Asianet Suvarna News Asianet Suvarna News

ಮನೆ ಕೆಲಸ ಮಾಡೋ ಹೆಂಗಸನ್ನೇ ವಿನೋದ್ ಮದುವೆಯಾಗಿರುವುದು; ನಿಗೂಢ ಏನಿದೆ ಗೊತ್ತಿಲ್ಲ ಎಂದ ಪ್ರಕಾಶ್ ರಾಜ್

ವಿನೋದ್ ರಾಜ್‌ ಮದುವೆ ವಿಚಾರದ ಹಳೆ ವಿಡಿಯೋಗಳು ಮತ್ತೊಮ್ಮೆ ವೈರಲ್ ಅಗುತ್ತಿದೆ. ಯಾಕೆ? ಎಂದು ಪ್ರಶ್ನೆ ಮಾಡಿದ ನೆಟ್ಟಿಗರು....

Vinod raj married house maid says director Prakash raj mehu vcs
Author
First Published Dec 14, 2023, 1:35 PM IST | Last Updated Dec 14, 2023, 1:35 PM IST

ಕನ್ನಡ ಚಿತ್ರರಂಗ ಹಿರಿಯ ನಟಿ ಲೀಲಾವತಿ ವಯೋಸಹಜ ಕಾಯಿಲೆಯಿಂದ ಡಿಸೆಂಬರ್ 8ರಂದು ಇಹಲೋಕ ತ್ಯಜಿಸಿದ್ದರು. ಕೆಲವು ತಿಂಗಳುಗಳ ಹಿಂದೆ ಲೀಲಾವತಿ  ಅವರ ಫ್ಯಾಮಿಲಿ ಫೋಟೋ ಮತ್ತು ಮೊಮ್ಮಗನ ಮಾರ್ಕ್ಸ್‌ ಕಾರ್ಡ್ ವೈರಲ್ ಆಗಿತ್ತು. ಇದನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡು ವಿನೋದ್ ರಾಜ್‌ಗೆ ಮದುವೆಯಾಗಿ, ಆಗಿದ್ದರೂ ಆಗಿಲ್ಲ ಎಂದು ಹೇಳುವುದು ಅಥವಾ ಮುಚ್ಚಿಟ್ಟಿರಲು ಕಾರಣ ಏನು ಎಂದು ಅಭಿಮಾನಿಗಳು ಮತ್ತು ನೆಟ್ಟಿಗರು ಪ್ರಶ್ನೆ ಮಾಡಿದ್ದರು. ಆ ಹಳೆ ವಿಡಿಯೋಗಳು ಈಗ ಮತ್ತೊಮ್ಮೆ ವೈರಲ್ ಆಗುತ್ತಿದೆ.

ಈಗ ಯಾಕೆ ವೈರಲ್ ಆಗುತ್ತಿದೆ?

ಲೀಲಾವತಿ ಅಗಲಿದಾಗ ಅವರ ಅಂತಿಮ ದರ್ಶನ ಪಡೆಯಲು ಸೊಸೆ ಅನು ಮತ್ತು ಮೊಮ್ಮಗ ಆಗಮಿಸಿದ್ದರು. ಚೆನ್ನೈನಲ್ಲಿ ವಾಸವಿರುವ  ತಾಯಿ ಮಗ ಮಾಧ್ಯಮಗಳಲ್ಲಿ ಜೊತೆ ಕನ್ನಡದಲ್ಲಿ ಸ್ಪಷ್ಟವಾಗಿ ಮಾತನಾಡಿದರು. ಅವರ ಕನ್ನಡ ಪ್ರೇಮ ನೋಡಿ ಅಭಿಮಾನಿಗಳು ಖುಷಿ ಪಟ್ಟರು. ಹೀಗಾಗಿ ವಿನೋದ್ ರಾಜ್‌ ಮದುವೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹುಡುಕಿದಾಗ ಹರಿದಾಡುತ್ತಿರುವ ಸುದ್ದಿಗಳ ನಡುವೆ ನಿರ್ದೇಶಕ ಪ್ರಕಾಶ್ ರಾಜ್ ಮೇಹು ಮಾತನಾಡಿರುವ ವಿಡಿಯೋ ವೈರಲ್ ಆಗುತ್ತಿದೆ. 

ವಿನೋದ್‌ ರಾಜ್‌ ಹೀರೋಯಿನ್ ಹಿಂದೆ ಹೋಗ್ತಾನೆ ಅನ್ನೋ ಸ್ವಾರ್ಥ ಲೀಲಮ್ಮನಿಗೆ ಇತ್ತು: ಬ್ರಹ್ಮಾಂಡ ಗುರೂಜೀ

'ವಿನೋದ್ ರಾಜ್‌ ಮತ್ತು ಅನು ಅವರು ಮದುವೆಯಾಗಿರುವ ವಿಚಾರ 20 ವರ್ಷಗಳ ಹಿಂದೆ ಗೊತ್ತಿತ್ತು. 2001ರಲ್ಲಿ ವಿನೋದ್ ಮಗ ಹುಟ್ಟಿರುವುದು ಲೆಕ್ಕಾಚಾರ ಮಾಡಿ ಮೂರ್ನಾಲ್ಕು ವರ್ಷ ಹಿಂದೆ ಮುಂದೆ ಮಾಡಿದರೆ 1998-99ರಲ್ಲಿ ಇವರ ಮದುವೆ ನಡೆದಿರಬಹುದು. ವಿನೋದ್ ಪತ್ನಿ ಅವರೇ ಅಂತ ಯಾರೋ ಹೇಳಿದರು. ವಿನೋದ್ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಹುಡುಗಿ ಅನು..ಅವರನ್ನು ಮದುವೆ ಮಾಡಿಕೊಂಡಿದ್ದಾರೆ ಅಂತ ಯಾರೋ ಹೇಳಿದ್ದರು. ಆ ಕಾರಣಕ್ಕೆ ಪಬ್ಲಿಕ್‌ನಲ್ಲಿ ಹೇಳಿಕೊಳ್ಳುತ್ತಿಲ್ವೋ ಏನೋ ಗೊತ್ತಿಲ್ಲ. ಅದು ನಿಜವೇ ಆಗಿದ್ರೆ ವಿನೋದ್ ರಾಜ್ ಹೆಮ್ಮೆಯಿಂದ ಹೇಳಿಕೊಳ್ಳಬೇಕು ಏಕೆಂದರೆ ಇದರಲ್ಲಿ ಯಾವುದೇ ತಪ್ಪು ಕೆಲಸವಿಲ್ಲ. ಕೆಲಸ ಮಾಡುತ್ತಿರುವ ಹೆಂಗಸಿಗೆ ಬಾಳು ಕೊಟ್ಟಿದ್ದಾರೆ ಹೆಮ್ಮೆಯಿಂದ ಹೇಳಿಕೊಳ್ಳಬೇಕಾದ ವಿಚಾರ. ಯಾವ ಕಾರಣಕ್ಕೆ ಮುಚ್ಚಿಟ್ಟಿದ್ದಾರೆ ಅದರಲ್ಲಿ ಯಾವ ನಿಗೂಢತೆ ಇದೆ ನನಗೆ ಗೊತ್ತಿಲ್ಲ. ಅವರಿಗೆ ಹೆಂಡತಿ ಮಗ ಇರುವುದು ನಿಜ ನನಗೆ ಅಷ್ಟ ಮಾತ್ರ ಗೊತ್ತು. 

Latest Videos
Follow Us:
Download App:
  • android
  • ios