ಭೀಮ ಸಿನಿಮಾ ಯಾಕೆ ನೋಡಬೇಕು..?: ದುನಿಯಾ ವಿಜಯ್ ಏನ್ ಹೇಳ್ತಾರೆ!
ದುನಿಯಾ ವಿಜಯ್ ನಟಿಸಿ, ನಿರ್ದೇಶಿಸಿರುವ ‘ಭೀಮ’ ಚಿತ್ರಕ್ಕೆ ಸೆನ್ಸಾರ್ ಆಗಿದ್ದು, ‘ಎ’ ಸರ್ಟಿಫಿಕೇಟ್ ನೀಡಲಾಗಿದೆ. ಈ ಚಿತ್ರ ಆಗಸ್ಟ್ 9ರಂದು ಅದ್ದೂರಿಯಾಗಿ ಬಿಡುಗಡೆ ಆಗುತ್ತಿದೆ. ಈಗಾಗಲೇ ಚಿತ್ರದ ಹಾಡುಗಳು ಕ್ರೇಜ್ ಮೂಡಿಸಿವೆ.
ದುನಿಯಾ ವಿಜಯ್ ನಟಿಸಿ, ನಿರ್ದೇಶಿಸಿರುವ ‘ಭೀಮ’ ಚಿತ್ರಕ್ಕೆ ಸೆನ್ಸಾರ್ ಆಗಿದ್ದು, ‘ಎ’ ಸರ್ಟಿಫಿಕೇಟ್ ನೀಡಲಾಗಿದೆ. ಈ ಚಿತ್ರ ಆಗಸ್ಟ್ 9ರಂದು ಅದ್ದೂರಿಯಾಗಿ ಬಿಡುಗಡೆ ಆಗುತ್ತಿದೆ. ಈಗಾಗಲೇ ಚಿತ್ರದ ಹಾಡುಗಳು ಕ್ರೇಜ್ ಮೂಡಿಸಿವೆ. ಈ ಹಿನ್ನೆಲೆಯಲ್ಲಿ ನಡೆದ ‘ಭೀಮ’ ಕಾರ್ಯಕ್ರಮದ ವೇದಿಕೆಯಲ್ಲಿ ಬುಡಕಟ್ಟು ಜನರ ಹಾಡುಗಳನ್ನು ಪ್ರದರ್ಶನ ಮಾಡಲಾಯಿತು. ಜೇನು ಕುರುಬರ ಹಾಡುಗಳಿಗೆ ದುನಿಯಾ ವಿಜಯ್ ಹೆಜ್ಜೆ ಹಾಕುವ ಮೂಲಕ ಗಮನ ಸೆಳೆದರು.
ದುನಿಯಾ ವಿಜಯ್, ‘ಈ ಚಿತ್ರದ ಮೂಲಕ ಒಂದು ಸೂಕ್ಷ್ಮ ವಿಚಾರವನ್ನು ಜನರಿಗೆ ತಲುಪಿಸುವ ಪ್ರಯತ್ನ ಮಾಡುತ್ತಿದ್ದೇನೆ. ಈ ಚಿತ್ರವನ್ನು ಎಲ್ಲರೂ ನೋಡಬೇಕು. ಅದರಲ್ಲೂ ಈ ಸಿನಿಮಾ ನೋಡಿದ ಮೇಲೆ ಈ ಚಿತ್ರದಲ್ಲಿ ನಾನು ಹೇಳಲು ಹೊರಟಿರುವ ವಿಚಾರದ ಮೇಲೆ ಮಾಧ್ಯಮಗಳು ಹೆಚ್ಚು ಬೆಳಕು ಚೆಲ್ಲುವ ಮೂಲಕ ಸರ್ಕಾರದ ಗಮನ ಸೆಳೆದು, ಮನೆ ಮನೆಗೂ ಬಂದು ಕೂತಿರುವ ಈ ಸೂಕ್ಷ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ. ಸೆನ್ಸಾರ್‌ನಿಂದ ಎ ಸರ್ಟಿಫಿಕೇಟ್ ನೀಡಿದ್ದಾರೆ. ಆದರೂ ಎಲ್ಲಾ ವಯಸ್ಸಿನವರು ನೋಡಬೇಕಾದ ಕತೆ ಈ ಚಿತ್ರದಲ್ಲಿದೆ.
ವಿದ್ಯಾರ್ಥಿಗಳು, ಹದಿಹರೆಯದವರು, ಅದರಲ್ಲೂ ಹೆಣ್ಣು ಮಕ್ಕಳನ್ನು ಗಮನದಲ್ಲಿಟ್ಟುಕೊಂಡು ಮಾಡಿರುವ ಸಿನಿಮಾ ಇದು’ ಎಂದರು. ನಿರ್ಮಾಪಕ ಕೃಷ್ಣ ಸಾರ್ಥಕ್ ಹಾಗೂ ಜಗದೀಶ್ ಗೌಡ, ‘400ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ‘ಭೀಮ’ ತೆರೆಗೆ ಬರಲಿದೆ. ಸಿನಿಮಾಗಳಿಲ್ಲದೆ ಬಾಗಿಲು ಹಾಕಿರುವ 18 ಚಿತ್ರಮಂದಿರಗಳು ‘ಭೀಮ’ ಚಿತ್ರದ ಕಾರಣಕ್ಕೆ ರೀ ಓಪನ್ ಆಗುತ್ತಿವೆ. ಹೊರ ರಾಜ್ಯಗಳಲ್ಲಿ ಹಾಗೂ ಹೊರ ದೇಶಗಳಲ್ಲಿ ಸಿನಿಮಾ ತೆರೆಗೆ ಬರುತ್ತಿದೆ’ ಎಂದು ವಿವರ ನೀಡಿದರು.
ಡಾಲಿಯ ಕೋಟಿಯಲ್ಲಿ ಎಮೋಷನಲ್ ಆದ ಸಲಗ: ಧನಂಜಯ್‌ಗೂ ದುನಿಯಾ ವಿಜಿಗಿರುವ ಸಂಬಂಧವೇನು?
ಚಿತ್ರದ ನಾಯಕಿ ಅಶ್ವಿನಿ, ಸಂಭಾಷಣೆಗಾರ ಮಾಸ್ತಿ, ಸಂಗೀತ ನಿರ್ದೇಶಕ ಚರಣ್ ರಾಜ್, ಅರಸು ಅಂತಾರೆ, ಛಾಯಾಗ್ರಾಹಕ ಶಿವಸೇನಾ ಹಾಜರಿದ್ದರು. ಮಾಸ್ ಟೈಟಲ್ನಿಂದಲೇ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಸಖತ್ ಟಾಕ್ ಆಗುತ್ತಿರುವ 'ಭೀಮ' ಚಿತ್ರ ಟ್ರೇಲರ್ ಇಲ್ಲದೇ ಹಾಡುಗಳಿಂದ ಸದ್ದು ಮಾಡಿದೆ. ಬ್ಯಾಡ್ ಬಾಯ್ಸ್, ಐ ಲವ್ ಯೂ ಕಣೆ ಮತ್ತು ಡೋಂಟ್ ವರಿ ಬೇಬಿ ಚಿನ್ನಮ್ಮ ಹಾಡುಗಳ ಮೂಲಕ ಚಿತ್ರರಂಗದಲ್ಲಿ ಹೊಸ ಅಲೆ ಎಬ್ಬಿಸಿದೆ. ಈ ಮಧ್ಯೆ ಬೂಮ್ ಬೂಮ್ ಬೆಂಗಳೂರು ಎಂಬ ಹಾಡು ಪಡ್ಡೆ ಹುಡುಗರ ಹಾಟ್ ಫೇವರೆಟ್ ಆಗಿದ್ದು, ಸಖತ್ ಟ್ರೆಂಡಿಂಗ್ನಲ್ಲಿದೆ. ಈ ಹಾಡಿನ್ನು ನಾಗರಹೊಳೆ ಸಮೀಪದ ಬುಡಕಟ್ಟು ತಂಡದ 30 ಸದಸ್ಯರು ಹಾಡಿರೋದು ವಿಶೇಷ.