ವಿಷ್ಣುವರ್ಧನ್-ಶಿವರಾಜ್‌ಕುಮಾರ್ ಜೋಡಿ ಚಿತ್ರ ಸೆಟ್ಟೇರಿ ನಿಂತೇ ಹೋಯ್ತು; ಕಾಣದ ಕೈ ಕೆಲಸ ಮಾಡಿತ್ತಾ?
ಕನ್ನಡದಲ್ಲಿ ಅಂತಹ ಪ್ರಯತ್ನಗಳು ನಡೆದೇ ಇಲ್ಲ ಎಂದೇನೂ ಇಲ್ಲ. ಸ್ವಲ್ಪ ವರ್ಷಗಳ ಹಿಂದೆ ಸುದೀಪ್ ಹಾಗು ಉಪೇಂದ್ರ ಅವರಿಬ್ಬರೂ ಜೊತೆಯಾಗಿ 'ಮುಕುಂದ ಮುರಾರಿ' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಅದಕ್ಕೂ ಮೊದಲು ಶಿವರಾಜ್‌ಕುಮಾರ್-ಉಪೇಂದ್ರ ಒಟ್ಟಿಗೇ ಹಿಂದಿಯ 'ಡರ್' ರೀಮೇಕ್ ಆಗಿದ್ದ 'ಪ್ರೀತ್ಸೇ'ನಲ್ಲಿ ಕಾಣಿಸಿಕೊಂಡಿದ್ದಾರೆ.
ಕನ್ನಡದಲ್ಲಿ ಮೊದಲಿನಿಂದಲೂ ಮಲ್ಟಿ ಸ್ಟಾರರ್ ಸಿನಿಮಾಗಳು ತೆರೆಗೆ ಬಂದಿದ್ದು ಕಡಿಮೆ ಎಂದೇ ಹೇಳಬೇಕು. ಅದರಲ್ಲೂ ಮುಖ್ಯವಾಗಿ ಟಾಪ್ ಸ್ಟಾರ್‌ಗಳು ಒಟ್ಟಾಗಿ ಚಿತ್ರವನ್ನು ಮಾಡಿದ್ದು ಕಡಿಮೆಯೇ ಎನ್ನಬಹುದು. ಅದಕ್ಕೆ ಕಾರಣಗಳು ಹಲವು ಇದ್ದರೂ ಮುಖ್ಯವಾಗಿ ಇಬ್ಬರಿಗೂ ಹೊಂದಿಕೆಯಾಗುವಂಥ ಪಾತ್ರವನ್ನು ಸೃಷ್ಟಿ ಮಾಡಬೇಕು. ಹಾಗೂ ವಿಭಿನ್ನ ರೀತಿಯಲ್ಲಿ ಯೋಚಿಸುವ ಸ್ಟಾರ್‌ಗಳಿಬ್ಬರ ಅಭಿಮಾನಿಗಳಿಗೆ ಸ್ವಲ್ಪವೂ ಬೇಸರವಾಗದಂತೆ ನೋಡಿಕೊಳ್ಳಬೇಕು. ಇಂಥ ಚಾಲೆಂಜ್ ಎದುರಿಸಲು ಸಜ್ಜಾಗಿ ಮಲ್ಟಿ ಸ್ಟಾರ್‌ಗಳ ಸಿನಿಮಾ ತೆರೆಗೆ ತರಬೇಕಾಗುತ್ತದೆ.
ಕನ್ನಡ ಚಿತ್ರರಂಗದಲ್ಲಿ ಅಂತಹ ಪ್ರಯತ್ನಗಳು ತುಂಬಾ ಕಡಿಮೆ. ನಮ್ಮಲ್ಲಿ ಇಬ್ಬರು ಸ್ಟಾರ್ ನಟರು ನಟಿಸಿದ್ದರೂ ಅದು ಹೆಚ್ಚಾಗಿ ರೀಮೇಕ್ ಸಿನಿಮಾಗಳೇ ಆಗಿವೆ. ಅದರಲ್ಲಿ ಒಬ್ಬರು ಹೀರೋ ಆಗಿದ್ದರೆ ಇನ್ನಿಬ್ಬರು ವಿಲನ್ ಆಗಿರುತ್ತಾರೆ. ಅಥವಾ ನೆಗೆಟಿವ್ ಶೇಡ್‌ನಲ್ಲಿ ಕಾಣಿಸಿಕೊಂಡಿರುತ್ತಾರೆ. ಆಗ ಸಹಜವಾಗಿಯೇ ಅದೊಂದು ಪಾತ್ರ ಎಂಬುದನ್ನೂ ಮರೆತು ಆ ಎರಡೂ ನಟರ ಫ್ಯಾನ್ಸ್‌ಗಳು ಕಿತ್ತಾಟ ಶುರುವಿಟ್ಟುಕೊಳ್ಳುತ್ತಾರೆ. ಈ ಕಾರಣಕ್ಕೇ ಹಲವು ನಿರ್ಮಾಪಕರು ಹಾಗು ನಿರ್ದೇಶಕರು ಎರಡು ಸ್ಟಾರ್‌ಗಳನ್ನು ಒಂದೇ ಸಿನಿಮಾದಲ್ಲಿ ತೋರಿಸಲು ಹಿಂದೇಟು ಹಾಕುತ್ತಾರೆ.
ರೀಲ್ಸ್‌ನಲ್ಲಿ ರಿಯಲ್ಲಾಗಿ ಬಿದ್ದಿದ್ದ ನಟಿ ದೀಪಿಕಾ ದಾಸ್ ಮುಖ ಹೇಗಾಗಿದೆ ನೋಡಿ; ಬೇಕಿತ್ತಾ ಶಿವನೇ..!
ಆದರೆ, ಕನ್ನಡದಲ್ಲಿ ಅಂತಹ ಪ್ರಯತ್ನಗಳು ನಡೆದೇ ಇಲ್ಲ ಎಂದೇನೂ ಇಲ್ಲ. ಸ್ವಲ್ಪ ವರ್ಷಗಳ ಹಿಂದೆ ಸುದೀಪ್ ಹಾಗು ಉಪೇಂದ್ರ ಅವರಿಬ್ಬರೂ ಜೊತೆಯಾಗಿ 'ಮುಕುಂದ ಮುರಾರಿ' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಅದಕ್ಕೂ ಮೊದಲು ಶಿವರಾಜ್‌ಕುಮಾರ್-ಉಪೇಂದ್ರ ಒಟ್ಟಿಗೇ ಹಿಂದಿಯ 'ಡರ್' ರೀಮೇಕ್ ಆಗಿದ್ದ 'ಪ್ರೀತ್ಸೇ'ನಲ್ಲಿ ಕಾಣಿಸಿಕೊಂಡಿದ್ದಾರೆ. ಗೆಸ್ಟ್ ರೋಲ್‌ನಲ್ಲಿ ಹಲವರು ಮತ್ತೊಬ್ಬರು ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡಿದ್ದಾರೆ. ಆದರೆ, ಕನ್ನಡದಲ್ಲಿ ನಡೆದ ಒಂದು ಪ್ರಯತ್ನ ಫಲ ಕೊಡದೇ ಅಷ್ಟಕ್ಕೇ ನಿಂತಿದ್ದು ಮಾತ್ರ ದುರಂತ ಎನ್ನಲಾಗಿದೆ.
ಅದು, ಶಿವರಾಜ್ ಕುಮಾರ್ (Shiva Rajkumar) ಮತ್ತು ವಿಷ್ಣುವರ್ಧನ್ (Vishnuvardhan) ಕಾಂಬಿನೇಷನ್‌ನಲ್ಲಿ ಬರಬೇಕಾಗಿದ್ದ ಸಿನಿಮಾ. ಆದರೆ, ಮುಹೂರ್ತದ ಬಳಿಕ ಶೂಟಿಂಗ್ ನಡೆಯಲೇ ಇಲ್ಲ. ಹೌದು, ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಹಾಗು ಸಾಹಸಸಿಂಹ ವಿಷ್ಣುವರ್ಧನ್ ಸಂಗಮದಲ್ಲಿ 'ಕೃಷ್ಣಾರ್ಜುನ' ಸಿನಿಮಾ ಸೆಟ್ಟೇರಿತ್ತು. ಮೊದಲ ಬಾರಿಗೆ ವಿಷ್ಣುವರ್ಧನ್ ಜೊತೆ ಶಿವಣ್ಣ ತೆರೆಹಂಚಿಕೊಳ್ಳುತ್ತಿರುವ ಕಾರಣ, ಈ ಸಿನಿಮಾ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಟೈಟಲ್ ಪ್ರಕಾರ ಇಲ್ಲಿ ಕೃಷ್ಣ ಆಗಿ ವಿಷ್ಣುವರ್ಧನ್, ಅರ್ಜುನ ಆಗಿ ಶಿವಣ್ಣ ಕಾಣಿಸಿಕೊಳ್ಳುವ ಸಾಧ್ಯತೆ ಇತ್ತು. ಆದ್ರೆ ಆ ಸಿನಿಮಾ ಪ್ರಾರಂಭದಲ್ಲೇ ನಿಂತು ಹೋಗಿದೆ.
ಚಿ ಉದಯಶಂಕರ್ ಅರ್ಪಿಸುವ, ಶ್ರೀ ಗಾಯತ್ರಿ ಪಿಕ್ಚರ್ಸ್ , ಚಿ ಗುರುದತ್ ನಿರ್ದೇಶನ, ಟಿ ಎನ್ ವೆಂಕಟೇಶ್ ನಿರ್ಮಾಣದಲ್ಲಿ ಆ ಸಿನಿಮಾ ಜಾಹೀರಾತು ಕೂಡ ಪತ್ರಿಕೆಯೊಂದರಲ್ಲಿ ಪ್ರಕಟವಾಗಿತ್ತು. ಆದರೆ, ಅನಿವಾರ್ಯ ಕಾರಣಗಳಿಂದ ಸಿನಿಮಾ ನಿಂತೇ ಹೋಯ್ತು. ವಿಷ್ಣುವರ್ಧನ್-ಶಿವಣ್ಣ ಸಿನಿಮಾ ನಿಂತು ಹೋದಾಗ ಹಲವರು ಅದನ್ನು ತಮ್ಮದೇ ಆದ ರೀತಿಯಲ್ಲಿ ವಿಮರ್ಶೆ ಮಾಡಿ ಗಾಳಿ ಸುದ್ದಿ ಹರಿಬಿಟ್ಟಿದ್ದರು. ಆದರೆ, ನಿಜವಾಗಿಯೂ ಅದು ನಿಲ್ಲಲು ಕಾರಣವೇನು ಎಂಬುದು ಇಂದಿಗೂ ಕೂಡ ನಿಗೂಢವೇ. ಆದರೆ, ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಆ ಹಳೆಯ ಪೋಸ್ಟರ್ ಹರಿದಾಡಿ ಸಖತ್ ವೈರಲ್ ಆಗುತ್ತಿದೆ.
ಕೆಲವೊಂದನ್ನು ಲೈಫಲ್ಲಿ ಕಳ್ಕೊಂಡಾಗ ದೇವರು ಮತ್ತಿನ್ನೇನೋ ಕೊಡ್ತಾನೆ ಎಂದಿದ್ಯಾಕೆ ಚಂದನ್ ಶೆಟ್ಟಿ?
ಕೃಷ್ಣಾರ್ಜುನ ಸಿನಿಮಾ ಹೊರತುಪಡಿಸಿಯೂ ಕೂಡ ಇನ್ನೊಂದು ಪ್ರಯತ್ನ ಕೂಡ ನಡೆದಿತ್ತು ಎನ್ನಲಾಗಿದೆ. ಆಗಿನ ಕಾಲದಲ್ಲಿ ಸೌತ ಇಂಡಿಯಾದ ಖ್ಯಾತ ಖಳನಟ ಶೋಭರಾಜ್ 10 ಕೋಟಿ ರೂಪಾಯಿಯಲ್ಲಿ ವಿಷ್ಣುವರ್ಧನ್-ಶಿವರಾಜ್‌ಕುಮಾರ್ ಸಿನಿಮಾ ಮಾಡಲು ಹೊರಟಿಟ್ದರು. 5 ಕೋಟಿ ಫೈನಾನ್ಸ್ ಕೂಡ ಒಟ್ಟಾಗಿತ್ತು. ಆದರೆ ಆ ಪ್ರಾಜೆಕ್ಟ್ ಕೂಡ ಕೈಬಿಡಲಾಯ್ತು. ಅದಕ್ಕೂ ಕೂಡ ಪಕ್ಕಾ ಕಾರಣ ಇವತ್ತಿಗೂ ನಿಗೂಢವಾಗಿಯೇ ಉಳಿದುಕೊಂಡಿದೆ. ಆದರೆ, ಅವರಿಬ್ಬರನ್ನು ತೆರೆಯ ಮೇಲೆ ನೋಡುವ ಅವಕಾಶದಿಂದ ಕನ್ನಡ ಸಿನಿಪ್ರೇಕ್ಷಕರು ವಂಚಿತರಾಗಿದ್ದಂತೂ ಹೌದು!