ಯೂ ಟರ್ನ್‌ ಚಿತ್ರ ಬಾಲಿವುಡ್‌ನಲ್ಲಿ ಮರು ನಿರ್ಮಾಣ | ಬಾಕ್ಸ್ ಆಫೀಸ್ ಹಿಟ್ ಆಗದಿದ್ರೂ ಸ್ಟೋರಿಗೋಸ್ಕರ ಸಿನಿಮಾ

ಪವನ್‌ ಕುಮಾರ್‌ ನಿರ್ದೇಶನದ ಯೂ ಟರ್ನ್‌ ಚಿತ್ರ ಬಾಲಿವುಡ್‌ನಲ್ಲಿ ಮರು ನಿರ್ಮಾಣವಾಗಲಿದೆ. ನಿರ್ದೇಶಕ ಪವನ್‌ ಕುಮಾರ್‌ ಈ ವಿಷಯವನ್ನು ಟ್ವೀಟ್‌ ಮೂಲಕ ಬಹಿರಂಗಪಡಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

‘2016ರಲ್ಲಿ ತೆರೆಗೆ ಬಂದ ಯೂಟರ್ನ್‌ ಚಿತ್ರ ಬಾಕ್ಸ್‌ ಆಫೀಸ್‌ ಹಿಟ್‌ ಚಿತ್ರ ಏನಾಗಿರಲಿಲ್ಲ. ಸಾಮಾನ್ಯವಾಗಿ ಬಾಕ್ಸ್‌ ಆಫೀಸ್‌ ದೋಚಿದ ಚಿತ್ರಗಳಷ್ಟೇ ವಿವಿಧ ಭಾಷೆಗಳಲ್ಲಿ ಮರು ನಿರ್ಮಾಣದ ಅರ್ಹತೆ ಗಿಟ್ಟಿಸಿಕೊಳ್ಳುತ್ತವೆ.

ಪವನ್‌ ಕುಮಾರ್‌ ಚಿತ್ರದ ರೀಮೇಕ್‌ ಕಮಾಲ್‌; ಫಿಲಿಪ್ಪೀನ್ಸ್‌ ಭಾಷೆಗೆ ಯೂಟರ್ನ್‌!

ಆದರೆ ನಮ್ಮ ಯೂಟರ್ನ್‌ ಚಿತ್ರದ ವಿಚಾರಕ್ಕೆ ಬಂದರೆ ಕಥೆ ಬಹಳ ಸ್ಪೆಷಲ್‌ ಆಗಿದೆ. ನಿರ್ದೇಶಕ ಇರಬಹುದು, ನಟ ಇರಬಹುದು, ಸಿನಿಮಾದ ಕಥೆ ನಿರೂಪಿಸುವವರಿಗೆ ವಿಶಿಷ್ಟವಾಗಿ ಕನೆಕ್ಟ್ ಆಗಿದೆ.

ಒಬ್ಬ ಬರಹಗಾರ, ನಿರ್ದೇಶಕನಾಗಿ ನನಗೆ ನನ್ನ ಚಿತ್ರ ಹಿಂದಿಯಲ್ಲಿ ರೀಮೇಡ್‌ ಆಗುತ್ತಿರುವುದಕ್ಕೆ ಬಹಳ ಹೆಮ್ಮೆ ಅನಿಸುತ್ತದೆ’ ಎಂದು ಪವನ್‌ ಟ್ವೀಟ್‌ ಮಾಡಿದ್ದಾರೆ.

Scroll to load tweet…