ವಿಷ್ಣುವರ್ಧನ್-ಮಾಲಾಶ್ರೀ ಜೋಡಿ ಸಿನಿಮಾಗೆ ಮುಹೂರ್ತ ಫಿಕ್ಸ್ ಆಗಿತ್ತು; ಆದ್ರೆ ಆಗಿದ್ದೇ ಬೇರೆ!

'ಹಲ್ಲು ಇದ್ದಾಗ ಕಡಲೆ ಸಿಗಲಿಲ್ಲ, ಕಡಲೆ ಸಿಕ್ಕಾಗ ಹಲ್ಲೇ ಇರಲಿಲ್ಲ' ಎಂಬ ಗಾದೆಯಂತೆ ಆಗಿಬಿಟ್ಟಿತು ಮಾಲಾಶ್ರೀ ಹಾಗೂ ವಿಷ್ಣುವರ್ಧನ್ ಜೋಡಿಯ ಸಿನಿಮಾ. ಅವರಿಬ್ಬರೂ ಕನ್ನಡದ ಮೇರು ನಟರು. ಮಾಲಾಶ್ರೀ ಮೂಲತಃ ತೆಲುಗಿನವರಾದರೂ ಕನ್ನಡದ ನಟಿಯೇ..

Vishnuvardhan and Malashri combination movie did not come due to Accident srb

ವಿಷ್ಣುವರ್ಧನ್ (Vishnuvarhdan) ಹಾಗೂ ಮಾಲಾಶ್ರೀ (Malashri) ನಟನೆಯ ಒಂದೇ ಒಂದು ಸಿನಿಮಾ ತೆರೆಗೆ ಬರಲಿಲ್ಲ ಎಂಬುದು ಕನ್ನಡ ಪ್ರೇಕ್ಷಕರಿಗೆ ಇಂದಿಗೂ ಬೇಸರದ ಸಂಗತಿ. ಸಾಹಸಸಿಂಹ ವಿಷ್ಣುವರ್ಧನ್ ಅವರು ಕನ್ನಡದಲ್ಲಿ ಸ್ಟಾರ್ ನಟರಾಗಿ ಮೆರೆಯುತ್ತಿದ್ದ ಕಾಲದಲ್ಲಿ ನಟಿ ಮಾಲಾಶ್ರೀ ಕೂಡ ಕನ್ನಡದ ಲೇಡಿ ಸೂಪರ್ ಸ್ಟಾರ್ ಆಗಿದ್ದರು. ಆದರೆ ಇವರಬ್ಬರ ಜೋಡಿಯಲ್ಲಿ ಒಂದು ಚಿತ್ರ ಕೂಡ ಬರಲೇ ಇಲ್ಲ. ಇದಕ್ಕೆ ಕಾರಣಗಳು ಬೇರೆಯದೇ ಇದ್ದವು. ಆದರೆ, ಅಂದು ಮಾಲಾಶ್ರೀ-ವಿಷ್ಣುವರ್ಧನ್ ಜೋಡಿಯ ಸಿನಿಮಾ ಬರದೇ ಇರುವುದಕ್ಕೆ 'ಅಂತೆಕಂತೆ'ಗಳ ಗಾಸಿಪ್ ಹಬ್ಬಿತ್ತು. 

ಆದರೆ, ಗಾಸಿಪ್ ಹಬ್ಬಿದ್ದು ಸುಳ್ಳೇ ಆಗಿತ್ತು. ಕಾರಣ, ಮಾಲಾಶ್ರೀ ಹಾಗೂ ವಿಷ್ಣುವರ್ಧನ್ ಇಬ್ಬರನ್ನೂ ತೆರೆಯ ಮೇಲೆ ತರುವ ಪ್ರಯತ್ನದಲ್ಲಿ ಹಲವು ನಿರ್ಮಾಪಕರು ಹಾಗು ನಿರ್ದೇಶಕರು ಕಥೆ ಹೆಣೆದಿದ್ದರು. ಆದರೆ, ಆ ಸಮಯದಲ್ಲಿಈ ಇಬ್ಬರೂ ಬಹಳಷ್ಟು ಬ್ಯುಸಿ ಆಗಿದ್ದರಿಂದ ಇಬ್ಬರ ಡೇಟ್ಸ್ ಹೊಂದಾಣಿಕೆ ಆಗಲೇ ಇಲ್ಲ. ಮಾಲಾಶ್ರೀ ಜೊತೆ ನಟಿಸಲ್ಲ ಅಂತ ವಿಷ್ಣುವರ್ಧನ್ ಹೇಳಿದ್ದಾರೆ ಎಂಬುದು ಶುದ್ಧ ಸುಳ್ಳು. ಒಂದು ಚಿತ್ರ ಈ ಇಬ್ಬರನ್ನೂ ಒಂದಾಗಿಸಲು, ಒಟ್ಟಿಗೇ ತೆರೆಮೇಲೆ ತೋರಿಸಲು ಫೈನಲ್ ಆಗಿ, ಸೆಟ್ಟೇರಲು ಮುಹೂರ್ತ ಕೂಡ ಫಿಕ್ಸ್ ಆಗಿತ್ತು. ಆದರೆ ಅಷ್ಟರಲ್ಲಿ ಮಾಲಾಶ್ರೀ ಅವರು ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದರು. 

ಡಾ ರಾಜ್‌ ಜೊತೆ ವಿಷ್ಣು ಹೋಲಿಕೆ ಸರಿಯಲ್ಲ; ಆ ದೊಡ್ಡ ತಪ್ಪು ಯಾರಿಂದ ಯಾಕೆ ನಡೆದಿದ್ದು?

ಹೌದು, ಮಂಗಳೂರು ಮೂಲದ ಕನ್ನಡದ ನಟ, 'ಬೆಳ್ಳಿ ಕಾಲುಂಗುರ' ಖ್ಯಾತಿಯ ಸುನಿಲ್ ಹಾಗೂ ನಟಿ ಮಾಲಾಶ್ರೀ ಅವರು ಹೋಗುತ್ತಿದ್ದ ಕಾರು 1994 ರಲ್ಲಿ  ಅಪಘಾತಕ್ಕೆ ಈಡಾಯಿತು. ಅಂದು ಸುನಿಲ್ ಅವರು ಮೃತಪಟ್ಟು ಮಾಲಾಶ್ರೀ ಅವರು ಕೋಮಾಗೆ ಹೋಗಿ ಬದುಕಿ ಬಂದರು. ಅಂದು ತೀವ್ರವಾಗಿ ಗಾಯಗೊಂಡಿದ್ದ ಮಾಲಾಶ್ರೀ ಅವರು ಚೇತರಿಸಿಕೊಂಡು ಮತ್ತೆ ಸಿನಿಮಾ ನಟನೆ ಶುರುಮಾಡುವಷ್ಟರಲ್ಲಿ ನಟ ವಿಷ್ಣುವರ್ಧನ್ ಬೇರೆ ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದರು. ಈ ಕಾರಣಕ್ಕೆ 1994ರಲ್ಲಿ ಶೂಟಿಂಗ್ ಆಗಬೇಕಿದ್ದ ಆ ಸಿನಿಮಾ ಮುಂದಕ್ಕೆ ಹೋಯಿತು. ಕೊನೆಗೆ, ಅದು ಶೂಟಿಂಗ್ ಆಗಲೇ ಇಲ್ಲ. 

ಈ ಬಗ್ಗೆ ಸ್ವತಃ ಮಾಲಾಶ್ರೀ ಅವರು ಸಂದರ್ಶನವೊಂದರಲ್ಲಿ ಮಾತನಾಡುತ್ತ 'ನಾನು ಹಾಗೂ ವಿಷ್ಣು ಸರ್ ಒಂದು ಚಿತ್ರದಲ್ಲಿ ನಟಿಸಬೇಕಿತ್ತು. ಆದರೆ ದುರಾದೃಷ್ಟ, ಅದೇ ಸಮಯದಲ್ಲಿ ನನಗೆ ಅಪಘಾತವಾಗಿ ಹಲವು ಸಮಯ ನಾನು ನಟನೆಯಿಂದ ದೂರ ಇರಬೇಕಾಯ್ತು. ನಮ್ಮಿಬ್ಬರ ಮಧ್ಯೆ ಏನೂ ಮನಸ್ತಾಪ ಇರಲಿಲ್ಲ. ನಾವಿಬ್ಬರೂ ಒಬ್ಬರನ್ನೊಬ್ಬರು ತುಂಬಾ ಗೌರವಿಸುತ್ತಿದ್ದೆವು. ಈ ಸಂಗತಿ ಅಂಬರೀಷ್ ಸೇರಿದಂತೆ ಎಲ್ಲರಿಗೂ ಗೊತ್ತಿತ್ತು. ಆದರೂ ಅದ್ಯಾಕೆ ಏನೇನೋ ಗಾಳಿಸುದ್ದಿ ಹಬ್ಬಿತ್ತು ಎಂಬುದೇ ನನಗೆ ಅರ್ಥವಾಗಿಲ್ಲ' ಎಂದಿದ್ದರು. 

ಹೃದಯ ಹಾಡಿತು ಚಿತ್ರಕ್ಕೆ ಶಿವರಾಜ್‌ಕುಮಾರ್ ಬದಲು ಅಂಬರೀಷ್ ಬಂದಿದ್ದು ಹೇಗೆ?

ಒಟ್ಟಿನಲ್ಲಿ, 'ಹಲ್ಲು ಇದ್ದಾಗ ಕಡಲೆ ಸಿಗಲಿಲ್ಲ, ಕಡಲೆ ಸಿಕ್ಕಾಗ ಹಲ್ಲೇ ಇರಲಿಲ್ಲ' ಎಂಬ ಗಾದೆಯಂತೆ ಆಗಿಬಿಟ್ಟಿತು ಮಾಲಾಶ್ರೀ ಹಾಗೂ ವಿಷ್ಣುವರ್ಧನ್ ಜೋಡಿಯ ಸಿನಿಮಾ. ಅವರಿಬ್ಬರೂ ಕನ್ನಡದ ಮೇರು ನಟರು. ಮಾಲಾಶ್ರೀ ಮೂಲತಃ ತೆಲುಗಿನವರಾದರೂ ಕನ್ನಡದ ನಟಿಯೇ ಆಗಿಬಿಟ್ಟರು. ಕನ್ನಡ ಸಿನಿಪ್ರೇಕ್ಷಕರು ಮಾಲಾಶ್ರೀ ಅವರನ್ನು ಮನೆಮಗಳಂತೆ ಮೆಚ್ಚಿ ಆರಾಧಿಸಿದ್ದಾರೆ. ಹಾಗೇ, ನಟ ವಿಷ್ಣುವರ್ಧನ್ ಕೂಡ ಕನ್ನಡಿಗರ ಅಚ್ಚುಮೆಚ್ಚು. ಆದರೆ, ಅವರಿಬ್ಬರ ಜೋಡಿಯನ್ನು ತೆರೆಯ ಮೇಲೆ ನೋಡುವ ಭಾಗ್ಯ ಕನ್ನಡಿಗರಿಗೆ ಇರಲಿಲ್ಲ ಅಷ್ಟೇ!

Latest Videos
Follow Us:
Download App:
  • android
  • ios