ಈ ಚಿತ್ರದ ನಿರ್ದೇಶಕ ಸುರೇಶ್‌ ಆರ್ಯ ಅವರು ರಾಜಮೌಳಿ ಗರಡಿಯಲ್ಲಿ ಗುರುತಿಸಿಕೊಂಡವರು. ಕನ್ನಡ ಹಾಗೂ ತೆಲುಗಿನಲ್ಲಿ ಈ ಸಿನಿಮಾ ಸೆಟ್ಟೇರಿದೆ. ವಿಜಯೇಂದ್ರ ಪ್ರಸಾದ್‌ ಅವರು ಕ್ಯಾಮರಾ ಚಾಲನೆ, ಡಾ ರಾಜಕುಮಾರ್‌ ಅವರ ಹಿರಿಯ ಪುತ್ರಿ ಲಕ್ಷ್ಮೀ ಹಾಗೂ ಗೋವಿಂದ್‌ರಾಜ್‌ ದಂಪತಿ ಚಿತ್ರಕ್ಕೆ ಕ್ಲಾಪ್‌ ಮಾಡಿದರು.

ಇನ್ಮುಂದೆ ಪೈರಸಿ ಆಟ ನಡೆಯಲ್ಲ, ಯಾಕಂದ್ರೆ ಪೆಂಡಿ ಬಂದಿದೆಯಲ್ಲ! 

ಚಿತ್ರದ ನಾಯಕಿ​-ನಿರ್ಮಾಪಕಿ ವರ್ಷಾ ತಮ್ಮಯ್ಯ. ತೆಲುಗಿನಲ್ಲಿ 5 ಸಿನಿಮಾ ಮಾಡಿರುವ ವರ್ಷಾ ಅವರಿಗೆ ಕನ್ನಡದಲ್ಲಿ ಇದು ಮೊದಲ ಸಿನಿಮಾ. ‘ಚಿತ್ರದ ಕತೆ ಕೇಳಿದಾಗಲೇ ಒಂದು ಕುತೂಹಲವಿತ್ತು. ಸೊಗಸಾದ ಕತೆ ಮಾಡಿಕೊಂಡಿದ್ದಾರೆ. ಎಳೆ ಕೇಳಿ ನನಗೇ ಆಶ್ಚರ್ಯವಾಯಿತು. ತಂಡಕ್ಕೆ ಒಳ್ಳೆಯದಾಗಲಿ. ಇನ್ನು ಈ ಚಿತ್ರದ ಮುಹೂರ್ತಕ್ಕೆ ಡಾ. ರಾಜಕುಮಾರ್‌ ಮಗಳು ಬಂದಿದ್ದಾರೆ ಎಂದರೆ ಅದೇ ಒಂದು ವಿಶೇಷ. ದೊಡ್ಡಮನೆಯವರ ಆಶೀರ್ವಾದ ಈ ಚಿತ್ರದ ಮೇಲಿದೆ ಎಂದೇ ಅರ್ಥ’ ಎಂದರು ವಿಜಯೇಂದ್ರ ಪ್ರಸಾದ್‌.

ಅರಿಷಡ್ವರ್ಗ ಇದ್ದರೇನೇ ಮನುಷ್ಯರಾಗೋದು: ಅರವಿಂದ್‌ ಕಾಮತ್‌ 

ನಿರ್ದೇಶಕ ಜೋ ಸೈಮನ್‌ ಈ ಚಿತ್ರಕ್ಕೆ ಶೀರ್ಷಿಕೆ ನೀಡಿದ್ದು. ಜತೆಗೆ ಅವರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ ಕೂಡ. ‘ಇದೊಂದು ಮಹಿಳಾ ಪ್ರಧಾನ ಸಿನಿಮಾ. ‘ಅಗ್ನಿಪ್ರವ’ ಎಂದರೆ ಬೆಳಕು ಪ್ರವಹಿಸುವುದು ಎಂದರ್ಥ. ಇಡೀ ಸಿನಿಮಾ ನಾಯಕಿ ಸುತ್ತಲೇ ಸಾಗುವುದರಿಂದ ಕಮರ್ಷಿಯಲ… ಅಂಶಗಳ ಜತೆಗೆ ಒಂದಷ್ಟುಮಿಸ್ಟರಿ ಥ್ರಿಲ್ಲರ್‌ ಅಂಶಗಳನ್ನು ಸೇರಿಸಿದ್ದೇವೆ. ಸಿನಿಮಾ ನೋಡುತ್ತಿದ್ದರೆ, ನಾಯಕಿ ವಿಲನ್‌ ಅನಿಸುತ್ತಾರೆ. ಆದರೆ, ಅವರ ಪಾತ್ರ ಬೇರೆಯದ್ದೇ ಆಗಿರುತ್ತದೆ’ ಎಂದು ಚಿತ್ರದ ಕುರಿತು ಮಾಹಿತಿ ನೀಡಿದ್ದು ನಿರ್ದೇಶಕರು.