ನಟಿ ಕಾರುಣ್ಯ ರಾಮ್, ನಟ ದರ್ಶನ್ ಮತ್ತು ವಿಜಯಲಕ್ಷ್ಮಿ ಅವರ ಬಗ್ಗೆ ಮಾತನಾಡಿದ್ದಾರೆ. ಕಷ್ಟ ಬಂದಾಗ ನಮ್ಮವರೇ ಆಸರೆಯಾಗುವುದು ಮುಖ್ಯವೆಂದಿದ್ದಾರೆ. ವಿಜಯಲಕ್ಷ್ಮಿ ಅವರು ಕಷ್ಟದ ಸಮಯದಲ್ಲಿ ಗಟ್ಟಿಯಾಗಿ ನಿಂತಿದ್ದು ಸ್ಫೂರ್ತಿದಾಯಕ. ಜೀವನದಲ್ಲಿ ತಪ್ಪುಗಳನ್ನು ಅರಿತು ಸರಿಪಡಿಸಿಕೊಳ್ಳಬೇಕು. ವಿಜಯಲಕ್ಷ್ಮಿ ಅವರ ಪರಿಶ್ರಮಕ್ಕೆ ತಕ್ಕ ಫಲ ಸಿಕ್ಕಿದೆ ಎಂದು ಕಾರುಣ್ಯ ರಾಮ್ ಹೇಳಿದ್ದಾರೆ.
ಒಂದಲ್ಲ ಒಂದು ಕಾರಣಕ್ಕೆ ದುಡ್ಡಿಯಲ್ಲಿರುವ ಕನ್ನಡದ ನಟಿ ಕಾರುಣ್ಯ ರಾಮ್ ಮೊದಲ ಸಲ ನಟ ದರ್ಶನ್ ಮತ್ತು ಅವರ ಪತ್ನಿ ವಿಜಯಲಕ್ಷ್ಮಿ ನಡೆ ಹಾಗೂ ನಿರ್ಧಾರಗಳ ಬಗ್ಗೆ ಮಾತನಾಡಿದ್ದಾರೆ. ಕಷ್ಟ ಅಂತ ಬಂದಾಗ ಯಾರೂ ಆಗಲ್ಲ ನಮಗೆ ನಾವೇ ನಿಂತುಕೊಳ್ಳಬೇಕು ನಮ್ಮವರು ಮಾತ್ರ ನಿಂತುಕೊಳ್ಳುವುದು ಅನ್ನೋ ಮಾತು ಎಷ್ಟು ಸತ್ಯ ಎಂದು ವಿವರಿಸಿದ್ದಾರೆ ಕಾರುಣ್ಯ ರಾಮ್.
'ನಾವು ಚೆನ್ನಾಗಿದ್ದಾಗ ಬರೋದು ಮುಖ್ಯ ಅಲ್ಲ ನಾವು ಕಷ್ಟದಲ್ಲಿ ಇದ್ದಾಗ ಸಹಾಯಕ್ಕೆ ಬರುವುದು ಮುಖ್ಯ. ಅಕ್ಕಪಕ್ಕದವರೇ ನಮ್ಮ ಕಷ್ಟಗಳನ್ನು ನೋಡಿ ನಗುತ್ತಿರುವ ಕಾಲವಿದು. ದರ್ಶನ್ ಸರ್ ಹೇಳುವ ಮಾತುಗಳು ನಿಜ. ನನ್ನ ಜೀವನದಲ್ಲಿ ತುಂಬಾ ಕಷ್ಟಗಳನ್ನು ಎದುರಿಸುತ್ತಿರುವಾಗ ಯಾರೂ ಬರಲಿಲ್ಲ ಹೀಗಾಗಿ ನಾನು ಮನುಷ್ಯರನ್ನು ನಂಬುವುದನ್ನು ನಿಲ್ಲಿಸಿಬಿಟ್ಟಿದ್ದೀನಿ ನನ್ನ ಕೆಲಸ ನನ್ನ ಶ್ರಮ ನನ್ನ ಹಣೆಬರಹ ಅಷ್ಟೇ ನಾನು ನಂಬುವುದು' ಎಂದು ಖಾಸಗಿ ಟಿವಿ ಸಂದರ್ಶನದಲ್ಲಿ ಕಾರುಣ್ಯ ರಾಮ್ ಮಾತನಾಡಿದ್ದಾರೆ.
3 ಲಕ್ಷದ ನೆಕ್ಲೆಸ್ ಕಳೆದುಕೊಂಡ ವಿಜಯಲಕ್ಷ್ಮಿ;ದರ್ಶನ್ ಆಗ ಏನ್ ಹೇಳಿದ್ರು ಗೊತ್ತಾ?
'ದರ್ಶನ್ ಸರ್ ಬಗ್ಗೆ ಮಾತನಾಡುವಷ್ಟು ದೊಡ್ಡ ವ್ಯಕ್ತಿ ನಾನಲ್ಲ. ನನ್ನ ಪುಟ್ಟ ಅಭಿಮಾನಿ..ಅವರನ್ನು ಚಿಕ್ಕವಯಸ್ಸಿನಿಂದ ನೋಡಿಕೊಂಡು ಬರುತ್ತಿರುವೆ ಅವರ ಅಭಿಮಾನಿ ಆಗಿದ್ದೆ, ಆಗಿದ್ದೀನಿ ಹಾಗೂ ಹಾಗೇ ಇರುತ್ತೀನಿ. ಮನುಷ್ಯರ ಜೀವನದಲ್ಲಿ ಕಷ್ಟ ಸುಖ ಬಂದೇ ಬರುತ್ತದೆ ಅದನ್ನು ಹೇಗೆ ಎದುರಿಸುತ್ತೀವಿ ನಮ್ಮೊಟ್ಟಿಗೆ ಇರುವವರು ಎಷ್ಟು ಸಪೋರ್ಟಿವ್ ಆಗಿರುತ್ತಾರೆ ಅನ್ನೋದು ಮುಖ್ಯ. ಈ ವಿಚಾರದಲ್ಲಿ ವಿಜಯಲಕ್ಷ್ಮಿ ಅಕ್ಕ ಅವರನ್ನು ಮೆಚ್ಚಲೇಬೇಕು. ಆ ಸಮಯದಲ್ಲಿ ವಿಜಯಲಕ್ಷ್ಮಿ ಅಕ್ಕ, ತಾಯಿ ಮೀನಾ, ಸಹೋದರರು ಮತ್ತು ಸ್ನೇಹಿತರು ನಿಂತುಕೊಂಡಿದ್ದಾರೆ. ತಪ್ಪು ಆಗಿದ್ರೂ ಆಗದೇ ಇದ್ರು ಅದನ್ನು ತಿದ್ದಿಕೊಂಡು ಅದರಿಂದ ಹೊರ ಬಂದು ಜೀವನ ನಡೆಸಬೇಕು. ಇದರಿಂದ ಕಲಿತ ಪಾಠ ಏನ್ ಅಂದ್ರೆ ಜೀವನದಲ್ಲಿ ಎಡುವುದಕ್ಕಿಂತ ಮೊದಲು ಯೋಚನೆ ಮಾಡಬೇಕು, ಯಾವುದೇ ತಪ್ಪುಗಳನ್ನು ಅರ್ಥ ಮಾಡಿಕೊಳ್ಳಬೇಕು.ನಮ್ಮ ಸುತ್ತಮುತ್ತ ಇರುವ ಜನರು ಯಾವ ರೀತಿ ಇರ್ತಾರೆ ಅನ್ನೋದು ತುಂಬಾ ಮುಖ್ಯವಾಗುತ್ತದೆ. ವಿಜಯಕ್ಕ ತುಂಬಾ ಗಟ್ಟಿಯಾಗಿ ನಿಂತುಕೊಂಡರು..ಅವರ ನಡೆ ಹಲವರಿಗೆ ದೊಡ್ಡ ಸ್ಫೂರ್ತಿಯಾಗಿರುತ್ತದೆ ಇದು ಕರ್ನಾಟಕ ಮಾತ್ರವಲ್ಲ ಇಡೀ ಭಾರತಕ್ಕೆ ಎನ್ನಬಹುದು. ಅವರ ಶ್ರಮಕ್ಕೆ ಫಲ ಸಿಕ್ಕಿದೆ ಈಗ ಖುಷಿಯಾಗಿ ಜೀವನ ನಡೆಸುತ್ತಿದ್ದಾರೆ ಅದನ್ನು ನೋಡಿ ನನಗೆ ಖುಷಿಯಾಗುತ್ತಿದೆ' ಎಂದು ಕಾರುಣ್ಯ ರಾಮ್ ಹೇಳಿದ್ದಾರೆ.
ದೇಹ ಸಣ್ಣಗಿದೆ ಮುಖ ದಪ್ಪಗಿದೆ ಅಂತ ಸುಮ್ಮನೆ ಕೂರಲ್ಲ ಗುರು...ಈ ಕೆಲಸ ಮಾಡ್ತೀನಿ: ತೇಜಸ್ವಿ ಪ್ರಕಾಶ್
