ಮಹಾನ್ ಚುರುಕಿನ ಮೂಟೆ, ಚಟ್ ಪಟ ಅಂತ ಅರಳು ಹುರಿದಂತೆ ಡೈಲಾಗ್ ಒಪ್ಪಿಸುತ್ತಿದ್ದ ನಿಧಿ ಎಂಬ ಹುಡುಗಿಯ ಬಗ್ಗೆ ಹೆಚ್ಚಿನ ಡೀಟೇಲ್ಸ್ ಇಲ್ಲ. ಒಂದು ಕಾಲದಲ್ಲಿ ಸ್ಯಾಂಡಲ್ ವುಡ್ ನಲ್ಲಿ ಸಖತ್ ಹವಾ ಎಬ್ಬಿಸಿದ ಹೀರೋಯಿನ್ ಇವರು. ಕೊಡಗಿನಿಂದ ಬಂದ ಹಲವರು ಸ್ಯಾಂಡಲ್ ವುಡ್ ಮಾತ್ರವಲ್ಲ, ಅದರಾಚೆಗೂ ಫೇಮಸ್ ಆಗ್ತಾನೇ ಇದ್ದಾರೆ. ಲೇಟೆಸ್ಟಾಗಿ ಹೇಳ್ಬೇಕಂದ್ರೆ ರಶ್ಮಿಕಾ ಮಂದಣ್ಣ. ಓದೋದಕ್ಕೆ ಅಂತ ಬೆಂಗಳೂರಿಗೆ ಬಂದು, ಅಲ್ಲಿಂದ ಮಾಡೆಲಿಂಗ್ ನಲ್ಲಿ ಬೆಕ್ಕಿನ ಹೆಜ್ಜೆ ಇಟ್ಟು ಆ ಬಳಿಕ ’ಕಿರಿಕ್ ಪಾರ್ಟಿ’ ಯಲ್ಲಿ ಅವಕಾಶ ಗಿಟ್ಟಿಸಿಕೊಂಡ ಹೂ ಮೊಗದ ಚೆಲುವೆ. ಈಗ ಸುದ್ದಿ ಅವರದಲ್ಲ. ನಿಧಿ ಸುಬ್ಬಯ್ಯ ಎಂಬ ಚೂಟಿಯದು.

ನಿಧಿ ಸುಬ್ಬಯ್ಯ ಬಗ್ಗೆ ನಿಮಗೆ ಗೊತ್ತಿಲ್ಲದ ಒಂದಿಷ್ಟು ವಿಷಯಗಳೂ ಇವೆ. ಈಕೆ ರಾಷ್ಟ್ರಮಟ್ಟದ ಗೋಲ್ಡ್ ಮೆಡಲಿಸ್ಟ್. ಸೈಲಿಂಗ್ ಕ್ರೀಡೆಯಲ್ಲಿ ಚಿನ್ನದ ಪದಕ ಗೆದ್ದ ಹುಡುಗಿ. ಮೂಲತಃ ಕೊಡಗಿನವರಾದರೂ ಆಮೇಲೆ ಹೆತ್ತವರ ಜೊತೆಗೆ ಮೈಸೂರಿಗೆ ಬಂದು ನೆಲೆಸಿ ಮೈಸೂರಿನ ಹುಡುಗಿಯೂ ಆದ್ರು. ಜೊತೆಗೆ ಎನ್ ಸಿ ಸಿ ಕೆಡೆಟ್ ಆಗಿ ಬೆಸ್ಟ್ ಕೆಡೆಟ್ ಅವಾರ್ಡ್ ಅನ್ನೂ ಬಗಲಿಗೇರಿಸಿಕೊಂಡಾಕೆ. ೨೦೦೯ ರಿಂದ ಸ್ಯಾಂಡಲ್‌ವುಡ್‌ನಲ್ಲಿದ್ದಾರೆ. ’ಕೃಷ್ಣಾ ನೀ ಲೇಟಾಗಿ ಬಾರೋ’, ‘ಪಂಚರಂಗಿ’, ‘ಕೃಷ್ಣನ್ ಮ್ಯಾರೇಜ್ ಸ್ಟೋರಿ’ ಸಿನಿಮಾಗಳಲ್ಲೆಲ್ಲ ಈಕೆಯ ಅಭಿನಯ ನೋಡಿದವರು ವಾವ್ ಅಂದಿದ್ರು. ಅದ್ರಲ್ಲೂ ಪಂಚರಂಗಿ ತರಲೆ ಸುಬ್ಬಿ ಬಹುಕಾಲ ಪ್ರೇಕ್ಷಕರ ಮನದಲ್ಲಿ ಉಳಿದಳು.

ಆಮೇಲೆ ಬಾಲಿವುಡ್ ಗೂ ಹಾರಿ ಪ್ರತಿಭಾವಂತೆ ಅನಿಸಿಕೊಂಡಳು. ಆಗ ಈಕೆ ನಮ್ ದೀಪಿಕಾ ಪಡುಕೋಣೆ ಥರನೇ ಮಿಂಚ್ತಾಳೇನೋ ಅನ್ನೋ ಥರದ ಮಾತುಗಳನ್ನು ಸಾಕಷ್ಟು ಜನ ಆಡಿದ್ರು. ಏಕೆಂದರೆ ಈ ಹುಡುಗಿ ಚೆಲುವಿನ ಜೊತೆಗೆ ಟ್ಯಾಲೆಂಟ್ ನಲ್ಲೂ ಸೖ ಅನಿಸಿಕೊಂಡವಳು. ಆದರೆ ಲಕ್ ಚೆನ್ನಾಗಿರಬೇಕಲ್ವಾ, ಬಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದೇ ಕನ್ನಡದಲ್ಲಿ ಅವಕಾಶಗಳು ಕಡಿಮೆ ಆದವು. ಅತ್ತ ಬಾಲಿವುಡ್ ನಲ್ಲೂ ಅವಕಾಶ ಸಿಗಲಿಲ್ಲ. ಒಂದಿಷ್ಟು ಸಮಯ ಬಾಲಿವುಡ್ ನಲ್ಲಿದ್ದ ಈಕೆ ಒಂದಿನ ಅಲ್ಲಿಂದ ಅಮೆರಿಕಾಕ್ಕೆ ಹೋದಳು.

 

 
 
 
 
 
 
 
 
 
 
 
 
 

Ay Chashmish!! 🤓

A post shared by Nidhi Subbaiah (@nidhisubbaiah) on Aug 13, 2020 at 2:09am PDT

ಅಮೆರಿಕಾಕ್ಕೆ ಹೋದಳು ಅಂದ್ರೆ ಮದ್ವೆ ಆಗಿ ಸೆಟಲ್ ಆಗೋದಕ್ಕೆ ಹೋದಳಾ ಅಂತೆಲ್ಲ ಕೇಳ್ಬೇಡಿ. ಈ ಸುಂದರಿ ಅಲ್ಲಿಗೆ ಹೋಗಿದ್ದು ಕ್ರಾಫ್ಟ್ ಬಗ್ಗೆ ಒಂದಷ್ಟು ಕೋರ್ಸ್ ಗಳನ್ನು ಮಾಡೋದಕ್ಕೆ. ಎಲ್ಲೆಡೆ ಕೊರೋನಾ ಹಾವಳಿ ಶುರುವಾಗಿ ಲಾಕ್ ಡೌನ್ ಘೋಷಣೆಯಾಗ್ತಿರೋ ಹೊತ್ತಿಗೇ ಅಮೆರಿಕಾ ತೊರೆದು ಇಂಡಿಯಾಗೆ ಹಾರಿ ಬಂದಳು.

ಅಯ್ಯೋ! ಬರ್ತಡೇ ದಿನ ನಿಧಿ ಸುಬ್ಬಯ್ಯ ಹಿಂಗ್ಯಾಕೆ ಕಾಣಿಸಿಕೊಂಡಿದ್ದಾರೆ? 

ಈಗ ಇಲ್ಲೇ ಇದ್ದಾಳೆ ನಿಧಿ. ಇನ್ ಸ್ಟಾಗ್ರಾಮ್ ನಲ್ಲಿ ಆಗಾಗ ಫೋಟೋ ಪೋಸ್ಟ್ ಮಾಡುತ್ತಿರುತ್ತಾಳೆ. ಫೋಟೋಸ್ ನೋಡಿದರೆ ಮೊದಲಿಗಿಂತ ಒಂಚೂರು ದಪ್ಪಗಾಗಿ ಮೈ ಕೈ ತುಂಬಿಕೊಂಡಿರೋದು ಕಾಣುತ್ತೆ. ಜೊತೆಗೆ ನಾಲ್ಕು ವರ್ಷಗಳ ಹಿಂದೆ ಗತಿಸಿರೋ ತನ್ನ ಅಪ್ಪನನ್ನು ಈಕೆ ಬಹಳ ಮಿಸ್ ಮಾಡಿಕೊಳ್ತಿರೋದು ಈಕೆಯ ಪೋಸ್ಟ್ ನೋಡಿದರೇ ಗೊತ್ತಾಗುತ್ತೆ. ಒಂದು ಪೋಸ್ಟ್ ನಲ್ಲಂತೂ ಬಾಲ್ಯ ಕಾಲದ ಒಂದು ಘಟನೆಯನ್ನು ನೆನೆಸಿಕೊಂಡಿದ್ದಾಳೆ. ಈಕೆಯಲ್ಲಿ ಅಪ್ಪ ಹೇಗೆ ಧೖರ್ಯ ತುಂಬಿದರು, ಬಿದ್ದಾಗ ಸ್ವತಃ ತಾನೇ ಏಳೋದನ್ನು ಹೇಗೆ ಕಲಿಸಿದರು, ಸ್ವತಂತ್ರ ಹುಡುಗಿಯಾಗೋದಕ್ಕೆ ಹೇಗೆ ಅವಕಾಶ ಮಾಡಿಕೊಟ್ರು ಅನ್ನೋದನ್ನು ಬಾಲ್ಯದ ಘಟನೆಯೊಂದರ ಸಮೇತ ವಿವರಿಸಿದ್ದಾಳೆ. ಅದನ್ನೋದಿದಾಗ ಎಂಥವರ ಮನಸ್ಸೂ ಆರ್ದ್ರವಾಗುತ್ತದೆ.

ಒಳ್ಳೆಯ ಪಾತ್ರಗಳು ಸಿಕ್ಕರೆ ನಟನೆಯಲ್ಲೆ ಬ್ಯುಸಿ ಆಗುವೆ; ನಿಧಿ ಸುಬ್ಬಯ್ಯ 

ಸದ್ಯಕ್ಕೀಗ ಫ್ರೆಂಡ್ಸ್, ಮನೆ, ತಾನು ಕಲಿತಿರೋ ಕ್ರಾಫ್ಟ್ ವರ್ಕ್ ಗಳ ಪ್ರಯೋಗದಲ್ಲಿ ಬ್ಯುಸಿಯಾಗಿ ಹಕ್ಕಿ ಹಾಗೆ ಸ್ವಚ್ಛಂದವಾಗಿದ್ದಾಳೆ. ಅಮ್ಮ, ಅಜ್ಜಿಯರು ಜೊತೆಗಿದ್ದಾರೆ. ಅಮ್ಮನಿಗೆ ಆಗಲೇ ಅರವತ್ತಾಗಿದೆ. ಈಕೆಯ ವಯಸ್ಸು ಮೂವತ್ತೖದಾಯ್ತು, ಮದ್ವೆ ಯಾವಾಗ ಅನ್ನೋ ಪ್ರಶ್ನೆಗೆ ಈಕೆಯದು ಸ್ಮೈಲಿ ಇಮೋಜಿಯ ರಿಪ್ಲೈ ಅಷ್ಟೇ!

ವೇಶ್ಯೆ ಪಾತ್ರದಲ್ಲಿ ಮಿಂಚಲಿದ್ದಾರೆ ದಕ್ಷಿಣದ ನಟಿ..!