Asianet Suvarna News Asianet Suvarna News

'ಬನಾರಸ್' ಚಿತ್ರಕ್ಕೆ ಹಿಂದೂ ಸಂಘಟನೆಗಳ ವಿರೋಧ; ತಂದೆಯ ಕಾರಣಕ್ಕಾದ್ರೆ ನನಗೆ ಸಂಬಂಧವಿಲ್ಲ ಎಂದ ಝೈದ್ ಖಾನ್

ಝೈದ್ ಖಾನ್, ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿದ್ದರು.  ಈ ವೇಳೆ ಕನ್ನಡ ಪರ ಹೋರಾಟಗಾರರು ಹಾಗೂ ಇತರ ಕೆಲವು ಸಂಘಟನೆಗಳು ಸಹ ಜೊತೆಯಲ್ಲಿದ್ದರು. ಝೈದ್ ಖಾನ್, ಸಿಎಂ ಬಳಿ ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆ ಜೊತೆಗೆ ನಾಡಗೀತೆಯನ್ನು ಹಾಕುವಂತೆ ಮನವಿ ಮಾಡಿದರು. 

zaid khan meets cm basavaraj bommai for invite to watch Banaras film sgk
Author
First Published Oct 1, 2022, 1:44 PM IST

ಬನಾರಸ್ ಸ್ಯಾಂಡಲ್ ವುಡ್‌ನಲ್ಲಿ ರಿಲೀಸ್‌ಗೆ ಸಿದ್ಧವಾಗಿರುವ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ. ಜಮೀರ್ ಅಹಮ್ಮದ್ ಪುತ್ರ ಝೈದ್ ಖಾನ್ ನಾಯಕನಾಗಿ ನಟಿಸಿರುವ ಮೊದಲ ಸಿನಿಮಾ. ಚೊಚ್ಚಲ ಸಿನಿಮಾದಲ್ಲೇ ಝೈದ್ ಖಾನ್ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮಿಂಚಲು ಸಜ್ಜಾಗಿದ್ದಾರೆ. ಬನಾರಸ್ ಖ್ಯಾತ ನಿರ್ದೇಶಕ ಜಯತೀರ್ಥ ಅವರ ಸಾರಥ್ಯದಲ್ಲಿ ಮೂಡಿಬಂದಿದೆ. ಈಗಾಗಲೇ ಟ್ರೈಲರ್ ಮತ್ತು ಹಾಡುಗಳ ಮೂಲಕ ಸದ್ದು ಮಾಡುತ್ತಿರುವ ಬನಾರಸ್ ಸಿನಿಮಾಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಅಂದಹಾಗೆ ಸಿನಿಮಾ ನವೆಂಬರ್ 4ರಂದು ಅದ್ದೂರಿಯಾಗಿ ರಿಲೀಸ್ ಆಗುತ್ತಿದೆ. 

ಇತ್ತೀಚಿಗಷ್ಟೆ ಝೈದ್ ಖಾನ್, ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿದ್ದರು. ಈ ವೇಳೆ ಕನ್ನಡ ಪರ ಹೋರಾಟಗಾರರು ಹಾಗೂ ಇತರ ಕೆಲವು ಸಂಘಟನೆಗಳು ಸಹ ಜೊತೆಯಲ್ಲಿದ್ದರು. ಸಿಎಂ ಬಳಿ ಝೈದ್ ಖಾನ್ ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆ ಜೊತೆಗೆ ನಾಡಗೀತೆಯನ್ನು ಹಾಕುವಂತೆ ಮನವಿ ಮಾಡಿದರು. ಬಳಿಕ ಸಿಎಂ ಅವರನ್ನು ನವೆಂಬರ್ 4ರಂದು ರಿಲೀಸ್ ಆಗುತ್ತಿರುವ ಬನಾಸರ್ ಚಿತ್ರ ವೀಕ್ಷಿಸುವಂತೆ ಆಹ್ವಾನ ನೀಡಿದರು.  
 
ಸಿಎಂ ಭೇಟಿ ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಝೈದ್ ಖಾನ್, 'ಸಿಎಂ ಬೊಮ್ಮಾಯಿ ಅವರನ್ನು ಕನ್ನಡ ಪರ ಹೋರಾಟಗಾರರು, ಸಾಹಿತಿಗಳು, ದಲಿತ ಸಂಘಟನೆಗಳ ಜೊತೆಗೆ ಭೇಟಿ ಮಾಡಿದ್ದೇನೆ. ಒಬ್ಬ ಕಲಾವಿದನಾಗಿ ಸಿಎಂ ಅವರನ್ನು ಭೇಟಿ ಮಾಡಿ ಮನವಿಯೊಂದನ್ನು ಮಾಡಿದ್ದೇನೆ. ಸಿನಿಮಾ ಥಿಯೇಟರ್ ಗಳಲ್ಲಿ ರಾಷ್ಟ್ರಗೀತೆಯನ್ನು ಹಾಕಲಾಗುತ್ತದೆ, ಅದೇ ರೀತಿ ನಮ್ಮ ನಾಡಗೀತೆಯನ್ನೂ ಚಿತ್ರಮಂದಿರಗಳಲ್ಲಿ ಹಾಕಬೇಕೆಂದು ಮನವಿ ಮಾಡಿದ್ದೇವೆ' ಎಂದು ಹೇಳಿದರು. 

ಇನ್ನು'ನವೆಂಬರ್ 4 ರಂದು ಬನಾರಸ್ ಸಿನಿಮಾ ರಿಲೀಸ್ ಆಗುತ್ತಿದೆ. ನನ್ನ ಮೊದಲ ಸಿನಿಮಾ ಬನಾರಸ್. ಬನಾರಸ್ ಸಿನಿಮಾ ವೀಕ್ಷಣೆಗೆ ಸಿಎಂ ಅವರನ್ನು ಆಹ್ವಾನ ನೀಡಿದ್ದೇನೆ' ಎಂದರು. 

Banaras: ಚಿತ್ರರಂಗಕ್ಕೆ ಬರುವುದು ತಂದೆಗೆ ಇಷ್ಟಇರಲಿಲ್ಲ: ಝೈದ್‌ ಖಾನ್‌

ಇದೇ ಸಮಯದಲ್ಲಿ ಚಿತ್ರಕ್ಕೆ ಹಿಂದೂ ಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸುತ್ತಿರುವ ಬಗ್ಗೆಯೂ ಪ್ರತಿಕ್ರಿಯೆ ನೀಡಿದರು. 'ಸಂಘಟನೆಗಳು ಯಾಕೆ ವಿರೋಧ ಮಾಡುತ್ತಿವೆ ಅಂತ ಗೊತ್ತಿಲ್ಲ. ನನಗೂ ಅವರ ವಿರೋಧಕ್ಕೂ ಸಂಬಂಧವಿಲ್ಲ. ನಾನಾಯ್ತು, ಸಿನಿಮಾ ಇಂಡಸ್ಟ್ರಿ ಆಯ್ತು ಅಂತ ಇದ್ದೇನೆ. ನಮ್ಮ ತಂದೆ ಜಮೀರ್ ಅಹಮ್ಮದ್ ಅನ್ನೋ ಕಾರಣಕ್ಕಾಗಿ ವಿರೋಧಿಸುತ್ತಿದ್ರೆ ಅದಕ್ಕೂ ನನಗೂ ಸಂಬಂಧ ಇಲ್ಲ. ಏನೇ ವಿರೋಧ ಬಂದ್ರೂ ಎರಡೇ ಪರಿಣಾಮ ಆಗೋದು, ಚಿತ್ರ ಗೆಲ್ಲಬಹುದು ಅಥವಾ ಸೋಲಬಹುದು ಅಷ್ಟೇ ಆಗೋದು. ಅನಗತ್ಯವಾಗಿ ವಿರೋಧ ಮಾಡ್ತಿರೋದು ಸರಿಯಲ್ಲ' ಎಂದು ಹೇಳಿದರು.

ಯಶ್- ಸುದೀಪ್‌ ಮರ್ಸಿಡಿಸ್‌ ಬೆಂಜ್ ನಾನು ಕೇವಲ ಮಾರುತಿ ವ್ಯಾನ್: ಝೈದ್ ಖಾನ್

ಬನಾರಸ್ ಸಿನಿಮಾ ಬಗ್ಗೆ 

ಬನಾರಸ್ ಸಿನಿಮಾ ಝೈದ್ ಖಾನ್ ನಾಯಕನಾಗಿ ನಟಿಸಿದ್ರೆ ನಾಯಕಿಯಾಗಿ ಸೋನಲ್ ಮೊಂಥೆರೋ ನಾಯಕಿಯಾಗಿ ಮಿಂಚಿದ್ದಾರೆ. ಇತ್ತೀಚಿಗಷ್ಟೆ ಸಿನಿಮಾದ ಟ್ರೈಲರ್ ಅದ್ದೂರಿಯಾಗಿ ರಿಲೀಸ್ ಆಗಿದೆ. ಕ್ರೇಜಿ ಸ್ಟಾರ್ ರವಿಚಂದ್ರನ್ ಮತ್ತು ಬಾಲಿವುಡ್ ಸ್ಟಾರ್ ಅರ್ಬಾಜ್ ಖಾನ್ ಇಬ್ಬರು ವಿಶೇಷ ಅತಿಥಿಯಾಗಿ ಬಂದು ಟ್ರೈಲರ್ ರಿಲೀಸ್ ಮಾಡಿ ಝೈದ್ ಖಾನ್ ಮತ್ತು ತಂಡಕ್ಕೆ ವಿಶ್ ಮಾಡಿದರು. ಸದ್ಯ ಹಾಡು ಮತ್ತು ಟ್ರೈಲರ್ ಮೂಲಕ ಗಮನ ಸೆಳೆಯುತ್ತಿರುವ ಬನಾಸರ್ ಸಿನಿಮಾ ಹೇಗಿದೆ ಎನ್ನುವ ಕುತೂಹಲಕ್ಕೆ ತೆರೆಬೀಳಲಿದೆ. 

Follow Us:
Download App:
  • android
  • ios