ಹಾವೇರಿ ಅಭಿಮಾನಿಯಿಂದ ₹8 ಲಕ್ಷದಲ್ಲಿ ಅಪ್ಪು ದೇಗುಲ ನಿರ್ಮಾಣ, ಸೆ.26ಕ್ಕೆ ಪತ್ನಿ ಅಶ್ವಿನಿಯಿಂದ ಅನಾವರಣ

ಯಲಗಚ್ಚ ಗ್ರಾಮದ ಡಾನ್ಸ್ ಮಾಸ್ಟರ್ ಪ್ರಕಾಶ ಮರಬದ ಅವರು ತಮ್ಮ ನೆಚ್ಚಿನ ನಟ ಪುನೀತ್ ರಾಜ್‌ಕುಮಾರ್ ಅವರಿಗೆ ದೇವಾಲಯ ನಿರ್ಮಿಸಿದ್ದಾರೆ. ಸೆಪ್ಟೆಂಬರ್ 26 ರಂದು ಅಶ್ವಿನಿ ಪುನೀತ್ ರಾಜ್‌ಕುಮಾರ್ ಉದ್ಘಾಟಿಸಲಿರುವ ಈ ದೇವಾಲಯವನ್ನು ನಿರ್ಮಿಸಲು ಪ್ರಕಾಶ ಅವರು ಕಳೆದ 6 ತಿಂಗಳಿಂದ ಚಪ್ಪಲಿ ಧರಿಸದೆ ಶ್ರಮಿಸಿದ್ದಾರೆ.

Yalagachu fan built puneeth rajkumar temple in haveri gow

ಹಾವೇರಿ (ಸೆ.2): ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಮ್ಮನ್ನಗಲಿ ಇಂದಿಗೆ ಭರ್ತಿ ಮೂರು ವರ್ಷಗಳೇ ಕಳೆದಿವೆ. ಆದರೂ ಅಭಿಮಾನಿಗಳು ಹೃದಯದಲ್ಲಿನ್ನೂ ಜೀವಂತ. ಅಪ್ಪುವನ್ನು ದಿನ ಸ್ಮರಿಸೋ, ಪೂಜಿಸೋ ಅದೇಷ್ಟೋ ಜೀವನಗಳಿವೆ. ಅವರಲ್ಲೊಬ್ಬ ಜಿಲ್ಲೆಯ  ಯಲಗಚ್ಚ ಗ್ರಾಮದ ಡಾನ್ಸ್ ಮಾಸ್ಟರ್‌ ಪ್ರಕಾಶ ಮರಬದ ಎಂಬುವರು ತಮ್ಮ ನೆಚ್ಚಿನ ನಟ ಪುನೀತ್‌ ರಾಜ್‌ಕುಮಾರ್‌ ಅವರ ದೇವಸ್ಥಾನ ಕಟ್ಟಿಸುತ್ತಿದ್ದಾರೆ. ಪ್ರಕಾಶ ಅವರ ಇಡೀ ಕುಟುಂಬ ಪುನೀತ್‌ ಅಭಿಮಾನಿಗಳಾಗಿದ್ದು, ತಮ್ಮ ಮನೆಯ ಆವರಣದಲ್ಲಿ ಸುಮಾರು ₹8 ಲಕ್ಷ ಖರ್ಚು ಮಾಡಿ ದೇವಸ್ಥಾನ ಕಟ್ಟಿಸುತ್ತಿದ್ದಾರೆ. ಅಗಡಿಯ ಕಲಾವಿದರೊಬ್ಬರು ಡಾ. ಪುನೀತ್ ರಾಜಕುಮಾರ್‌ ಅವರ ಪುತ್ಥಳಿ ನಿರ್ಮಿಸುತ್ತಿದ್ದು, ಅಂತಿಮ ಸ್ಪರ್ಶ ನೀಡುವ ಕಾರ್ಯ ಪ್ರಗತಿಯಲ್ಲಿದೆ. ಸೆ.26ಕ್ಕೆ ಈ ದೇವಾಲಯವನ್ನು ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಉದ್ಘಾಟಿಸಲಿದ್ದಾರೆ.

ನಾಲ್ವರಿಗೆ ಬೆಳಕು ನೀಡಿದ ಪುನೀತ್ ರಾಜ್: ಅಂದು ನಡೆದ ಘಟನೆ ವಿವರಿಸಿದ ಡಾ.ರೋಹಿತ್​ ಶೆಟ್ಟಿ

ಪ್ರಕಾಶ ಅವರು ಕಳೆದ ಫೆಬ್ರವರಿ ತಿಂಗಳಲ್ಲಿ ಪುನೀತ್‌ ದೇವಸ್ಥಾನ ಕಟ್ಟಿಸಲು ಆರಂಭಿಸಿದರು. ದೇವಸ್ಥಾನ ಪೂರ್ಣಗೊಳ್ಳುವ ವರೆಗೆ ಚಪ್ಪಲಿ ಹಾಕುವುದಿಲ್ಲ ಎಂದು ತಮ್ಮೊಳಗೇ ಪ್ರತಿಜ್ಞೆ ಮಾಡಿಕೊಂಡರು. ಅದರಂತೆ ಪ್ರಕಾಶ ಕಳೆದ 6 ತಿಂಗಳಿಂದ ಚಪ್ಪಲಿ ಧರಿಸದೇ ದೇವಸ್ಥಾನ ಕಟ್ಟಿಸಲು ಶ್ರಮಿಸುತ್ತಿದ್ದಾರೆ. ಪ್ರಕಾಶ ಅವರು ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತವಾಗಿ ನೃತ್ಯ ತರಬೇತಿ ನೀಡುತ್ತಿದ್ದಾರೆ. ಅಕ್ಕಪಕ್ಕದ ಬಸ್‌ ತಂಗುದಾಣಗಳಿಗೆ ತಮ್ಮದೇ ಖರ್ಚಿನಲ್ಲಿ ಸುಣ್ಣ-ಬಣ್ಣ ಬಳಿದು ಯುವಕರಿಗೆ ಮಾದರಿಯಾಗಿದ್ದಾರೆ. ಪುನೀತ್‌ ಅವರ ಆದರ್ಶದಂತೆ ತಾನು ಬದುಕಬೇಕು ಎಂಬ ಆಶಯ ಹೊಂದಿದ್ದಾರೆ.

ಬಿಗ್‌ಬಾಸ್‌ ಕನ್ನಡ 11ನೇ ಸೀಸನ್‌ ಬೆಂಕಿ ಬಿರುಗಾಳಿ, ಮೊದಲ ಪ್ರೋಮೋ ರಿಲೀಸ್‌!

 

Latest Videos
Follow Us:
Download App:
  • android
  • ios