ಸಯೇಶಾ ಹಾಗೂ ಆರ್ಯ ಹೈದ್ರಾಬಾದ್ ನಲ್ಲಿ ಮಾರ್ಚ್ 9 ರಂದು ಸಂಗೀತ ಕಾರ್ಯಕ್ರಮ ಹಮ್ಮಿಕೊಂಡಿದ್ದು ಇಂದು ಖಾಸಗಿ ಹೋಟೆಲ್ ವೊಂದರಲ್ಲಿ ಮದುವೆ ಆಗುತ್ತಿದ್ದಾರೆ.

 

ಅಂತರ ಎಷ್ಟು ಗೊತ್ತಾ? ನಿಜವಾದ ಪ್ರೀತಿಗೆ ವಯಸ್ಸಿನ ಹಂಗಿಲ್ಲ ಅನ್ನುವುದು ಇವರ ವಿಚಾರದಲ್ಲಿ ಸಾಬೀತು ಮಾಡಿದ್ದಾರೆ. ಸಯೇಶಾ ಇನ್ನು 21 ವರ್ಷದ ಹುಡುಗಿ ಹಾಗೂ ಆರ್ಯ 38 ವರ್ಷದವ. ಇವರಿಬ್ಬರಿಗೂ 17 ವರ್ಷ ವಯಸ್ಸಿನ ಅಂತರವಿದೆ.

ಗೊಂಬೆಯಂಥ ಈ ನಟಿ 'ಯುವರತ್ನ' ಚಿತ್ರಕ್ಕೆ ನಾಯಕಿ!

ಮುಂಬೈ ಮೂಲದ ಸಯೇಶಾ ತಮಿಳಿನ ’ಅಖಿಲ್’ ಚಿತ್ರದ ಮೂಲಕ ನಾಯಕಿ ಆಗಿ ಸಿನಿಮಾ ರಂಗಕ್ಕೆ ಕಾಲಿಟ್ಟರು. ಇದಾದ ನಂತರ ಬಾಲಿವುಡ್ ನಲ್ಲಿ ಅಜಯ್ ದೇವಗನ್ ಜೋಡಿ ಆಗಿ ’ಶಿವಾ’ ಚಿತ್ರ ಮಾಡಿದರು. ಈಗ ಸ್ಯಾಂಡಲ್ ವುಡ್ ನಲ್ಲಿ ಪುನೀತ್ ರಾಜ್ ಕುಮಾರ್ ಜೊತೆ ಯುವರತ್ನ ಮಾಡುತ್ತಿದ್ದಾರೆ.