ಆಕ್ಟರ್ ಹಾಗೂ ಡಾಕ್ಟರ್ ಮದುವೆ ಸಂಭ್ರಮ ಶುರುವಾಗಿದೆ. ಡಾಲಿ ಮದುವೆ ಸೆಲೆಬ್ರೇಶನ್‌ನಲ್ಲಿ ಅವರ ಬೆಸ್ಟಿ ಅಮೃತಾ ಅಯ್ಯಂಗಾರ್ ಕಾಣಿಸ್ತಿಲ್ಲ. ಅವರ ಇನ್‌ಸ್ಟಾ ಪೋಸ್ಟ್ ಬೇರೇನೇ ಕಥೆ ಹೇಳ್ತಿದೆ.
ಡಾಲಿ ಧನಂಜಯ ಮದುವೆಯ ಸಂಭ್ರಮದಲ್ಲಿದ್ದಾರೆ. ನಾಳೆ ನಾಡಿದ್ದು ನಡೆಯೋ ಮದುವೆ ಕಾರ್ಯಕ್ರಮಕ್ಕೆ ಭರ್ಜರಿ ತಯಾರಿ ನಡೆಯುತ್ತಿದೆ. ಹಾಗೆ ನೋಡಿದರೆ ಡಾಲಿ ಪಾರ್ಟನರ್‌ನ ಸೆಲೆಕ್ಟ್ ಮಾಡಿದ್ದು, ಅವರ ಮದುವೆಯ ಪ್ಲಾನ್, ಇನ್ವಿಟೇಶನ್ ಎಲ್ಲವೂ ಯುನೀಕ್ ಅನ್ನೋ ಹಾಗೇ ಇತ್ತು. ಇನ್‌ಲ್ಯಾಂಡ್ ಲೆಟರ್ ಮಾದರಿ ವ್ಯಾಪಕ ವೈರಲ್ ಆಗಿತ್ತು. ಈ ಡಿಸೈನ್ ಅಂಚೆ ಇಲಾಖೆಗೂ ಭರ್ಜರಿ ಲಾಭ ತಂದುಕೊಟ್ಟಿದೆಯಂತೆ. 'ನಿಮ್ಮ ನಡೆಯಿಂದ ಮತ್ತೆ ಇನ್ ಲ್ಯಾಂಡ್ ಲೇಟರ್‌ಗಳಿಗೆ ಬೇಡಿಕೆ ಬಂದಿದೆ. ಜನರು ಮತ್ತೆ ಅಂಚೆ ಕಚೇರಿಯಲ್ಲಿ ಇನ್ ಲ್ಯಾಂಡ್ ಲೇಟರ್ ಕೇಳಿ ಪಡೆಯುತ್ತಿದ್ದಾರೆ. ಮದುವೆಯ ಮೂಲಕ ಮಾದರಿಯಾದ ನಿಮಗೆ ಅಭಿನಂದನೆಗಳು' ಎಂದು ಅಂಚೆ ಇಲಾಖೆ ಅಧಿಕಾರಿಗಳು ಡಾಲಿ ಧನಂಜಯ ಅವರಿಗೆ ಶುಭಕೋರಿದ್ದಾರೆ. ಅಷ್ಟೇ ಅಲ್ಲ, ಅಂಚೆ ಇಲಾಖೆ ಧನಂಜಯ್-ಧನ್ಯತಾ ಮದುವೆಗೆ ವಿಶೇಷ ಸ್ಟ್ಯಾಂಪ್ ನೀಡಿ ಶುಭಾಶಯ ತಿಳಿಸಿದೆ. ಶುಭ ವಿವಾಹ ಎಂಬ ಮುದ್ರಣದೊಂದಿಗೆ ವಿಶೇಷವಾಗಿರುವ 12 ಸ್ಟ್ಯಾಂಪ್ ಗಳನ್ನ ಉಡುಗೊರೆಯಾಗಿ ನೀಡಿದೆ. ಮೈಸೂರು ಅಂಚೆ ವಿಭಾಗದ ಅಧಿಕಾರಿಗಳು ಧನಂಜಯ್ ಅವರನ್ನು ಭೇಟಿಯಾಗಿ ಗಿಫ್ಟ್ ನೀಡಿದ್ದಾರೆ.
ಇನ್ನೊಂದೆಡೆ ಇನ್ನು ಫೆಬ್ರವರಿ 15 ಮತ್ತು 16 ರಂದು ಮೈಸೂರಿನಲ್ಲಿ ಧನಂಜಯ್ - ಧನ್ಯತಾ ಕಲ್ಯಾಣ ಅದ್ಧೂರಿಯಾಗಿ ನಡೆಯಲಿದೆ. ಈಗಾಗಲೇ ಡಾಲಿ ಹಾಗೂ ಧನ್ಯತಾ ಮನೆಯಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ಧನಂಜಯ್ ಹಾಗೂ ಧನ್ಯತಾ ಮನೆಯಲ್ಲಿ ಮದುವೆ ಶಾಸ್ತ್ರಗಳು ಶುರುವಾಗಿದೆ. ತಮ್ಮ ಕುಟುಂಬದ ಸಂಪ್ರದಾಯದಂತೆ ಅರಸೀಕೆರೆಯ ಜೇನುಕಲ್ಲು ಸಿದ್ದೇಶ್ವರ ದೇವರ ಕೆಂಡ ತುಳಿದಿದ್ದಾರೆ ವರ ಧನಂಜಯ್. ಆನಂತರ ಮನೆ ದೇವರಿಗೆ ಪೂಜೆ ನೆರವೇರಿಸಿ ಮದುವೆ ಶಾಸ್ತ್ರಗಳಲ್ಲಿ ಧನಂಜಯ್ ಭಾಗಿಯಾದರು. ಡಾಕ್ಟರ್ ಧನ್ಯತಾ ಮನೆಯಲ್ಲಿ ಮೆಹಂದಿ ಶಾಸ್ತ್ರ ಕೂಡ ನಡೆದಿದೆ. ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ವಿಷ್ಯ ಏನಪ್ಪ ಅಂದರೆ ಇವರಿಬ್ಬರ ಲವ್ವು ರಿವೀಲ್ ಆಗೋಕೂ ಮೊದಲು ಧನಂಜಯ ಜೊತೆ ಹೆಚ್ಚಾಗಿ ಕಾಣಿಸಿಕೊಳ್ತಿದ್ದವರು ಅಮೃತಾ ಅಯ್ಯಂಗಾರ್. ಆನ್‌ಸ್ಕ್ರೀನ್‌ನಲ್ಲೂ ಇವರಿಬ್ಬರ ಜೋಡಿ ಸಖತ್ ಫೇಮಸ್ ಆಗಿತ್ತು. ಆಫ್‌ಸ್ಕ್ರೀನ್‌ನಲ್ಲೂ ಇವರಿಬ್ಬರು ಸದಾ ಜೊತೆಯಾಗಿ ಕಾಣಿಸಿಕೊಳ್ತಿದ್ದರು. ಸ್ನೇಹಿತರ ಮದುವೆ ಕಾರ್ಯಕ್ರಮಗಳಲ್ಲೆಲ್ಲ ಜೊತೆಯಾಗಿ ಓಡಾಡ್ತಿದ್ದರು. ಆದರೆ ಧನಂಜಯ ಮದುವೆ ಸಂಗತಿ ಹೊರಬೀಳ್ತಿದ್ದ ಹಾಗೆ ಅಪ್ಪಿತಪ್ಪಿಯೂ ಅಮೃತಾ ಡಾಲಿ ಜೊತೆ ಕಾಣಿಸಿಕೊಂಡಿಲ್ಲ. ಅವರಿಬ್ಬರ ಫ್ರೆಂಡ್‌ಸರ್ಕಲ್‌ನವರ ಯಾವ ಕಾರ್ಯಕ್ರಮದಲ್ಲೂ ಈಕೆ ಕಾಣಿಸಿಕೊಂಡಿಲ್ಲ. ಇಲ್ಲಿ ಡಾಲಿ ಮದುವೆ ಆಗ್ತಿದ್ರೆ ಅಮೃತಾ ಇನ್‌ಸ್ಟಾ ಸ್ಟೇಟಸ್‌ನಲ್ಲಿ ವ್ಯಾಲೆಂಟೇನ್ ಡೇಯನ್ನು ಒಬ್ಬಳೇ ಆಚರಿಸುತ್ತಿರುವ ಫೋಟೋ ಪೋಸ್ಟ್ ಮಾಡಿದ್ದಾರೆ. ಡಾರ್ಲಿಂಗ್ ಕೃಷ್ಣ ಅವರ ಆನಿವರ್ಸರಿಗೂ ವಿಶ್ ಮಾಡಿದ್ದಾರೆ. ಆದರೆ ಧನಂಜಯ ಮದುವೆ ಬಗ್ಗೆ ಕಮಕ್ ಕಿಮಕ್ ಅಂದಿಲ್ಲ. ಅರಿಶಿನ ಶಾಸ್ತ್ರದಲ್ಲಿ ಸಪ್ತಮಿ ಗೌಡ ಸೇರಿದಂತೆ ಫ್ರೆಂಡ್‌ಸರ್ಕಲ್‌ನ ಹಲವರು ಭಾಗಿಯಾಗಿದ್ದಾರೆ. ಆದರೆ ಅಲ್ಲೆಲ್ಲೂ ಅಮೃತಾ ಅಯ್ಯಂಗಾರ್ ಅನ್ನೋ ಬಿಳಿ ಹುಡುಗಿ ಪತ್ತೆ ಇರಲಿಲ್ಲ.
'ಬ್ರೇಕಪ್ ಆದ ಬೇಸರಕ್ಕೆ ಬಿಕಿನಿ ಬಾಡಿ ಮಾಡಿದೆ, ಬ್ರೇಕ್ ಬೇಕು ಅಂತ ಬಾಲಿಗೆ ಹೋದೆ': Actress Namratha Gowda
ಹಾಗೆ ನೋಡಿದರೆ 'ಹೊಯ್ಸಳ' ಸಿನಿಮಾದ ಉಡುಪಿ ಹೋಟೆಲು ಹಾಡಿನ ಕೆಲವು ಸಾಲನ್ನು ಅವರು ಅಮೃತಾರನ್ನು ಮನಸ್ಸಲ್ಲಿಟ್ಟುಕೊಂಡೇ ಬರೆದಿದ್ದರು. ಟಿವಿ ಶೋದಲ್ಲಿ ಆಕೆಗೆ ಕವಿತೆಯನ್ನು ಹೇಳಿ ಪ್ರೊಪೋಸ್ ಮಾಡುವ ರೀತಿ ಕಾಣಿಸಿಕೊಂಡಿದ್ರು. ಅವರ ಆ ನಡೆ ನೋಡಿ ಖಂಡಿತಾ ಇವರಿಬ್ಬರೂ ಪ್ರೀತಿಸುತ್ತಿದ್ದಾರೆ ಎಂದು ಜನ ಮಾತಾಡಿಕೊಂಡರು.
ಸ್ಲಿಮ್ ಆಗಲು ಹೋಗಿ ಖುಷ್ಬೂ ಯಡವಟ್ಟು, ಚೆಲುವೆಯ ಸ್ಥಿತಿ ಹಲವರಿಗೆ ಚಿಂತಾಜನಕ!
ಸೋ, ಸದ್ಯ ನಮ್ಮ ಮುಂದಿರೋ ಪ್ರಶ್ನೆ ಅಂದರೆ ಡಾಲಿ ಮತ್ತು ಅಮೃತಾರ ನಡುವಿನ ಸಂಬಂಧ ಈಗ ಹೇಗಿದೆ? ಅವರು ಈಗ ಫ್ರೆಂಡ್ಸ್ ಆಗಿ ಉಳಿದಿಲ್ವಾ ಅನ್ನೋದು. ಅಮೃತಾ ಪೋಸ್ಟ್ ನೋಡಿದ್ರೆ ಇದಕ್ಕೆ ಬೇರೆಯದೇ ಉತ್ತರ ಹೊಳೆಯುತ್ತದೆ.
