ಸಂಜಯ್ ಗಂಭೀರ್ ಹೆಸರಿನ ಮೂಲಕ ವಿಕ್ರಾಂತ್ ರೋಣ ಅಖಾಡಕ್ಕೆ ಎಂಟ್ರಿ ಕೊಟ್ಟ ನಿರೂಪ್ ಭಂಡಾರಿ. ಹ್ಯಾಪಿ ಬರ್ತಡೇ ನಿರೂಪ್.

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ನಾಯಕನಾಗಿರುವ ‘ವಿಕ್ರಾಂತ್‌ ರೋಣ’ ಚಿತ್ರದಲ್ಲಿ ನಿರೂಪ್‌ ಭಂಡಾರಿ ಅಭಿನಯಿಸುತ್ತಿದ್ದಾರೆ. ಅವರ ಹುಟ್ಟುಹಬ್ಬದ ಪ್ರಯುಕ್ತ ಚಿತ್ರತಂಡ ಬರ್ತಡೇ ಪೋಸ್ಟರ್ ಹಾಗೂ ಪಾತ್ರದ ಹೆಸರು ರಿವೀಲ್ ಮಾಡಿದ್ದಾರೆ.

ನಿರೂಪ್ ಭಂಡಾರಿ ಅವರು ಸಂಜೀವ್ ಗಂಭೀರ್ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಿರೂಪ್‌ ಹುಟ್ಟುಹಬ್ಬಕ್ಕೆ ಸಂಜಯ್‌ ಗಾಂಭೀರ್‌ ಪಾತ್ರದ ವಿಶೇಷ ಪೋಸ್ಟರ್‌ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ನಿರೂಪ್‌ ಬೇಟೆಗಾರನಾಗಿರುವ ಹಿಂಟ್‌ ಸಿಗುತ್ತಿದೆ. ಈ ಪೋಸ್ಟರ್‌ ಅನ್ನು ಕಿಚ್ಚ ಸುದೀಪ್‌, ನಿರ್ದೇಶಕ ಅನೂಪ್‌ ಭಂಡಾರಿ ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿ ನಿರೂಪ್‌ ಅವರಿಗೆ ಜನುಮ ದಿನದ ಶುಭ ಹಾರೈಕೆ ತಿಳಿಸಿದ್ದಾರೆ. 

ಜಾಕ್ವೆಲಿನ್ ಪಾತ್ರ ರಿವೀಲ್; 'ವಿಕ್ರಾಂತ್ ರೋಣ'ನ ಗಡಂಗ್ ರಕ್ಕಮ್ಮ ಹೇಗಿದ್ದಾಳೆ ನೋಡಿ!

ಕೆಲವು ದಿನಗಳ ಹಿಂದೆ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಪಾತ್ರ ರಿವೀಲ್ ಮಾಡಲಾಗಿತ್ತು. ಸ್ಪೆಷಲ್ ಹಾಡಿನಲ್ಲಿ ಕಾಣಿಸಿಕೊಳ್ಳುತ್ತಿರುವ ಗಡಂಗ್ ರಕ್ಕಮ್ಮ ಎಂಬುವುದು ಪಾತ್ರದ ಹೆಸರೆಂದು ಬಹಿರಂಗಗೊಳಿಸಲಾಗಿತ್ತು. ನಿರ್ದೇಶಕ ಅನೂಪ್ ಭಂಡಾರಿ ಪ್ರತಿಯೊಬ್ಬ ಪಾತ್ರಧಾರಿಗೂ ವಿಭಿನ್ನ ಹೆಸರನ್ನು ಆಯ್ಕೆ ಮಾಡಿದ್ದಾರೆ. ನಟಿ ನೀತಾ ಅಶೋಕ್ ಪಾತ್ರದ ಹೆಸರು ಹಾಗೂ ಲುಕ್ ರಿವೀಲ್ ಮಾಡುವುದು ಬಾಕಿ ಇದೆ.

ಜಾಕ್‌ ಮಂಜು ಈ ಸಿನಿಮಾದ ನಿರ್ಮಾಪಕರು. ಇದೇ ಸಂದರ್ಭದಲ್ಲಿ ಶೀತಲ್‌ ಶೆಟ್ಟಿ ನಿರ್ದೇಶನದ ‘ವಿಂಡೋಸೀಟ್‌’ ಸಿನಿಮಾ ಪೋಸ್ಟರ್‌ ಕೂಡ ರಿಲೀಸ್‌ ಆಗಿದೆ. ವಿಂಡೋಸೀಟ್ ಚಿತ್ರದಲ್ಲಿ ನಿರೂಪ್ ಪಾತ್ರದ ಬಗ್ಗೆ ಸುಳಿವು ಸಿಕ್ಕಿಲ್ಲ.

Scroll to load tweet…