Asianet Suvarna News

ಯಶ್ ನಟನೆಯ ಕೆಜಿಎಫ್ 2 ಟೀಸರ್‌ 20 ಕೋಟಿ ವೀಕ್ಷಣೆ!

ಹೊಸ ದಾಖಲೆ ಸೃಷ್ಟಿಸಿದ ಯಶ್ ಸಿನಿಮಾದ ಟೀಸರ್. ಎಲ್ಲಿ ನೋಡಿದರೂ ರಾಕಿ ಬಾಯ್‌ಗೆ ಜೈಕಾರ. 

Yash kgf chapter 2 teaser hits 200 million views vcs
Author
Bangalore, First Published Jul 17, 2021, 3:18 PM IST
  • Facebook
  • Twitter
  • Whatsapp

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ 2 ಟೀಸರ್ ಇದೀಗ 200 ಮಿಲಿಯನ್ ವೀಕ್ಷಣೆ ದಾಖಲಿಸಿದೆ. ಈ ಮೂಲಕ ಅತ್ಯಧಿಕ ವೀಕ್ಷಣೆ ಕಂಡ ಜಾಗತಿಕ ಸಿನಿಮಾಗಳ ನಡುವೆ ಪ್ರಮುಖ ಸ್ಥಾನ ಪಡೆದುಕೊಂಡಿದೆ. ಯಶ್ ಮತ್ತು ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಸೋಷಿಯಲ್ ಮೀಡಿಯಾದಲ್ಲಿ ಈ ವಿಚಾರ ರಿವೀಲ್ ಮಾಡಿದ್ದು, ಕೆಜಿಎಫ್‌ನ ಹೊಸ ಮೈಲುಗಲ್ಲಿನ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. 

ಟಾಲಿವುಡ್‌ಗೆ ಯಶ್ ಎಂಟ್ರಿ ? ಡೈರೆಕ್ಟರ್ ಯಾರು ?

‘ನಿಮ್ಮೆಲ್ಲರ ವಿಶ್ವಾಸ, ಬೆಂಬಲದಿಂದ ನಮ್ಮ ದೈತ್ಯನನ್ನು ಸಾಟಿಯೇ ಇಲ್ಲದ ಕೆಚ್ಚೆದೆಯಿಂದ ಮುನ್ನುಗ್ಗುವಂತೆ ಮಾಡುತ್ತಿದ್ದೀರಿ,’ಎಂದು ನೀಲ್ ಟ್ವೀಟ್ ಮಾಡಿದ್ದಾರೆ. ಹೊಂಬಾಳೆ ಫಿಲಂಸ್‌ನ ವಿಜಯ್ ಕಿರಗಂದೂರು ನಿರ್ಮಾಣದ ಕೆಜಿಎಫ್ 2ನ ಈ ಹೊಸ ದಾಖಲೆ ಇದೀಗ ವೈರಲ್ ಆಗುತ್ತಿದ್ದು , ಸಿನಿಮಾದ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ. 

ಅಲ್ಲದೇ ಬೆಂಗಳೂರು ನೈಸ್ ರಸ್ತೆಯಲ್ಲಿ ಕಾರ್ ರೇಸಿಂಗ್ ಚಿತ್ರೀಕರಣ ನಡೆಯುತ್ತಿದೆ. 6 ದಿನಗಳ ಕಾಲ ಚಿತ್ರೀಕರಣ ನಡೆಯಲಿದ್ದು ಒಂದು ದಿನಕ್ಕೆ ಬರೋಬ್ಬರಿ 1 ಕೋಟಿ ರೂ. ಬಂಡವಾಳ ಹಾಕಬೇಕಿದೆ ಎಂದಿದ್ದಾರೆ. ಅಲ್ಲದೆ ಹೊರ ರಾಜ್ಯದಿಂದ ಸ್ಪೆಷಲ್ ಕಾರ್ ಡಿಸೈನ್ ಮಾಡಿಸಲಾಗಿದೆ. ಇದಾದ ನಂತರ ಸಂಜಯ್ ದತ್ ಎಂಟ್ರಿ ಸಾಂಗ್ ಚಿತ್ರೀಕರಣ ಮಾಡಲಾಗುತ್ತದೆ. ಅಧೀರನ ಎಂಟ್ರಿ ಸಾಂಗ್ ನಂತರ ಕೆಜಿಎಫ್ ಚಾಪ್ಟರ್ 2 ಸಂಪೂರ್ಣ ಚಿತ್ರೀಕರಣ ಮುಕ್ತಾಯವಾಗುತ್ತದೆ. ಟೀಸರ್‌ ಈ ಮಟ್ಟದ ದಾಖಲೆ ಮಾಡಿದೆ ಅಂದ ಮೇಲೆ ಸಿನಿಮಾ ಮತ್ತೊಂದು ಹಿಟ್ ಎಂಬ ಈಗಲೇ ಚರ್ಚೆ ಶುರುವಾಗಿದೆ.

 

Follow Us:
Download App:
  • android
  • ios