Asianet Suvarna News Asianet Suvarna News

ವಿಷ್ಣುಪ್ರಿಯ ಸಿನಿಮಾಗೆ ಕಥೆ ಬರೆದ ಬೆಳಗಾವಿಯ ಕತೆಗಾರ್ತಿಗೆ ಬಂಪರ್ ಸಂಭಾವನೆ

ಕೆ. ಮಂಜು ಚಿತ್ರಕ್ಕೆ ಬೆಳಗಾವಿಯ ಕತೆಗಾರ್ತಿ | ವಿಷ್ಣುಪ್ರಿಯ ಚಿತ್ರಕ್ಕೆ ಕತೆ ಬರೆದ ಶಿವಶ್ರೀಗೆ 1 ಲಕ್ಷ ರು. ಸಂಭಾವನೆ

Vishnupriya movie story writer received 1 lakh rupees remuneration dpl
Author
Bangalore, First Published Mar 31, 2021, 11:35 AM IST

ಬೆಳಗಾವಿಯ ಅಥಣಿಯ ಚಿಕ್ಕ ಊರಿನ ಹುಡುಗಿ ಶಿವಶ್ರೀ ಈಗ ದೊಡ್ಡ ಮಟ್ಟದಲ್ಲಿ ಸುದ್ದಿ ಆಗುತ್ತಿದ್ದಾಳೆ. ಕಾರಣ ಕೆ.ಮಂಜು ನಿರ್ಮಾಣದ ‘ವಿಷ್ಣುಪ್ರಿಯ’ ಚಿತ್ರಕ್ಕೆ ಈಕೆಯ ಕಥೆ ಆಯ್ಕೆ ಆಗಿದೆ. ಕೆಲವು ಸಮಯದ ಹಿಂದೆ ನಿರ್ಮಾಪಕ ಮಂಜು ತಮ್ಮ ಮಗ ಶ್ರೇಯಸ್‌ ಮಂಜು ಚೊಚ್ಚಲ ಸಿನಿಮಾದ ನಿರ್ಮಾಣಕ್ಕೆ ಕೈ ಹಾಕಿದ್ದರು.

ಈ ಸಂದರ್ಭ ಕಥೆಗಾಗಿ ಕಾಲ್‌ಫಾರ್‌ ಮಾಡಿದ್ದರು. ಆಯ್ಕೆಯಾಗುವ ಕಥೆಗೆ 1 ಲಕ್ಷ ರು. ಬಹುಮಾನ ನೀಡುವುದಾಗಿ ಘೋಷಿಸಿದ್ದರು. ಇದೀಗ ಉತ್ತರಕರ್ನಾಟಕದ ಹುಡುಗಿ ಶಿವಶ್ರೀ ಆ ಗೌರವಕ್ಕೆ ಪಾತ್ರರಾಗಿದ್ದಾರೆ.

ಅರೆ ವಾವ್..! ಲವ್‌ ರಿಹರ್ಸಲ್‌ನಲ್ಲಿ ಸಿಂಪಲ್‌ ಸ್ಟಾರ್‌

25 ವರ್ಷ ವಯಸ್ಸಿನ ಈ ಯುವ ಕತೆಗಾರ್ತಿ ತಮ್ಮ ಕುಟುಂಬದಲ್ಲಿ ನಡೆದ ಘಟನೆಯೊಂದರ ಆಧಾರದ ಮೇಲೆ ಈ ಕಥೆ ಹೆಣೆದಿದ್ದಾರೆ. ‘ನಮ್ಮದು ಇಡೀ ಊರಲ್ಲೇ ಪ್ರತಿಷ್ಠಿತವಾದ ಗೌಡ ಕುಟುಂಬ. ಇಂಥಾ ಕುಟುಂಬದಲ್ಲಿ ನನ್ನ ಮುತ್ತಾತದ ಕಾಲದಲ್ಲಿ ನಡೆದ ಒಂದು ಆಘಾತಕರ ಘಟನೆಯ ಕುರಿತು ಮನೆಯ ಹಿರಿಯರು ಮಾತಾಡುವುದನ್ನು ಕೇಳಿಸಿಕೊಂಡಿದ್ದೆ.

ನನಗೆ ಸಾಹಿತ್ಯದಲ್ಲೂ ಒಲವಿರುವ ಕಾರಣ ಇದನ್ನು ಕಥೆಯ ರೂಪದಲ್ಲಿ ಬರೆದಿಟ್ಟಿದ್ದೆ. ಈ ಕಥೆಯಲ್ಲಿ ಬರುವ ವ್ಯಕ್ತಿಗಳು ಈಗಲೂ ಬದುಕಿದ್ದಾರೆ. ಎ ಮಂಜು ಅವರು ಕಥೆಗಾಗಿ ಕಾಲ್‌ಫಾರ್‌ ಮಾಡಿದಾಗ ಇದನ್ನೇ ಕಳುಹಿಸಿದ್ದೆ. ಆದರೆ ಕಥೆ ಆಯ್ಕೆ ಆಗಿದ್ದು ಗೊತ್ತೇ ಇರಲಿಲ್ಲ. ಈ ಸಂಗತಿಯನ್ನು ಸ್ನೇಹಿತರು ಹೇಳಿದಾಗ ಬಹಳ ಸಂತೋಷ ಆಯಿತು. ಬಳಿಕ ಮಂಜು ಅವರು ಕರೆ ಮಾಡಿ ಕಥೆ ಆಯ್ಕೆಯಾದ ವಿಷಯವನ್ನು ಅಧಿಕೃತವಾಗಿ ತಿಳಿಸಿದರು’ ಎನ್ನುತ್ತಾರೆ ಶಿವಶ್ರೀ.

ಬಾಲಿವುಡ್‌ನಲ್ಲಿ ಯೂ ಟರ್ನ್‌ ರೀಮೇಕ್‌

ತಮ್ಮ ಈ ಚೊಚ್ಚಲ ಕಥೆಗೆ 1 ಲಕ್ಷ ರು. ಬಹುಮಾನವನ್ನೂ ಈಕೆ ಪಡೆದಿದ್ದಾರೆ. ಈಕೆ ಆ್ಯಂಕರ್‌ ಆಗಬೇಕೆಂಬ ಕನಸು ಹೊತ್ತು ಬೆಂಗಳೂರಿಗೆ ಬಂದವರು. ಜೊತೆಗೆ ಶಿವಶ್ರೀ ಅವರ ಎರಡು ಕವನ ಸಂಕಲನಗಳು ಬಿಡುಗಡೆ ಆಗಿವೆ. ಯೂಟ್ಯೂಬ್‌ ಚಾನೆಲ್‌ಗಳಲ್ಲಿ ವಾಯ್‌್ಸ ಓವರ್‌ ಆರ್ಟಿಸ್ಟ್‌ ಆಗಿಯೂ ಕಾರ್ಯ ನಿರ್ವಹಿಸಿದ್ದಾರೆ.

Follow Us:
Download App:
  • android
  • ios