Asianet Suvarna News Asianet Suvarna News

ಯಶಸ್ಸಿನ ಸಂಭ್ರಮದಲ್ಲಿ ಲಂಕೆ!

ಪ್ರೇಕ್ಷಕರಿಗೆ ಧನ್ಯವಾದ ಹೇಳಿದ ಲಂಕೆ ಚಿತ್ರತಂಡ. ಅಭಿಮಾನಿಗಳು ತೋರಿಸಿದ ಪ್ರೀತಿಗೆ ನಾನು ಋಣಿ ಎಂದ ನಟ. 
 

Yogesh Krishi Thapanda Lanke film team thanks Kannada cinema lovers for success vcs
Author
Bangalore, First Published Sep 23, 2021, 10:20 AM IST
  • Facebook
  • Twitter
  • Whatsapp

ಕೊರೋನಾ ಸಂದರ್ಭದಲ್ಲಿ ಸಿನಿಮಾಗಳ ಯಶಸ್ಸು ಕುರಿತು ಮಾತನಾಡುವುದೇ ಕಷ್ಟಎಂದುಕೊಳ್ಳುತ್ತಿರುವಾಗ ‘ಲಂಕೆ’ ಸಿನಿಮಾ ಯಶಸ್ಸಿನ ಸಂಭ್ರಮದಲ್ಲಿದೆ. ಗಣಪತಿ ಹಬ್ಬದ ಅಂಗವಾಗಿ ದೊಡ್ಡ ಮಟ್ಟದಲ್ಲಿ ಚಿತ್ರಮಂದಿರಗಳಿಗೆ ಪ್ರವೇಶಿಸಿದ ಈ ಚಿತ್ರಕ್ಕೆ ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ಬರುತ್ತಿದೆ. ತಮ್ಮ ಚಿತ್ರದ ಈ ಗೆಲುವನ್ನು ಹೇಳಿಕೊಳ್ಳಲು ಚಿತ್ರತಂಡ ಇತ್ತೀಚೆಗೆ ಮಾಧ್ಯಮಗಳ ಮುಂದೆ ಬಂತು.

ಮೊದಲಿಗೆ ಚಿತ್ರತಂಡ ಪ್ರೇಕ್ಷಕರಿಗೆ ಧನ್ಯವಾದ ಸಲ್ಲಿಸಿತು. ‘ನಮ್ಮ ಸಿನಿಮಾ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿರುವುದಕ್ಕೆ ಮುಖ್ಯ ಕಾರಣ ಪ್ರೇಕ್ಷಕರು. ಈ ಯಶಸ್ಸು ಅವರಿಗೆ ಸಲ್ಲಬೇಕು. ಮೊದಲ ವಾರದಲ್ಲೇ ನೂರು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದ ಈ ಸಿನಿಮಾ, ಈಗಲೂ ಅಷ್ಟೇ ಚಿತ್ರಮಂದಿರಗಳಲ್ಲಿ ಪ್ರದರ್ಶನ ಆಗುತ್ತಿದೆ. ಉತ್ತಮ ಗಳಿಕೆ ಮಾಡುತ್ತಿದೆ ಎಂದು ವಿತರಕರು ತಿಳಿಸಿದ್ದಾರೆ. ನಿರ್ದೇಶಕನಾಗಿ ನಾನು ಒಳ್ಳೆಯ ಸಿನಿಮಾ ಮಾಡಿದ್ದೇನೆಂಬ ನಂಬಿಕೆ ಮತ್ತು ಖುಷಿ ಮೂಡುತ್ತಿದೆ’ ಎಂದು ನಿರ್ದೇಶಕ ರಾಮ್‌ಪ್ರಸಾದ್‌ ಹೇಳಿಕೊಂಡರು.

Yogesh Krishi Thapanda Lanke film team thanks Kannada cinema lovers for success vcs

ಸಿನಿಮಾ ಬಿಡುಗಡೆ ನಂತರ ನಟ ಯೋಗೀಶ್‌ ಹಲವು ಚಿತ್ರಮಂದಿರಗಳಿಗೆ ಭೇಟಿ ನೀಡಿದ್ದಾರೆ. ಅಲ್ಲಿ ಪ್ರೇಕ್ಷಕರು ತೋರಿದ ಪ್ರೀತಿಗೆ ಅವರು ಫಿದಾ ಆಗಿದ್ದಾರೆ. ‘ಸಿನಿಮಾ ಬಿಡುಗಡೆಯಾದ ಮರುದಿನ ಚಿತ್ರಮಂದಿರಗಳಿಗೆ ಹೋಗಿದ್ದೆ. ಅಭಿಮಾನಿಗಳು ಹಾಗೂ ಪ್ರೇಕ್ಷಕರು ತೋರಿದ ಪ್ರೀತಿಗೆ ನಾನು ಋುಣಿ’ ಎಂದು ಯೋಗೀಶ್‌ ಹೇಳಿದರು.

ಒಳ್ಳೆಯ ಸಿನಿಮಾವನ್ನು ಕನ್ನಡಿಗರು ಕೈ ಬಿಡಲ್ಲ: ರಾಮಪ್ರಸಾದ್‌

ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿರುವ ಶರತ್‌ ಲೋಹಿತಾಶ್ವ, ಡ್ಯಾನಿ ಕುಟ್ಟಪ್ಪ, ಪ್ರಶಾಂತ್‌ ಸಿದ್ದಿ ಚಿತ್ರದ ಯಶಸ್ಸಿನ ಕುರಿತು ಹೇಳಿಕೊಂಡರು. ಚಿತ್ರದ ನಿರ್ಮಾಪಕರಾದ ಪಟೇಲ್‌ ಶ್ರೀನಿವಾಸ್‌, ಸುರೇಖಾ ರಾಮಪ್ರಸಾದ್‌ ಇದ್ದರು.

Follow Us:
Download App:
  • android
  • ios