ಹೊಸ ಅವತಾರದಲ್ಲಿ ರಚಿತಾ ರಾಮ್; ಪೆಡ್ಡೆ ಹುಡುಗರ ನಿದ್ರೆಗೆಡಿಸಿದ ಫೋಟೋ ವೈರಲ್!
ಡಿಫರೆಂಟ್ ಡಿಫರೆಂಟ್ ಲುಕ್‌ನಲ್ಲಿ ಮಿಂಚುತ್ತಿರುವ ರಚಿತಾ ರಾಮ್. ಬೆಂಗಳೂರಿನಲ್ಲಿ ನಡೆದ ಚಿನ್ನದ ಮೇಳದಲ್ಲಿ ರಚ್ಚುದ್ದೇ ಫೋಟೋ.........
ಸ್ಯಾಂಡಲ್‌ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್ ಕೆಲವು ದಿನಗಳ ಹಿಂದೆ ಬೆಂಗಳೂರಿನಲ್ಲಿ ನಡೆದ ಚಿನ್ನದ ಮೇಳ ಕಾರ್ಯಕ್ರಮದಕ್ಕೆ ಹೊಸ ಶೈಲಿಯಲ್ಲಿ ಫೋಟೋಶೂಟ್ ಮಾಡಿಸಿದ್ದಾರೆ.
ಕನ್ನಡ ಚಿತ್ರರಂಗದ ಲೇಡಿ ಸೂಪರ್ ಸ್ಟಾರ್ ಹೊಸ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಛಾಯಾಗ್ರಹಕ್ಕೆ ಭುವನ್ ಫೋಟೋಗಳನ್ನು ಕ್ಲಿಕ್ ಮಾಡಿದ್ದಾರೆ.
ಕಪ್ಪು ಬಣ್ಣದ ಇಂಡೋವೆಸ್ಟ್ರನ್ ಡ್ರೆಸ್‌ಗೆ ಹಸಿರು ಬಣ್ಣದ ಸ್ಟೋನ್ ಸರವನ್ನು ಧರಿಸಿದ್ದಾರೆ.ಮತ್ತೊಂದು ಕೆಂಪು ಬಣ್ಣದ ಲೆಹೆಂಗಾಗೆ ಸಿಂಪಲ್ ಲುಕ್ ಆಯ್ಕೆ ಮಾಡಿಕೊಂಡಿದ್ದಾರೆ.
ಸದ್ಯ ರಚಿತಾ ರಾಮ್ ಶಬರಿ ಸರ್ಚಿಂಗ್ ಫಾರ್ ರಾವಣ, ಲವ್ ಮಿ ಆರ್ ಹೇಟ್ ಮೀ, ಸಂಜು ವೆಡ್ಸ್ ಗೀತಾ 2 ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಿನಿಮಾ ಚಿತ್ರೀಕರಣಗಳು ನಡೆಯುತ್ತಿದೆ.
ಬುಲ್ ಬುಲ್ ಚಿತ್ರದ ಮೂಲಕ ಬಣ್ಣದ ಪ್ರಪಂಚಕ್ಕೆ ಎಂಟ್ರಿ ಕೊಟ್ಟ ರಚಿತಾ ರಾಮ್ ಯಾಕೆ ಹೆಚ್ಚಾಗಿ ಟ್ರೆಡಿಷನಲ್ ಸೀರೆಯಲ್ಲಿ ಕಾಣಿಸಿಕೊಳ್ಳುವುದು ಎಂದು ಬಹುತೇಕರು ಪ್ರಶ್ನಸುತ್ತಾರೆ.
ರಚಿತಾ ರಾಮ್ ಅಪ್ಲೋಡ್ ಮಾಡುವ ಪ್ರತಿಯೊಂದು ಫೋಟೋ ವೈರಲ್ ಆಗುತ್ತದೆ. ರಚಿತಾ ರಾಮ್ ಕನ್ನಡಿಗರ ಮನಸ್ಸಿಗೆ ತುಂಬಾನೇ ಹತ್ತಿರವಾದವರು. ಹೀಗಾಗಿ ಬಹುತೇಕ ಜಾಹೀರಾತು ಸಂಸ್ಥೆಗಳು ರಚ್ಚು ಸಂಪರ್ಕ ಮಾಡುತ್ತಾರೆ.
ರಚಿತಾ ರಾಮ್ ಎಷ್ಟೇ ಮಾಡರ್ನ್ ಬಟ್ಟೆ ಧರಿಸಿದ್ದರು ಕೈಯಲ್ಲಿ ಇರುವ ಕೆಂಪು ಮತ್ತು ಕಪ್ಪು ಧಾರಾವನ್ನು ತೆಗೆಯುವುದಿಲ್ಲ. ದೃಷ್ಟಿ ತಡೆಯುವುದಕ್ಕೆ ಈ ದೇವರ ದಾರವನ್ನು ಕಟ್ಟಿಕೊಂಡಿದ್ದಾರೆ.
ಸ್ಟಾರ್ ನಟಿಯಾದರೂ ರಚಿತಾ ರಾಮ್ ಹಣೆ ಬೊಟ್ಟು ಮರೆಯುವುದಿಲ್ಲ.ಹಣೆ ಬೊಟ್ಟು ಇಟ್ಟರೆನೇ ಚೆಂದ ಎಂದು ಆಗಾಗ ಹೇಳುತ್ತಿರುತ್ತಾರೆ. ಶೂಟಿಂಗ್ ಇಲ್ಲದ ಸಮಯದಲ್ಲಿ ಕುಂಕುಮ ಮತ್ತು ಗಂಧ ಕೂಡ ಹಣೆಗೆ ಇಟ್ಟುಕೊಳ್ಳುತ್ತಾರೆ.