ಭಾರಿ ಮೊತ್ತಕ್ಕೆ ಅಂದೊಂದಿತ್ತು ಕಾಲ ಆಡಿಯೋ ಹಕ್ಕು ಮಾರಾಟ
ವಿನಯ್ ಮತ್ತು ಅದಿತಿ ಕಾಂಬಿನೇಷನ್‌ನ ಅಂದೊಂದಿತ್ತು ಕಾಲ. ನಿರೀಕ್ಷೆಗೂ ಮೀರಿದ ಮೊತ್ತಕ್ಕೆ ಆಡಿಯೋ ಮಾರಾಟ.
ವಿನಯ್ ರಾಜ್‌ಕುಮಾರ್ ಹಾಗೂ ಅದಿತಿ ಪ್ರಭುದೇವ ಪ್ರಧಾನ ಪಾತ್ರದಲ್ಲಿ ಅಭಿನಯಿಸಿರುವ ‘ಅಂದೊಂದಿತ್ತು ಕಾಲ’ ಚಿತ್ರದ ಆಡಿಯೋ ಹಕ್ಕು ಭಾರಿ ಮೊತ್ತಕ್ಕೆ ಮಾರಾಟವಾಗಿದೆ ಎಂದು ಚಿತ್ರತಂಡ ತಿಳಿಸಿದೆ. ವಿನಯ್ ರಾಜ್‌ಕುಮಾರ್ ನಟಿಸಿರುವ ಸಿನಿಮಾಗಳಲ್ಲಿಯೇ ಅತಿ ಹೆಚ್ಚು ಮೊತ್ತಕ್ಕೆ ಆಡಿಯೋ ಹಕ್ಕು ಮಾರಾಟವಾದ ಚಿತ್ರ ಎಂಬ ಹೆಗ್ಗಳಿಕೆ ಈ ಚಿತ್ರಕ್ಕೆ ದೊರೆತಿದೆ.
ಎ2 ಮ್ಯೂಸಿಕ್ ಕಂಪನಿ ಆಡಿಯೋ ಹಕ್ಕುಗಳನ್ನು ಖರೀದಿಸಿದೆ. ವಿ.ರಾಘವೇಂದ್ರ ಸಂಗೀತ ನಿರ್ದೇಶನ ಮಾಡಿದ್ದಾರೆ. ಸಿದ್ ಶ್ರೀರಾಮ್, ವಿಜಯಪ್ರಕಾಶ್‌ರಂತಹ ಖ್ಯಾತನಾಮರು ಹಾಡಿದ್ದಾರೆ. ಈ ಸಿನಿಮಾ ಬಿಗ್ ಬಜೆಟ್‌ನಲ್ಲಿ ನಿರ್ಮಾಣವಾಗಿದೆ ಎಂದು ಚಿತ್ರತಂಡ ತಿಳಿಸಿದ್ದು, ಶೀಘ್ರವೇ ಬಿಡುಗಡೆ ಮಾಡುವ ಸಿದ್ಧತೆಯಲ್ಲಿದೆ.
ಹಣ ಮತ್ತು ಕತೆ ನೋಡಿ ಸಿನಿಮಾ ಆಯ್ಕೆ ಮಾಡುತ್ತೇನೆ: ರವಿಚಂದ್ರನ್
90ರ ದಶಕದ ಕತೆ ಹೊಂದಿರುವ ಈ ಸಿನಿಮಾದಲ್ಲಿ ರವಿಚಂದ್ರನ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಭುವನ್ ಸುರೇಶ್ ನಿರ್ಮಿಸುತ್ತಿರುವ ಈ ಚಿತ್ರವನ್ನು ಕೀರ್ತಿ ಕುಚೇಲ ನಿರ್ದೇಶಿಸಿದ್ದಾರೆ. ನಿಶಾ ಮಿಲನ, ಅರುಣಾ ಬಾಲರಾಜ್, ಜಗ್ಗಪ್ಪ, ಗೋವಿಂದೇ ಗೌಡ ತಾರಾಗಣದಲ್ಲಿದ್ದಾರೆ.
‘ಅಂದೊಂದಿತ್ತು ಕಾಲ’ ಸಿನಿಮಾ ಹಳೆಯ ನಿಷ್ಕಲ್ಮಶಸ್ನೇಹದ ಕತೆ ಹೇಳುವ ಚಿತ್ರ. ಮೊಬೈಲ್ ಇಲ್ಲದ ಕಾಲವನ್ನು ರೀಕಾಲ್ ಮಾಡುವ ಪ್ರಯತ್ನಇಲ್ಲಾಗಿದೆ. ಹೀರೋ ವಿನಯ್ ರಾಜ್‌ಕುಮಾರ್ ನಿರ್ದೇಶಕನಾಗಿ ಕಾಣಿಸಿಕೊಂಡಿದ್ದಾರೆ. ಇಲ್ಲಿಹೀರೋಯಿಸಂ, ಅಬ್ಬರಗಳಿಲ್ಲ. ಒಬ್ಬ ಮಧ್ಯಮ ವರ್ಗದ ಹುಡುಗನ ವಿವಿಧ ಮುಖಗಳನ್ನುವಿನಯ್ ಪಾತ್ರದ ಮೂಲಕ ಅನಾವರಣ ಮಾಡುತ್ತಿದ್ದೇನೆ. ನಾಯಕಿ ಅದಿತಿ ಪ್ರಭುದೇವ ತೀರ್ಥಹಳ್ಳಿಯಲ್ಲಿಸಂಗೀತ ವಿದ್ಯಾರ್ಥಿನಿ. ಗಾಯಕ ವಿಜಯ ಪ್ರಕಾಶ್ ಅವರನ್ನು ನಮ್ಮ ಸಿನಿಮಾಕ್ಕೆಕರೆತರುವ ಪ್ರಯತ್ನ ಜಾರಿಯಲ್ಲಿದೆ. ಜೊತೆಗೆ ಒಬ್ಬ ಸ್ಟಾರ್ ನಿರ್ದೇಶಕ ನಟಿಸುತ್ತಿದ್ದಾರೆ.ಅವರ್ಯಾರು ಅನ್ನೋದನ್ನು ಸದ್ಯದಲ್ಲೇ ರಿವೀಲ್ ಮಾಡ್ತೀನಿ.ಮೂರನೇ ಹಂತದ ಚಿತ್ರೀಕರಣ ಬೆಂಗಳೂರುಸುತ್ತಮುತ್ತ ನಡೆಯಲಿದೆ. ಅದಾಗಿ ತೀರ್ಥಹಳ್ಳಿಯಲ್ಲಿ ಕೊನೆಯ ಹಂತದ ಚಿತ್ರೀಕರಣನಡೆಯುತ್ತದೆ. ಸುರೇಶ್ ಹಾಗೂ ಎನ್. ಲೋಕೇಶ್ ಈ ಸಿನಿಮಾದ ನಿರ್ಮಾಪಕರು. ನನ್ನ ಬಳಿಕತೆಯನ್ನೂ ಕೇಳದೇ, ವಿಶ್ವಾಸದಿಂದ ಬಂಡವಾಳ ಹೂಡಿದ್ದು ನನ್ನ ಜವಾಬ್ದಾರಿ ಹೆಚ್ಚಿಸಿದೆ.