Asianet Suvarna News Asianet Suvarna News

ಯೋಧನ ಪಾತ್ರದಲ್ಲಿ ಯಶ್; 'ವಿರಾಟಪರ್ವ' ಟೀಸರ್‌ ಬಿಡುಗಡೆ!

ಯೋಧನ ಪಾತ್ರ​ದಲ್ಲಿ ಯಶ್‌ ಶೆಟ್ಟಿಅವ​ರನ್ನು ತೋರಿ​ಸಿ​ರುವ ‘ವಿರಾ​ಟ​ಪ​ರ್ವ’ ಚಿತ್ರದ ಟೀಸರ್‌ ಬಿಡು​ಗಡೆ ಆಗಿದೆ.

Yash shetty kannada film  Virataparva official teaser
Author
Bangalore, First Published Mar 17, 2020, 9:35 AM IST
  • Facebook
  • Twitter
  • Whatsapp

ಎ2 ಮ್ಯೂಸಿಕ್‌ ಯೂಟ್ಯೂಬ್‌ ವಾಹಿ​ನಿ​ಯಲ್ಲಿ ಟೀಸರ್‌ ಅನಾ​ವ​ರ​ಣ​ಗೊಂಡಿದ್ದು, ಟೀಸ​ರ್‌ಗೆ ಉತ್ತ​ಮ ಪ್ರತಿ​ಕ್ರಿ​ಯೆ​ಗಳು ವ್ಯಕ್ತ​ವಾ​ಗು​ತ್ತಿವೆ.

ಡಾನ್‌ ಪಾತ್ರ​ದಲ್ಲಿ ಅರುಣ್‌ ಗೌಡ ಕಾಣಿ​ಸಿ​ಕೊಂಡಿದ್ದು, ‘ಮುದ್ದು ಮನ​ಸೇ’ ಚಿತ್ರದ ನಂತರ ಅವ​ರಿಗೆ ಈ ಸಿನಿಮಾ ಹೊಸ ಇಮೇಜ್‌ ನೀಡ​ಲಿದೆ ಎಂಬುದು ಟೀಸರ್‌ ನೋಡಿ​ದ​ವರ ಮಾತು. ಅನಂತ್‌ ಶೈನ್‌ ನಿರ್ದೇ​ಶ​ನದ ಎರ​ಡನೇ ಸಿನಿಮಾ. ಸುನೀಲ್‌ ರಾಜ್‌ ನಿರ್ಮಾಣ ಮಾಡಿದ್ದು, ವಿನಿತ್‌ ರಾಜ್‌ ಮೆನನ್‌ ಸಂಗೀತ, ಶಿವು ಬಿ ಕೆ ಕುಮಾರ್‌ ಹಾಗೂ ಶಿವ ಸೀನ ಕ್ಯಾಮೆರಾ ಚಿತ್ರ​ಕ್ಕಿದೆ. ಸಂದೀಪ್‌ ಹಾಗೂ ರಘು ಸಂಭಾ​ಷಣೆ ಬರೆ​ದಿ​ದ್ದಾರೆ.

ಇನ್ಸ್‌ಪೆಕ್ಟರ್‌ ವಿಕ್ರಂನ 'ಹೇ ಗಾಯ್ಸ್' ಹಾಡಿಗೆ ಮೆಚ್ಚುಗೆ!

‘ಪಕ್ಕಾ ಕಮ​ರ್ಷಿ​ಯಲ್‌ ಅಂಶ​ಗ​ಳಿ​ರುವ ದೊಡ್ಡ ಸಿನಿಮಾ. ಯೂಟ್ಯೂ​ಬ್‌​ನಲ್ಲಿ ಟೀಸ​ರ್‌ಗೆ ಬಂದಿ​ರುವ ಪ್ರತಿ​ಕ್ರಿ​ಯೆ​ಗ​ಳನ್ನು ನೋಡಿ​ದಾಗ ನಮ್ಮ ಶ್ರಮಕ್ಕೆ ಯಶಸ್ಸು ಸಿಗು​ತ್ತ​ದೆಂಬ ಭರ​ವಸೆ ಮೂಡಿದೆ. ವಿಶೇ​ಷ​ವಾದ ಕತೆ ಚಿತ್ರ​ದ​ಲ್ಲಿದೆ’ ಎನ್ನು​ತ್ತಾರೆ ನಿರ್ದೇ​ಶಕ ಅನಂತ್‌ ಶೈನ್‌.

Follow Us:
Download App:
  • android
  • ios