ಸ್ಯಾಂಡಲ್‌ವುಡ್ ಕ್ರಿಯೆಟಿವ್ ನಿರ್ದೇಶಕ, ಕಿರಿಕ್ ಹುಡುಗ ರಕ್ಷಿತ್ ಶೆಟ್ಟಿ ಬಹು ನಿರೀಕ್ಷಿತ  'ಅವನೇ ಶ್ರೀಮನ್ನಾರಾಯಣ' ಚಿತ್ರ ಇದೇ ತಿಂಗಳ 27 ಕ್ಕೆ ರಿಲೀಸ್ ಆಗಲಿದೆ.  

ಅಬ್ಬಬ್ಬಾ! ಇದು ರೀಲಾ, ರಿಯಲ್ಲಾ? ಅರ್ಜುನ್‌-ಸ್ನೇಹ ಲವ್‌ ಸ್ಟೋರಿ ಕೇಳಿದ್ದೀರಾ?

ಈಗಾಗಲೇ ಟ್ರೇಲರ್ ಹಾಗೂ ಟೀಸರ್ ಗಮನ ಸೆಳೆದಿದೆ.  ಪ್ರಮೋಶನ್ ಕೆಲಸವೂ ಭರ್ಜರಿಯಾಗಿಯೇ ಇದೆ.  ಪ್ರಮೋಶನ್‌ಗೆ ಗಿಮಿಕ್‌ಗಾಗಿ 'ಅವನೇ ಶ್ರೀಮನ್ನಾರಾಯಣ' ತಂಡ ಒಂದು ಸ್ಪರ್ಧೆ ಏರ್ಪಡಿಸಿದೆ.  ಈಗೀಗ ಪ್ರಮೋಶನ್ ಗಿಮಿಕ್ ಆಗಿ ವೀಕ್ಷಕರಿಗೆ ಸ್ಪರ್ಧೆ ಏರ್ಪಡಿಸಿ ಅವರು ಹೆಚ್ಚೆಚ್ಚು ಭಾಗವಹಿಸುವಂತೆ ಮಾಡುವುದು. ಅದರಂತೆ ರಕ್ಷಿತ್ ಮತ್ತು ತಂಡ ಅದೇ ಕೆಲಸಕ್ಕೆ ಮುಂದಾಗಿದೆ.

 

ಚಿತ್ರದ ಟ್ರೇಲರ್‌ನಲ್ಲಿ ಬರುವ 5 ಸಂಖ್ಯೆಗಳನ್ನು ಜೋಡಿಸಿ ಒಂದು ಸರಿಯಾದ ಸಂಖ್ಯೆ ಮಾಡಬೇಕು. ಸರಿಯಾಗಿ ಮಾಡಿದ ಲಕ್ಕಿ ವಿನ್ನರ್‌ಗೆ ಕ್ಯಾಶ್ ಪ್ರೈಸ್ ಸಿಗಲಿದೆ. 

ಅವನೇ ಶ್ರೀಮನ್ನಾರಾಯಣದಲ್ಲಿ ರಕ್ಷಿತ್ ಶೆಟ್ಟಿಗೆ ಶಾನ್ವಿ ಶ್ರೀವಾಸ್ತವ್ ನಾಯಕಿಯಾಗಿ ನಟಿಸಿದ್ದಾರೆ. ರಕ್ಷಿತ್ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಕ್ಷಿತ್ ಸಿನಿಮಾ ಎಂದರೆ ಸಾಕು ಅಲ್ಲಿ ಏನಾದರೂ ಓಮದು ಸ್ಪೆಷಲ್ ಇದ್ದೇ ಇರುತ್ತದೆ. ಸಹಜವಾಗಿ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಾಗಿದೆ.