ಸ್ವತಃ ರಾಧಿಕಾ ಕುಮಾರಸ್ವಾಮಿಯೇ ಈ ವಿಷಯ ಹೇಳಿದ್ದಾರೆ. ನನ್ನ ಕೂದಲು ಸಿಕ್ಕಾಪಟ್ಟೆ ಉದುರುತ್ತಿತ್ತು. ಮುಖವನ್ನು ಮುಟ್ಟಲೂ ಭಯವಾಗುವಷ್ಟು ಗುಳ್ಳೆ, ಡೈರೆಕ್ಟರ್ ಕೊಟ್ಟ ಟಾರ್ಚರ್ ಅಷ್ಟಿಷ್ಟಲ್ಲ ಎಂದು ನೋವು ತೋಡಿಕೊಂಡಿದ್ದಾರೆ ರಾಧಿಕಾ ಕುಮಾರಸ್ವಾಮಿ. ಅಂಥದ್ದೇನಾಯ್ತು?
ರಾಧಿಕಾ ಕುಮಾರಸ್ವಾಮಿ ಅಂದಾಕ್ಷಣ ಆಕೆಯ ನಟನೆಗಿಂತ ಹಿನ್ನೆಲೆಯೇ ಹೆಚ್ಚಿನವರಿಗೆ ಇಂಟರೆಸ್ಟಿಂಗ್ ಅನಿಸುತ್ತದೆ. ಅವರು ಕುಡ್ಲದ ಸುಂದರಿ. ಈ ಸುಂದರಿ ಸಿನಿಮಾ ರಂಗಕ್ಕೆ ಅಡಿಯಿಟ್ಟದ್ದು 2002 ರಲ್ಲಿ. ಆ ಹೊತ್ತಿಗೆ ತೆರೆಕಂಡ 'ನಿನಗಾಗಿ' ಚಿತ್ರದ ಮೂಲಕ ಸಿನಿರಂಗ ಪ್ರವೇಶಿಸಿದರು. ನೀವು ನಂಬ್ತೀರೋ ಇಲ್ವೋ, ಆಗ ರಾಧಿಕಾ ಒಂಭತ್ತನೆಯ ತರಗತಿ ಓದುವ ಬಾಲಕಿಯಾಗಿದ್ದರು. ಆದರೆ ವಯಸ್ಸಿಗೆ ಮೀರಿದ ಅಂದಚೆಂದ, ಎಕ್ಸ್‌ಪ್ರೆಶನ್ ಆಕೆ ಸ್ಯಾಂಡಲ್‌ವುಡ್ ಪ್ರವೇಶಿಸುವಂತೆ ಮಾಡಿತು. ಕ್ಯೂಟ್ ಆಂಡ್ ಬ್ಯೂಟಿಫುಲ್ ಕುಡ್ಲದ ಸುಂದರಿ ಸ್ಯಾಂಡಲ್‌ವುಲ್‌ಗೆ ಕಾಲಿಟ್ಟದ್ದೇ ಕನ್ನಡಚಿತ್ರರಂಗ ಹೂವು ಚೆಲ್ಲಿ ಸುಂದರಿಯನ್ನ ಬರಮಾಡಿಕೊಂಡಿತು. ಈಕೆ ಕಾಲಿಟ್ಟ ತಕ್ಷಣವೇ ಐದು ಸಿನಿಮಾಗಳಲ್ಲಿ ಅವಕಾಶ ಸಿಕ್ಕಿತು. ಹದಿನಾಲ್ಕು ವರ್ಷದ ಬಾಲಕಿ ಒಂದಾದಮೇಲೊಂದು ಸಿನಿಮಾಗಳಲ್ಲಿ ಬ್ಯುಸಿ ಆದರು. ಮಂಗಳೂರಿನ ಸಾಮಾನ್ಯ ಬಂಟ ಮನೆತನದ ಈ ಹೆಣ್ಣುಮಗಳಿಗೆ ಆಗ ಏನು ಕನಸಿತ್ತೋ ಗೊತ್ತಿಲ್ಲ. ಆದರೆ ಇದೀಗ ತನಗಾದ ವಿಚಿತ್ರ ಸ್ಥಿತಿಯ ಬಗ್ಗೆ ಹೇಳಿ ರಾಧಿಕಾ ಅವರ ಅಭಿಮಾನಿಗಳ ಹೃದಯ ಬೇಯುವಂತೆ ಮಾಡಿದ್ದಾರೆ.
ಹೌದು, 'ನನಗೆ ಸಿಕ್ಕಾಪಟ್ಟೆ ಕೂದಲು ಉದುರುತ್ತಿತ್ತು. ಚರ್ಮವನ್ನು ಮುಟ್ಟಿದರೆ ಜಿಗುಪ್ಸೆ ಬರುವ ಹಾಗಾಗುತ್ತಿತ್ತು. ಚರ್ಮದ ಮೇಲೆಲ್ಲ ಬೊಬ್ಬೆ ಬಂದ ಹಾಗೆ ರ್ಯಾಶಸ್ ತುಂಬಿಕೊಂಡಿತ್ತು. ತಲೆ ಮೇಲೆ ಕೈಯಿಟ್ಟರೆ ರೋಗ ಬಂದವರಂತೆ ಕೈಗೇ ಕಿತ್ತುಕೊಂಡು ಬರುತ್ತಿದ್ದ ಕೂದಲು...' ಎಂದ ರಾಧಿಕಾ ಕುಮಾರಸ್ವಾಮಿ ಮಾತು ಇದೀಗ ಸೋಷಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ. ಅಷ್ಟಕ್ಕೂ ಈ ಬ್ಯೂಟಿಫುಲ್ ನಟಿಗೆ ಆದದ್ದಾದರೂ ಏನು ಅನ್ನೋದೇ ಇಂಟರೆಸ್ಟಿಂಗ್ ಸಂಗತಿ.
ಹಾಗೆ ನೋಡಿದರೆ ರಾಧಿಕಾ ಎಂಬ ಹೆಸರಿನಿಂದ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟು ಆಮೇಲೆ ಮಾಜಿ ಮುಖ್ಯಮಂತ್ರಿಗಳನ್ನು ಮದುವೆಯಾಗಿ, ಅವರ ಎರಡನೇ ಹೆಂಡತಿಯಾಗಿ ಬೇರೆ ಲೆವೆಲ್‌ನಲ್ಲಿ ಸುದ್ದಿಯಾದವರು. ಆ ಹೊತ್ತಿಗೆ ಚಿತ್ರರಂಗ ಮತ್ತು ರಾಜಕೀಯ ಜಗತ್ತಿನಲ್ಲಿ ತಲ್ಲಣ ಸೃಷ್ಟಿಸಿದ್ರು.
ಸದ್ಯಕ್ಕೀಗ ಅವರು ನಿರ್ಮಾಪಕಿ. ಮದುವೆ ಆದ ಮೇಲೆ ನಿರ್ಮಾಪಕಿಯಾಗಿ ರೀ ಎಂಟ್ರಿ ಕೊಟ್ಟವರು ರಾಧಿಕಾ. 2012 ರಲ್ಲಿ ತಮ್ಮ ಮೊದಲ ಕನ್ನಡ ಚಿತ್ರ ‘ಲಕ್ಕಿ’ ನಿರ್ಮಿಸಿದರು. ಲಕ್ಕಿ ಸಿನಿಮಾದಲ್ಲಿ ನಟ ಯಶ್ ಹಾಗೂ ನಟಿ ರಮ್ಯಾ ನಟಿಸಿದ್ರು. ಸಿನಿಮಾ ಕೂಡ ಹಿಟ್ ಆಯ್ತು. ಆದರೆ 2007 ರಿಂದ ಚಿತ್ರರಂಗದ ಕೆಲಕಾಲ ಗ್ಯಾಪ್ ಪಡೆದ ಅವರು 2013 ರಲ್ಲಿ ತೆರೆಕಂಡ `ಸ್ವೀಟಿ’ ಚಿತ್ರದಿಂದ ನಟಿಯಾಗಿ ಕಮ್ ಬ್ಯಾಕ್ ಮಾಡಿದರು. ಈ ಸಿನಿಮಾ ಹೇಳಿಕೊಳ್ಳುವ ಯಶಸ್ಸು ತಂದುಕೊಡಲಿಲ್ಲ. ಮತ್ತೆ ಒಂದಷ್ಟು ದಿನ ರಾಧಿಕಾ ಕುಮಾರಸ್ವಾಮಿ ಚಿತ್ರರಂಗದಿಂದ ಬ್ರೇಕ್ ತೆಗೆದುಕೊಂಡರು.
ಕನ್ನಡದ ಈ ನಟನ ಜೊತೆ ಮೇಘನಾ ರಾಜ್ ಮದುವೆ ವದಂತಿ: ಸತ್ಯಾಂಶ ಬಿಚ್ಚಿಟ್ಟ ನಟಿ!
ಆದರೆ ಇವರ ತೀರಾ ಇತ್ತೀಚಿನ ಸಿನಿಮಾ 'ಚೆನ್ನಭೈರಾದೇವಿ'. ಹಾರರ್, ಅಘೋರಿಗಳ ಸಬ್ಜೆಕ್ಟ್‌ನ ಸಿನಿಮಾ. ಮೇಲಿನ ರಾಧಿಕಾ ಮಾತು ಈ ಸಿನಿಮಾಕ್ಕೆ ಸಂಬಂಧಪಟ್ಟಂತೇ ಆಡಿದ್ದಾಗಿತ್ತು. ಆ ಹೊತ್ತಿಗೆ ರಾಧಿಕಾ ಅಘೋರಿಯಾಗಿ ಕಾಣಿಸಿಕೊಳ್ಳಬೇಕಿತ್ತು. ಮುಖ, ಮೈ, ಕೂದಲಲ್ಲೆಲ್ಲ ವಿಭೂತಿ ಹಚ್ಚಬೇಕಿತ್ತು. ಅದರಿಂದ ಕೂದಲೆಲ್ಲ ಉದುರಿ, ಚರ್ಮದಲ್ಲೆಲ್ಲ ಗುಳ್ಳೆ ಎದ್ದು ರಂಪರಾಮಾಯಣವಾಗಿತ್ತಂತೆ. ಆದರೂ ನನ್ನಂಥಾ ಕೋಮಲೆ ಮೇಲೆ ನಿರ್ದೇಶಕರಿಗೆ ಕರುಣೆಯೇ ಬರಲಿಲ್ಲ. ನಾನು ವಿಭೂತಿ ಬದಲು ಮೇಕಪ್ ಹಾಕಿಕೊಂಡರೆ ಅದನ್ನು ಅಳಿಸಿ ಮತ್ತೆ ವಿಭೂತಿ ಹಾಕಿಸಿದರು ಅಂತ ರಾಧಿಕಾ ಮೆಚ್ಚುಗೆ ಭರಿತ ಹುಸಿಮುನಿಸಿನಲ್ಲಿ ನಿರ್ದೇಶಕರ ಬಗ್ಗೆ ಮಾತನಾಡಿದ್ದು ಸೋಷಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡ್ತಿದೆ. ಆದರೆ ರಾಧಿಕಾ ದುರಾದೃಷ್ಟಕ್ಕೆ ಆ ಸಿನಿಮಾ ಅಂದುಕೊಂಡ ಯಶಸ್ಸು ಪಡೆಯಲಿಲ್ಲ. ಸದ್ಯ ರಾಧಿಕಾ ಅಜಾಗೃತ ಅನ್ನುವ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಅಪ್ಪು ಸಿನಿಮಾ ಸೀಕ್ರೆಟ್ ಹೇಳಿದ ಪುರಿ ಜಗನ್ನಾಥ್.. ಪುನೀತ್ ಸಿನಿಮಾ ಮಧ್ಯೆ ಶಿವಣ್ಣ ಬಂದಿದ್ದು ಹೇಗೆ?
