ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಸಂಪ್ರದಾಯದ ಪ್ರಕಾರ ಪುತ್ರ ಯಥರ್ವ್‌ಗೆ ಮುಡಿ ಕೊಡೋ ಶಾಸ್ತ್ರ ಮಾಡಿದ್ದಾರೆ. ಯಥರ್ವ್‌ ಹೊಸ ಲುಕ್ ಅನ್ನು ರಾಧಿಕಾ ಪಂಡಿತ್ ತಮ್ಮ ಸೋಷಿಯಲ್ ಮೀಡಿಯಾ ಪೇಜಿನಲ್ಲಿ ಶೇರ್ ಮಾಡಿಕೊಂಡಿದ್ದಾರೆ. 

ತುಂಟಿ ಐರಾ, ಸೈಲೆಂಟ್ ತಮ್ಮ; ರಾಧಿಕಾ ಪಂಡಿತ್ ಶೇರ್ ಮಾಡಿದ 'ಹೊಸ' ಫೋಟೋ! 

ಅಕ್ಟೋಬರ್ 30ರಂದು ಮೊದಲ ಹುಟ್ಟುಹಬ್ಬ ಆಚರಿಸಿಕೊಂಡ ಯಥರ್ವ್‌ಗೆ ಮನೆಯಲ್ಲಿಯೇ ಮುಡಿ ಕೊಡೋ ಕಾರ್ಯಕ್ರಮ ಮಾಡಲಾಗಿತ್ತು. ಕೊರೋನಾದಿಂದ ದೇವಾಲಯಗಳಲ್ಲಿ ಮುಡಿ ತೆಗೆಯುವುದನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ಹೀಗಾಗಿ ಮನೆಗೇ ಪುರೋಹಿತರನ್ನು ಹಾಗೂ ಕ್ಷೌರಿಕರನ್ನು ಕರೆಯಿಸಿ, ಚೌಲದ ಶಾಸ್ತ್ರ ಮಾಡಿದ್ದಾರೆ. ಕಳೆದ ವರ್ಷ ಮಾರ್ಚ್‌ನಲ್ಲಿ ಮೈಸೂರು ನಂಜನಗೂಡಿನಲ್ಲಿ ಐರಾಳ ಮುಡಿ ಕೊಟ್ಟಿತ್ತು ಯಶ್-ರಾಧಿಕಾ ಜೋಡಿ

ರಾಧಿಕಾ ಪೋಸ್ಟ್:
ಹಸಿರು ರೇಶ್ಮೆ ಶರ್ಟ್ ಹಾಗೂ ಪಂಚೆ ತೊಟ್ಟಿರುವ ಯಥರ್ವ್‌ನನ್ನು ಯಶ್‌ ಎತ್ತಿಕೊಂಡು ಮುದ್ದಾಡುತ್ತಿದ್ದಾರೆ. ಮತ್ತೊಂದು ಫೋಟೋದಲ್ಲಿ ಯಥರ್ವ್‌ ಗಾಢವಾಗಿ ಚಿಂತಿಸುತ್ತಿರುವ ಪೋಸ್‌ನಲ್ಲಿದ್ದಾನೆ. ಈ ಎರಡು ಫೋಟೋ ಶೇರ್ ಮಾಡಿಕೊಂಡ ರಾಧಿಕಾ 'Before realizing and then after' ಎಂದು ಬರೆದುಕೊಂಡಿದ್ದಾರೆ.

ರಾಧಿಕಾ ಪಂಡಿತ್‌ಗಿಂತ ಹೆಚ್ಚಾಗಿ ವೈರಲ್ ಆಗುತ್ತಿದೆ ಐರಾ ಫೋಟೋಗಳು; ಅಭಿಮಾನಿ ಬಳಗ ದೊಡ್ಡದು! 

ಈ ಹಿಂದೆ ಐರಾಳಗೆ ಮುಡಿ ಕೊಟ್ಟಾಗ ಯಶ್ ಶೇರ್ ಮಾಡಿಕೊಂಡ ಫೋಟೋದಲ್ಲಿ ಐರಾ ತಂದೆಯನ್ನು ಗುರಾಯಿಸುವ ಲುಕ್‌ ಕೊಡುತ್ತಿದ್ದಳು. 'ಬೇಸಿಗೆ ಅಂತ ಗೊತ್ತು. ಆದರಿದು ಸಮರ್ ಕಟ್ ಆಲ್ಲ, ಅಂತ ನನಗೆ ಗೊತ್ತು,' ಎಂದು ಆ ಫೋಟೋಗೆ ಕ್ಯಾಪ್ಷನ್ ಬರೆದಿದ್ದರು.