ಬಡತನ ಪುರುಷನನ್ನು ಬೆತ್ತಲೆ ಮಾಡಿದರೆ ಹಣ ಮಹಿಳೆಯನ್ನು....; ಅರ್ಥವಾಯ್ತಾ?

ಉಪೇಂದ್ರ ಅವರು ಸಿನಿಮಾಗಳನ್ನು ತಮ್ಮ ಮನಸ್ಸಿನಭಾವನೆಗಳನ್ನು ಹೊರಹಾಕಲು ಹಾಗೂ ಸಮಾಜದ ತಪ್ಪುಗಳನ್ನು ಎತ್ತಿ ತೋರಿಸಲು ಬಳಸಿಕೊಳ್ಳುತ್ತಾರೆ. ಪ್ರೇಕ್ಷಕರ ಮನರಂಜನೆಗಾಗಿ ರಿಯಲ್ ಸ್ಟಾರ್ ಉಪ್ಪಿ ಅವರು ಎಂದಿಗೂ ಸಿನಿಮಾ ಮಾಧ್ಯಮವನ್ನು ಬಳಸಿಕೊಳ್ಳುವುದಿಲ್ಲ. ನಮ್ಮ ಸುತ್ತಮುತ್ತಲೂ ನಡೆಯುತ್ತಿರುವ ಸಂಪ್ರದಾಯ, ಆಚಾರ-ವಿಚಾರಗಳು..

Real star Upendra UI dialog movie dialogue becomes viral in Social Media srb

ನಟ, ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ (Real Star Upendra) ಅವರ ನಿರ್ದೇಶನ ಹಾಗೂ ನಟನೆಯ ಯುಐ (UI) ಚಿತ್ರವನ್ನು ನೀವು ವೀಕ್ಷಿಸಿದ್ದರೆ ಈ ಒಂದು ಡೈಲಾಗ್ ನಿಮ್ಮ ಕಿವಿಗೂ ಬಿದ್ದಿರುತ್ತದೆ. ಹಾಗಿದ್ರೆ ಯಾವುದು? 'ಬಡತನ ಪುರುಷನನ್ನು ಬೆತ್ತಲೆ ಮಾಡಿದರೆ ಹಣ ಮಹಿಳೆಯನ್ನು ಬೆತ್ತಲೆ ಮಾಡುತ್ತದೆ' ಎಂಬ ಈ ಡೈಲಾಗ್ ಸಾಕಷ್ಟು ಕುತೂಹಲ ಹಾಗೂ ಗಮನ ಸೆಳೆಯುತ್ತದೆ. ಈ ವಾಕ್ಯಕ್ಕೆ ಶಬ್ಧಾರ್ಥಕ್ಕಿಂತ ಹೆಚ್ಚಾಗಿ ಗೂಡಾರ್ಥವೇ ಪ್ರಧಾನವಾಗಿದೆ. ಇಲ್ಲಿ 'ಬೆತ್ತಲೆ' ಎಂದರೆ ಮೂಲ ಗೂಣ ಎಂದರ್ಥವೇ ಹೊರತೂ ಬಟ್ಟೆ ಬಿಚ್ಚುವುದು ಎಂದು ಅರ್ಥವಲ್ಲ. ಆದರೆ ಕೆಲವರು 'ಹಾಗೆ' ಅರ್ಥ ಮಾಡಿಕೊಂಡರೆ ಅದು ಅವರದೇ ತಪ್ಪು, ಅಂದರೆ ಸ್ವಯಂಕೃತ ಅಪರಾಧ. 

ಇರಲಿ, ಉಪೇಂದ್ರ ಅವರು ಸಿನಿಮಾಗಳನ್ನು ತಮ್ಮ ಮನಸ್ಸಿನಭಾವನೆಗಳನ್ನು ಹೊರಹಾಕಲು ಹಾಗೂ ಸಮಾಜದ ತಪ್ಪುಗಳನ್ನು ಎತ್ತಿ ತೋರಿಸಲು ಬಳಸಿಕೊಳ್ಳುತ್ತಾರೆ. ಪ್ರೇಕ್ಷಕರ ಮನರಂಜನೆಗಾಗಿ ರಿಯಲ್ ಸ್ಟಾರ್ ಉಪ್ಪಿ ಅವರು ಎಂದಿಗೂ ಸಿನಿಮಾ ಮಾಧ್ಯಮವನ್ನು ಬಳಸಿಕೊಳ್ಳುವುದಿಲ್ಲ. ನಮ್ಮ ಸುತ್ತಮುತ್ತಲೂ ನಡೆಯುತ್ತಿರುವ ಸಂಪ್ರದಾಯ, ಆಚಾರ-ವಿಚಾರಗಳು, ಡಂಭಾಚಾರಗಳು, ಸಮಾಜದ ಓರೆಕೋರೆಗಳು ಹಾಗೂ ಇಂದು ಹೀಗಿದ್ದರೆ ಮುಂದೆ ಈ ಸಮಾಜ ಹೀಗೆ ಆಗುತ್ತದೆ ಎಂಬುದನ್ನು ಉಪೇಂದ್ರ ಅವರು ತಮ್ಮ ಸಿನಿಮಾಗಳ ಮೂಲಕ ಪ್ರೇಕ್ಷಕರ ಪಾಲಿಗೆ ಕಟ್ಟಿಕೊಡುತ್ತಾರೆ. ಆದರೆ ಅದು ಕೆಲವರಿಗೆ ರುಚಿಸಬಹುದು, ರುಚಿಸದಿರಬಹುದು.

ಅಪ್ಪನ ಮೇಲಿರೋ ಪ್ರೀತಿ ತಡೆಯೋಕಾಗ್ದೇ ಸ್ವಲ್ಪ ಜಾಸ್ತಿನೇ ಮಾತಾಡ್ಬಿಟ್ರಾ ಆಯುಷ್?

ಯುಐ ಸಿನಿಮಾ ನೋಡಿದ ಹಲವು ಪ್ರೇಕ್ಷಕರು ಅದು ಅರ್ಥವಾಗುವುದಿಲ್ಲ ಎಂದು ಹೇಳಿದರೆ ಹಲವರು ತುಂಬಾನೇ ಮೆಚ್ಚಿಕೊಂಡಿದ್ದಾರೆ. ಯಾವುದೇ ಸಂಗತಿಯಾದರೂ ಅಷ್ಟೇ, ಅರ್ಥ ಮಾಡಿಕೊಳ್ಳುವುದು ಅವರವರ ಪ್ರಬುದ್ಧತೆ ಅಂದರೆ ಮಾನಸಿಕ ಮಟ್ಟವನ್ನು ಅವಲಂಬಿಸಿರುತ್ತದೆ. ಒಂದು ಚಾಕಲೇಟ್ ಕಂಡರೆ ಮಕ್ಕಳು, ಮಧ್ಯ ವಯಸ್ಕರು ಹಾಗೂ ವೃದ್ಧರ ಮನಸ್ಸಿನಲ್ಲಿ ಮೂಡುವ ಭಾವನೆಗಳೇ ಬೇರೆ. ಅದರಂತೆ ಪ್ರತಿಯೊಬ್ಬರೂ ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ಯೋಚಿಸುತ್ತಾರೆ, ರಿಯಾಕ್ಟ್ ಮಾಡುತ್ತಾರೆ. 

ಅದೇನೇ ಇರಲಿ, ಬಡತನದಲ್ಲಿ ಪರುಷನ ನಿಜವಾದ ಸಾಮರ್ಥ್ಯ ಹೊರಬೀಳುತ್ತದೆ. ಹಾಗೇ ಶ್ರೀಮಂತಿಕೆಯಲ್ಲಿ ಮಹಿಳೆಯ ನೈಜ ಸ್ವಭಾವವೇನು ಎಂಬುದು ಬಹಿರಂಗ ಆಗುತ್ತದೆ ಎಂಬುದೇ ಈ ಹೇಳಿಕೆಯ ನಿಜವಾದ ಅರ್ಥ. ಇಲ್ಲಿ 'ಬೆತ್ತಲೆ' ಎಂದರೆ ನಿಜವಾದ ಮುಖ ಅಥವಾ ಮುಖವಾಡವಿಲ್ಲದ ಮುಖ ಎಂದರ್ಥ. ನಟ-ನಿರ್ದೇಶಕ ಉಪೇಂದ್ರ ಅವರು ತಮ್ಮ ಮೊದಲ ಸಿನಿಮಾದಿಂದಲೂ ಜನರಿಗೆ ತಮ್ಮ ಅಥವಾ ಸಮಾಜದ ನಿಜವಾದ ಮುಖ ದರ್ಶನ ಮಾಡಿಸುವ ಪ್ರಯತ್ನ ಮಾಡುತ್ತಲೇ ಬಂದಿದ್ದಾರೆ. ಅದು ಈ ಯುಐ ಸಿನಿಮಾದಲ್ಲೂ ಮುಂದುವರಿದಿದೆ ಅಷ್ಟೇ. 

'ಯುಐ' ಬಗ್ಗೆ ಇವ್ರ ವಿಮರ್ಶೆ ಕೇಳಿದ್ರೆ ನೋಡೋದು ಬೇಡ ಅಂದ್ಕೊಂಡಿದ್ರೂ ನೀವು ಹೋಗ್ತೀರಾ!

Latest Videos
Follow Us:
Download App:
  • android
  • ios