ಬೆಂಗಳೂರು(ಜೂ. 07)  ಕನ್ನಡದ ನಟ ಚಿರಂಜೀವಿ ಸರ್ಕಾ ಅಕಾಲಿಕ ನಿಧನ ಹೊಂದಿದ್ದಾರೆ. ಅವರ ಪತ್ನಿ ಮೇಘನಾ ರಾಜ್ ಗರ್ಭಿಣಿ.ಏಪ್ರಿಲ್ ನಲ್ಲಿ ಮೇಘನಾ ತಾಯಾಗುತ್ತಿರೋ ವಿಚಾರ  ಗೊತ್ತಾಗಿತ್ತು.  ವಿಧಿಯ ಆಟ ಹೇಗಿರುತ್ತದೆ ನೋಡಿ..ಮಗುವಿನ ಮುಖ ನೋಡದೆ ಚಿರು ಚಿರನಿದ್ರೆಗೆ ಜಾರಿದ್ದಾರೆ.

"

ಮೇಘಾನ ಹೊಟ್ಟೆಯಲ್ಲಿ ಪುಟ್ಟ ಚಿರಂಜೀವಿ ಬರ್ತಿದ್ದಾನೆ ಎಂದು ನಟಿ ತಾರಾ ಹೇಳುವಾಗ ಅವರ ಕಣ್ಣುಗಳು ತುಂಬಿ ಬಂದಿದ್ದವು. 

ಗರ್ಭನಿರೋಧಕಗಳ ಆಯ್ಕೆ ನಿಮಗೆ ಗೊತ್ತಿರಲಿ

ಮೇಘನಾ ರಾಜ್ ಹಿರಿಯ ನಟ ಸುಂದರ್ ರಾಜ್ ಅವರ ಪುತ್ರಿ. ಚಿರುವನ್ನು ಮದುವೆಗಾಗಿ ಸರ್ಜಾ ಕುಟುಂಬ ಸೊಸೆಯಾಗಿದ್ದರು. ಆಟಗಾರ ಚಿತ್ರದಲ್ಲಿ ಮೇಘನಾ ಮತ್ತು ಚಿರು ಒಟ್ಟಾಗಿ ಕಾಣಿಸಿಕೊಂಡಿದ್ದರು.  
ಮೇಘನಾ ಗರ್ಭಿಣಿ ಅಂತ ತಿಳಿದು ಸಾಕಷ್ಟು ಖುಷಿ ಪಟ್ಟಿದ್ದ ಚಿರಂಜೀವಿ ಸೀಮಂತಕ್ಕೆ ಯೋಜನೆ ಹಾಕಿಕೊಂಡಿದ್ದರು. 

ಚಿರಂಜೀವಿ ಮತ್ತು ಮೇಘನಾ 2018  ರ ಮೇನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಸರ್ಜಾ ಫ್ಯಾಮಿಲಿ ಮತ್ತು ಇಡೀ ಕನ್ನಡ ಚಿತ್ರರಂಗ ಪ್ರತಿಭಾವಂತ ನಾಯಕ ನಟರೊಬ್ಬರನ್ನು ಕಳೆದುಕೊಂಡಿದೆ.