ಹೃದಯ ಹಾಡಿತು ಚಿತ್ರಕ್ಕೆ ಶಿವರಾಜ್‌ಕುಮಾರ್ ಬದಲು ಅಂಬರೀಷ್ ಬಂದಿದ್ದು ಹೇಗೆ?
ಹೃದಯ ಹಾಡಿತು ಚಿತ್ರದಲ್ಲಿ ನಟಿ ಮಾಲಾಶ್ರೀ ಅವರು ಹಾರ್ಟ್ ಪೇಶೆಂಟ್ ಆಗಿ ಅಭಿನಯಿಸಿ ಅಪಾರ ಮೆಚ್ಚುಗೆ ಹಾಗು ಪ್ರಶಸ್ತಿ ಗಳಿಸಿದ್ದಾರೆ. ಜೊತೆಗೆ ಅಂಬರೀಷ್ ಹಾಗೂ ಭವ್ಯಾ ನಟನೆ ಕೂಡ ಪ್ರೇಕ್ಷಕರನ್ನು ಸೆಳೆಯಿತು. ಮಾಲಾಶ್ರೀ ಅವರು ಈ ಚಿತ್ರದ ಮೂಲಕ...
ಮಾಲಾಶ್ರೀ, ಅಂಬರೀಷ್ ಹಾಗೂ ಭವ್ಯಾ ನಟನೆಯ 'ಹೃದಯ ಹಾಡಿತು' ಸಿನಿಮಾವನ್ನು ಶಿವರಾಜ್‌ಕುಮಾರ್ (Shiva Rajkumar) ಅವರು ಮಾಡಬೇಕಿತ್ತು. ವಂಶಿ ಅವರ 'ಹಿಮದ ಹೂವು' ಕಾದಂಬರಿ ಆಧಾರಿತ 'ಹೃದಯ ಹಾಡಿತು' ಚಲನಚಿತ್ರವು 1991ರಲ್ಲಿ ಬಿಡುಗಡೆಯಾಗಿ ಭರ್ಜರಿ ಸೂಪರ್ ಹಿಟ್ ದಾಖಲಿಸಿತ್ತು. ಕಾದಂಬರಿ ಓದುವ ಹವ್ಯಾಸವಿದ್ದ ಪಾರ್ವತಮ್ಮನವರು ಹಿಮದ ಹೂವು ಕಾದಂಬರಿಯನ್ನು 'ಹೃದಯ ಹಾಡಿತು' ಹೆಸರಿನ ಚಿತ್ರ ಮಾಡಿ, ಅದಕ್ಕೆ ಶಿವರಾಜ್‌ಕುಮಾರ್ ಅವರನ್ನು ನಾಯಕರನ್ನಾಗಿ ಮಾಡಬೇಕೆಂದು ಅಂದುಕೊಂಡಿದ್ದರಂತೆ.
ಆದರೆ, ಈ ಚಿತ್ರದಲ್ಲಿ ನಾಯಕನಿಗೆ ಇಬ್ಬರು ಹೆಂಡತಿಯರು ಇರುತ್ತಾರೆ. ಈ ಕಾರಣಕ್ಕೆ ಅದನ್ನು ಶಿವರಾಜ್‌ಕುಮಾರ್ ಅವರು ಮಾಡಿದರೆ ಎಲ್ಲಿ ಕನ್ನಡ ಸಿನಿಪ್ರೇಕ್ಷಕರು ಒಪ್ಪುತ್ತಾರೋ ಇಲ್ವೋ ಎಂದು ಆ ಸಿನಿಮಾಗೆ ಅಂಬರೀಷ್ (Ambareesh) ಅವರನ್ನು ಸೂಚಿಸಿದರಂತೆ. ಬಳಿಕ ಈ ಸಿನಿಮಾ ಸೂಪರ್ ಹಿಟ್ ಆಗಿ, ಅದರ ಹಾಡುಗಳೂ ಕೂಡ ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿದೆ. ಆದರೆ, ಶಿವರಾಜ್‌ಕುಮಾರ್ ಅವರು ಈ ಚಿತ್ರದ ನಾಯಕರಾಗಿದ್ದರೆ ಏನಾಗುತ್ತಿತ್ತು ಎಂಬುದು ಇಂದಿಗೂ ಉತ್ತರಿಸಲಾಗದ ಪ್ರಶ್ನೆ!
ಡಾ ರಾಜ್ ಜೊತೆ ವಿಷ್ಣು ಹೋಲಿಕೆ ಸರಿಯಲ್ಲ; ಆ ದೊಡ್ಡ ತಪ್ಪು ಯಾರಿಂದ ಯಾಕೆ ನಡೆದಿದ್ದು?
ಹೃದಯ ಹಾಡಿತು ಚಿತ್ರದಲ್ಲಿ ನಟಿ ಮಾಲಾಶ್ರೀ (Malashri) ಅವರು ಹಾರ್ಟ್ ಪೇಶೆಂಟ್ ಆಗಿ ಅಭಿನಯಿಸಿ ಅಪಾರ ಮೆಚ್ಚುಗೆ ಹಾಗು ಪ್ರಶಸ್ತಿ ಗಳಿಸಿದ್ದಾರೆ. ಜೊತೆಗೆ ಅಂಬರೀಷ್ ಹಾಗೂ ಭವ್ಯಾ ನಟನೆ ಕೂಡ ಪ್ರೇಕ್ಷಕರನ್ನು ಸೆಳೆಯಿತು. ಮಾಲಾಶ್ರೀ ಅವರು ಈ ಚಿತ್ರದ ಮೂಲಕ ಕ್ಲಾಸ್ ಪ್ರೇಕ್ಷಕರನ್ನು ಸಹ ಗಳಿಸಿಕೊಂಡು ಇನ್ನಷ್ಟು ಎತ್ತರಕ್ಕೆ ಏರಿದ್ದರು. ಆದರೆ, ಒಮ್ಮೆ ಶಿವರಾಜ್‌ಕುಮಾರ್ ಅವರು ಈ ಚಿತ್ರದ ಹೀರೋ ಆಗಿದ್ದರೆ ಮಾಲಾಶ್ರೀ-ಭವ್ಯಾ ಬದಲು ಯಾರು ನಾಯಕಿಯರು ಆಗಿರುತ್ತಿದ್ದರೋ ಏನೋ!
ಒಟ್ಟಿನಲ್ಲಿ, ಹೃದಯ ಹಾಡಿತು ಚಿತ್ರದಲ್ಲಿ ಶಿವರಾಜ್‌ಕುಮಾರ್ ಅವರನ್ನು ಕನ್ನಡ ಸಿನಿಪ್ರೇಕ್ಷಕರು ಮಿಸ್ ಮಾಡಿಕೊಂಡರು. ಹೀಗೆ ಹಲವು ಚಿತ್ರಗಳು ಶಿವರಾಜ್‌ಕುಮಾರ್ ವೃತ್ತಿಜೀವನದಲ್ಲಿ ಮಿಸ್ ಆಗಿವೆ. ಅದಕ್ಕೆ ಕಾರಣ ಏನೇನೋ ಇರಬಹುದು. ಮುಖ್ಯವಾಗಿ ಅವರವರ ಅಭಿಮಾನಿಗಳನ್ನು ಮನಸ್ಸಿನಲ್ಲಿಟ್ಟು ಸಿನಿಮಾ ಪಾತ್ರಕ್ಕೆ ನಾಯಕರನ್ನು ಆಯ್ಕೆ ಮಾಡುವುದು ಎನ್ನಬಹುದು. ಕೆಲವೊಮ್ಮೆ ಡೇಟ್ಸ್ ಹೊಂದಾಣಿಕೆ ಆಗದೇ ಇರುವುದೂ ಕೂಡ ಕಾರಣವಾಗಿದೆ.
ಮೊಟ್ಟಮೊದಲ ಕಲರ್ ಸಿನಿಮಾ ಕೈತಪ್ಪಿದ ಬೇಸರಕ್ಕೆ ಡಾ ರಾಜ್‌ಕುಮಾರ್ ಮಾಡಿದ್ದೇನು?
ಕೇವಲ ಹೃದಯ ಹಾಡಿತು ಸಿನಿಮಾ ಮಾತ್ರವಲ್ಲ, ಹೀಗೇ ಹತ್ತು ಹಲವಾರು ಸೂಪರ್ ಹಿಟ್ ಚಿತ್ರಗಳನ್ನು ಹಲವು ನಾಯಕನಟರು ಮಿಸ್ ಮಾಡಿಕೊಂಡಿದ್ದಾರೆ. ಅದನ್ನೆಲ್ಲಾ ಹೇಳಲು ಹೊರಟರೆ ಅದೇ ಒಂದು ದೊಡ್ಡ ಕಥೆಯಾಗುತ್ತದೆ. 'ಬಯಲು ದಾರಿ' ಸಿನಿಮಾ ಅನಂತ್ ನಾಗ್ ಬದಲು ಡಾ ರಾಜ್ ಅವರು ಮಾಡಬೇಕಿತ್ತು. ಹಾಗೇ, ಗಿರಿಕನ್ಯೆ ಸಿನಿಮಾ ಡಾ ರಾಜ್ ಬದಲು ಅನಂತ್ ನಾಗ್ ಅವರು, ಜನುಮದ ಜೋಡಿ ಸಿನಿಮಾ ಶಿವರಾಜ್‌ಕುಮಾರ್ ಬದಲು ಅಂಬರೀಷ್ ಅವರು ಮಾಡಬೇಕಿತ್ತು! ಆದರೆ, 'ಯಾವ ಹೂವು ಯಾರ ಮುಡಿಗೋ' ಎಂಬಂತೆ ಎಲ್ಲವೂ ಬದಲಾಗಿ ಬಂತು!