ಇತ್ತೀಚಿಗೆ ಪರಪ್ಪನ ಅಗ್ರಹಾರದಲ್ಲಿ ಕೈದಿಗಳಿಗೆ ಮೊಬೈಲ್ ಫೋನ್, ಟಿವಿ ಸೇರಿದಂತೆ ಕೇಳಿದ್ದೆಲ್ಲಾ ಸೌಲತ್ತು ನೀಡಲಾಗ್ತಿದೆ ಅನ್ನೋದು ವೈರಲ್ ಆದ ವಿಡಿಯೋಸ್ ಮೂಲಕ ಜಗಜ್ಜಾಹೀರಾಗಿತ್ತು. ಟೆರೆರಿಸ್ಟ್ ರೇಪಿಸ್ಟ್​ಗಳಿಗೂ ಮೊಬೈಲ್ ಕೊಟ್ಟಿರೋ ವಿಡಿಯೋಸ್ ಹೊರಬಂದು ಸಂಚಲನ ಮೂಡಿಸಿದ್ವು. ಈಗೇನಾಯ್ತು ನೋಡಿ..

ವಿಜಯಲಕ್ಷ್ಮೀಗೆ ಸುತ್ತಿಕೊಂಡ್ತಾ ಕಂಟಕ?

ಇತ್ತೀಚಿಗೆ ಪರಪ್ಪನ ಅಗ್ರಹಾರದಲ್ಲಿನ (Parappana Agrahara) ಕೈದಿಗಳ ದರ್ಬಾರ್ ವಿಡಿಯೋಸ್ ವೈರಲ್ ಆದ ಮೇಲೆ, ಅವುಗಳ ಕುರಿತ ಗಂಭೀರ ತನಿಖೆ ನಡೀತಾ ಇದೆ. ಜೈಲು ಸಿಬ್ಬಂದಿಯನ್ನ ಅಮಾನತ್ತು ಮಡೋದ್ರ ಜೊತೆಗೆ ಜೈಲಿನಲ್ಲಿ ವಿಡಿಯೋ ರೆಕಾರ್ಡ್ ಮಾಡಿ ಶೇರ್ ಮಾಡಿದ್ದು ಯಾರು ಅನ್ನೋ ತನಿಖೆ ಕೂಡ ನಡೀತಿದೆ. ಈ ತನಿಖೆಯಲ್ಲೀಗ ವಿಜಯಲಕ್ಷ್ಮೀ ದರ್ಶನ್ (Vijayalakshmi Darshan) ಹೆಸರು ಕೇಳಿಬಂದಿದೆ.

ಪರಪ್ಪನ ಅಗ್ರಹಾರ ವೈರಲ್ ವಿಡಿಯೋ ತನಿಖೆ, ವಿಜಯಲಕ್ಷ್ಮೀ ದರ್ಶನ್​ ಕೈವಾಡದ ಬಗ್ಗೆ ಶಂಕೆ..!

ಯೆಸ್ ಇತ್ತೀಚಿಗೆ ಪರಪ್ಪನ ಅಗ್ರಹಾರದಲ್ಲಿ ಕೈದಿಗಳಿಗೆ ಮೊಬೈಲ್ ಫೋನ್, ಟಿವಿ ಸೇರಿದಂತೆ ಕೇಳಿದ್ದೆಲ್ಲಾ ಸೌಲತ್ತು ನೀಡಲಾಗ್ತಿದೆ ಅನ್ನೋದು ವೈರಲ್ ಆದ ವಿಡಿಯೋಸ್ ಮೂಲಕ ಜಗಜ್ಜಾಹೀರಾಗಿತ್ತು. ಟೆರೆರಿಸ್ಟ್ ರೇಪಿಸ್ಟ್​​ಗಳಿಗೂ ಮೊಬೈಲ್ ಕೊಟ್ಟಿರೋ ವಿಡಿಯೋಸ್ ಹೊರಬಂದು ಸಂಚಲನ ಮೂಡಿಸಿದ್ವು.

ಈ ಬಗ್ಗೆ ಕ್ರಮಗೊಂಡಿದ್ದ ಗೃಹ ಸಚಿವರು, ಸಂಬಂಧಪಟ್ಟ ಅಧಿಕಾರಿಗಳನ್ನ ಅಮಾನತ್ತು ಮಾಡಿ, ಈ ಕುರಿತ ಸಮಗ್ರ ತನಿಖೆಗೆ ಆದೇಶ ನೀಡಿದ್ರು. ಸದ್ಯ ಈ ಕುರಿತ ತನಿಖೆ ಚುರುಕಾಗಿ ನಡೀತಾ ಇದ್ದು, ಜೈಲೊಳಗಿನ ರಾಜಾತಿಥ್ಯದ ಜೊತೆಗೆ ಈ ವಿಡಿಯೋಗಳು ಹೊರಬಂದಿದ್ದು ಹೇಗೆ , ಹೊರಬಂದು ಹಂಚಿಕೆ ಆಗಿದ್ದು ಹೇಗೆ..? ಅನ್ನೋದರ ತನಿಖೆನೂ ನಡೀತಾ ಇದೆ.

ವಿಜಯಲಕ್ಷ್ಮೀ ಹೆಸರು ಬಾಯ್ಬಿಟ್ರಾ ಧನ್ವೀರ್..? ದಾಸನ ಪತ್ನಿಗೆ ಅಂಟಿತಾ ‘ವೈರಲ್’ ಫೀವರ್.?

ಹೌದು ಜೈಲಿನಿಂದ ಸೋರಿಕೆಯಾಗಿ ವೈರಲ್ ಆಗಿದ್ದ ವಿಡಿಯೋಗಳನ್ನ ಹೊರಗಡೆ ಹರಿಬಿಟ್ಟಿದ್ದು, ದರ್ಶನ್ ಆಪ್ತ ನಟ ಧನ್ವೀರ್ ಅನ್ನೋ ಸಂಶಯದ ಮೇರೆಗೆ ವಿಚಾರಣೆ ಮಾಡಲಾಗಿತ್ತು. ಧನ್ವೀರ್ ನ ಸಿಸಿಬಿ ಕಚೇರಿಗೆ ಕರೆಸಿ ಪ್ರಶ್ನೆ ಮೇಲೆ ಪ್ರಶ್ನೆ ಹಾಕಿ ಬೆವರಿಳಿಸಿದ್ರು. ಜೊತೆಗೆ ಆತನ ಮೊಬೈಲ್ ವಶಕ್ಕೆ ಪಡೆದು ವಿಡಿಯೋಗಳ ಮೂಲಕ್ಕೆ ಕೈ ಹಾಕಿದ್ರು.

ಮೊಬೈಲ್ ನಿಂದ ಒಳಬಂದ ಮತ್ತು ಹೊರಹೋದ ಇಮೇಜ್, ವಿಡಿಯೋಗಳ ವಿವರಗಳನ್ನ ಮುಂದಿಟ್ಟುಕೊಂಡು ಪ್ರಶ್ನೆ ಮಾಡಿದಾಗ ಗಡ ಗಡ ನಡುಗಿ ಹೋಗಿರೋ ಧನ್ವೀರ್, ತನಗೆ ಈ ವಿಡಿಯೋಗಳನ್ನ ವಕೀಲರು ಕೊಟ್ರು. ಅವುಗಳನ್ನ ನಾನು ದರ್ಶನ್ ಪತ್ನಿ ವಿಜಯಲಕ್ಷ್ಮೀಗೆ ಕಳಿಸಿದೆ. ಮುಂದೇನಾಯ್ತು ಗೊತ್ತಿಲ್ಲ ಅಂದಿದ್ದಾರಂತೆ.

ಪತಿಗಾಗಿ ಕಾನೂನು ಸಮಸ್ಯೆಯಲ್ಲಿ ಸಿಲುಕಿದ್ರಾ ಪತ್ನಿ..?

ಹೌದು ದರ್ಶನ್​ಗೆ ಕೇಳಿದ ಸೌಲಭ್ಯಗಳನ್ನ ಕೊಡದೇ ಜೈಲು ಅಧಿಕಾರಿಗಳು ಸತಾಯಿಸ್ತಾ ಇದ್ದಾರೆ. ಪದೇ ಪದೇ ಕೋರ್ಟ್​ಗೆ ಮನವಿ ಮಾಡಿದ್ರೂ, ಹೊದೆಯೋದಕ್ಕೆ ಕಂಬಳಿ ಕೂಡ ಕೊಡದೇ ದಾಸನಿಗೆ ಆಟ ಆಡಿಸ್ತಾ ಇದ್ದಾರೆ. ದರ್ಶನ್​ಗೆ ಇಷ್ಟು ಕಾಟ ಕೊಡೋ ಜೈಲಿನಲ್ಲಿ ಇತರೇ ಕೈದಿಗಳಿಗೆ ಏನೆಲ್ಲಾ ಸೌಲತ್ತು ಸಿಗ್ತಾ ಇದೆ ನೋಡಿ ಅಂತ ಪ್ರೂವ್ ಮಾಡ್ಲಿಕ್ಕೆ ಹೋದ ದಾಸನ ಬಳಗ ಈ ವಿಡಿಯೋ ವೈರಲ್ ಮಾಡ್ತಾ..? ವಿಜಯಲಕ್ಷ್ಮೀ ಕೂಡ ಈ ಕೆಲಸದಲ್ಲಿ ಭಾಗಿಯಾದ್ರಾ ಗೊತ್ತಿಲ್ಲ.

ಪತಿಯನ್ನ ಉಳಿಸೋದಕ್ಕೆ ವಿಜಯಲಕ್ಷ್ಮೀ ಕಾನೂನು ಹೋರಾಟ ಮಾಡ್ತಿರೋದೇನೋ ಸರಿ. ಆದ್ರೆ ಹೀಗೆ ಅನ್ಯಮಾರ್ಗದಲ್ಲಿ ವಿಡಿಯೋ ತರಿಸಿ ವೈರಲ್ ಮಾಡೋ ಸಾಹಸಕ್ಕೆ ಕೈ ಹಾಕಿದ್ರೆ ಖಂಡಿತ ಅವರೂ ಕೂಡ ಬೆಲೆ ತೆರಬೇಕಾಗುತ್ತೆ. ಸದ್ಯ ಧನ್ವೀರ್ ಹೇಳಿಕೆ ಆಧರಿಸಿ ವಿಜಯಲಕ್ಷ್ಮೀಯನ್ನೂ ಸಿಸಿಬಿ ವಿಚಾರಣೆಗೆ ಕರೆಯೋ ಸಾಧ್ಯತೆ ಇದೆ. ಮೊಬೈಲ್ ಮೂಲಕ ಸಾಕ್ಷಿ ಸಿಕ್ರೆ ವಿಜಯಲಕ್ಷ್ಮೀಗೆ ಕಂಟಕ ತಪ್ಪಿದ್ದಲ್ಲ. ಒಟ್ನಲ್ಲಿ ವಿಜಯಲಕ್ಷ್ಮೀ ದರ್ಶನ್​ಗೀಗ ವೈರಲ್ ಫೀವರ್ ಶುರುವಾಗಿದೆ.

ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ...