ರಮೇಶ್‌ ರೆಡ್ಡಿ ನಂಗ್ಲಿ ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ಗಣೇಶ್‌ ಜೊತೆಗೆ ಲೂಸಿಯಾ ಪವನ್‌ ಕುಮಾರ್‌, ದಿಗಂತ್‌ ನಟಿಸಲಿದ್ದಾರೆ. ಶರ್ಮಿಳಾ ಮಾಂಡ್ರೆ, ಸಂಯುಕ್ತಾ ಮೆನನ್‌, ನಿಶ್ವಿಕಾ ನಾಯ್ಡು, ವೈಭವಿ ಶಾಂಡಿಲ್ಯಾ ಅವರು ಚಿತ್ರದಲ್ಲಿ ನಾಯಕಿಯರಾಗಿ ಮಿಂಚಲಿದ್ದಾರೆ. ಚಿತ್ರಕ್ಕೆ ಶೇ.60 ಭಾಗ ಶೂಟಿಂಗ್‌ ಆಗಲೇ ಮುಗಿದಿದೆ. ಉಳಿದ ಚಿತ್ರೀಕರಣ ಯೂರೋಪ್‌ನ ಜಾರ್ಜಿಯಾದಲ್ಲಿ ಮಾಡಲು ಪ್ಲಾನ್‌ ಮಾಡಿಕೊಂಡಿದ್ದಾರೆ. 

ಕುದುರೆಮುಖದಲ್ಲಿ 'ಗಾಳಿಪಟ' ಹಾರಿಸಿದ ಗಣೇಶ್-ದಿಗಂತ್-ಪವನ್! 

ಈ ಮೂಲಕ ಲಾಕ್‌ಡೌನ್‌ ನಂತರ ಕನ್ನಡ ಸಿನಿಮಾವೊಂದು ವಿದೇಶದಲ್ಲಿ ಚಿತ್ರೀಕರಣ ಮಾಡಿಕೊಳ್ಳುವತ್ತ ಮುಖ ಮಾಡಿದೆ. ಜನವರಿ ಕೊನೆಯ ವಾರ ಅಥವಾ ಫೆಬ್ರವರಿ ಮೊದಲ ವಾರದ ಹೊತ್ತಿಗೆ ‘ಗಾಳಿಪಟ 2’ ಚಿತ್ರಂಡ ಜಾರ್ಜಿಯಾ ಪ್ರವೇಶಿಸಲಿದೆ. ಈ ಹಿಂದೆಯೂ ವಿದೇಶಕ್ಕೆ ಚಿತ್ರತಂಡ ಹಾರುವ ಪ್ಲಾನ್ ಮಾಡಿತ್ತು. ಆದರೆ ಕೊರೋನಾ ಸೋಂಕು ಹಾಗೂ ಟೂರಿಸ್ಟ್‌/ಶೂಟಿಂಗ್ ಮಾರ್ಗಸೂಚಿ ಅನ್ವಯ ಪ್ರಯಾಣಕ್ಕೇ ಬ್ರೇಕ್ ಬಿದ್ದಿತ್ತು. 

ಗಾಳಿಪಟ-1 ಚಿತ್ರವನ್ನು ಮಲೆನಾಡು ಭಾಗಗಳಲ್ಲಿ ಚಿತ್ರೀಕರಣ ಮಾಡಲಾಗಿತ್ತು. ಸಿನಿಮಾ ಹಿಟ್‌ ಆಗಲು ಸ್ಥಳದ ಮಹಿಮೆ ಹಾಗೂ ಸಾಂಗ್‌ ಕಾರಣ ಎನ್ನಬಹುದು. ಭಾಗ 2 ಕೂಡ ಡಿಫರೆಂಟ್ ಆಗಿರಬೇಕೆಂದು, ಯೋಗರಾಜ್‌ ಭಟ್‌ ಬಹುತೇಕ ಚಿತ್ರೀಕರಣವನ್ನು ಕುದುರೆಮುಖದಲ್ಲಿ ಮಾಡಿದ್ದಾರೆ. ಚಿತ್ರದಲ್ಲಿ ನಿರ್ದೇಶಕ ಪವನ್ ಯಂಗ್‌ ಆಗಿ ಕಾಣಿಸಬೇಕೆಂದು ಮುವಾಯ್ ಥಾಯ್ ಅಭ್ಯಾಸ ಮಾಡಿದ್ದಾರೆ. ಗಣೇಶ್ ಹಾಗೂ ದೂದ್‌ ಪೇಡಾ ದಿಗಂತ್ ಕಾಂಬಿನೇಷ್‌ ಆನ್‌ ಸ್ಕ್ರೀನ್‌ನಲ್ಲಿ ಎಂದೆಂದಿಗೂ ಹಿಟ್‌. ಮುಂಗಾರು ಮಳೆ-1ರಲ್ಲಿ ಈ ಜೋಡಿ ಮಾಡಿದ ಕಮಾಲ್ ಇನ್ನೂ ಯಾರ ಮನಸ್ಸಿಂದಲೂ ಮಾಸಿಲ್ಲ.

'ಗಾಳಿಪಟ 2'ಗೆ ನಾಯಕಿಯರು ಬದಲಾದರು!