’ಮನಸಾರೆ’ ಖ್ಯಾತಿಯ ನಟಿ ಐಂದ್ರಿತಾ ರೇ ಇತ್ತೀಚಿಗೆ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಪ್ರಾಣಿ, ಪಕ್ಷಿಗಳು, ಪರಿಸರ ಕಾಳಜಿ, ಸಾಮಾಜಿಕ ಕೆಲಸಗಳಲ್ಲಿ ಬ್ಯುಸಿಯಾಗಿದ್ದರು.  ಮದುವೆಯ ಬಳಿಕವಂತೂ ತೆರೆ ಮೇಲೆ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಇವರ ಮುಂದಿನ ಸಿನಿಮಾ ಬಗ್ಗೆ ಸಾಕಷ್ಟು ಕುತೂಹಲವಿತ್ತು. ಆ ಕುತೂಹಲಕ್ಕೆ ಈಗ ತೆರೆ ಬಿದ್ದಿದೆ. 

ನೆನಪಿರಲಿ ಪ್ರೇಮ್‌ಗೆ 25ರ ಸಂಭ್ರಮ

ಮತ್ತೆ ತೆರೆ ಮೇಲೆ ಬರುತ್ತಿದ್ದಾರೆ ಐಂದ್ರಿತಾ ರೈ. ನೆನಪಿರಲಿ ಪ್ರೇಮ್ ಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಪ್ರೇಮ್ ಅಭಿನಯದ 25 ನೇ ಸಿನಿಮಾ ಪ್ರೇಮಂ ಪೂಜ್ಯಂ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. 

ರಜಿನಿಕಾಂತ್ 'ದರ್ಬಾರ್'ಗೆ ರಾಜ್‌ ಪುತ್ರ ವಿಲನ್?

ಪ್ರೇಮಂ ಪೂಜ್ಯಂ ಪ್ರೇಮ್ ಹಾಗೂ  ಐಂದ್ರಿತಾಗೆ ಜೊತೆಯಾಗಿ ನಟಿಸುತ್ತಿರುವ ಮೂರನೇ ಸಿನಿಮಾ. ಮೊದಲು ಅತಿರೂಪ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ನಂತರ ಚೌಕ ಚಿತ್ರದಲ್ಲಿ ಒಟ್ಟಾಗಿ ನಟಿಸಿದ್ದರು. ಈಗ ಪ್ರೇಮಂಪೂಜ್ಯಂ ನಲ್ಲಿ ಮತ್ತೆ ಒಂದಾಗಿದ್ದಾರೆ. 

ಪ್ರೇಮ್ 25 ನೇ ಸಿನಿಮಾ ಉಳಿದ ಸಿನಿಮಾಗಳಿಗಿಂತ ಕೊಂಚ ಢಿಪರೆಂಟ್. ಹೊಸ ನಿರ್ದೇಶಕ ರಾಘವೇಂದ್ರ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಪ್ರೇಮ್ ನಾಲ್ಕು ಶೇಡ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.