ್ದಾರೆ. 

ಜಯತೀರ್ಥ ಸಾಕಷ್ಟು ಹೊ ಪ್ರತಿಭೆಗಳನ್ನು ಸ್ಯಾಂಡಲ್ ವುಡ್ ಗೆ ಪರಿಚಯಿಸಿದ್ದಾರೆ. ರಿಷಬ್ ಶೆಟ್ಟಿ ಮೊದಲ ಬಾರಿ ನಾಯಕರಾಗಿದ್ದು ಇವರ ನಿರ್ದೇಶನದಲ್ಲಿ.  ಇದೀಗ ಜಮೀರ್ ಪುತ್ರನನ್ನು ಸ್ಯಾಂಡಲ್ ವುಡ್ ಗೆ ಪರಿಚಯಿಸುತ್ತಿದ್ದಾರೆ. 

ಜಾಹಿದ್ ಮುಂಬೈನಲ್ಲಿ ನಟನಾ ತರಬೇತಿ ಪಡೆದುಕೊಂಡಿದ್ದಾರೆ. ಅಭಿನಯದ ಬಗ್ಗೆ ಸಂಪೂರ್ಣ  ತರಬೇತಿ ಪಡೆದುಕೊಂಡು ಬೆಳ್ಳಿತೆರೆಯಲ್ಲಿ ಮಿಂಚಲು ಸಿದ್ಧರಾಗಿದ್ದಾರೆ.