ಸೋಷಿಯಲ್ ಮೀಡಿಯಾದಲ್ಲಿ ಆಗಾಗ ಒಂದೊಂದು ಅಭಿಯಾನ ಟ್ರೆಂಡ್ ಆಗ್ತಾ ಇರುತ್ತದೆ. ನವೆಂಬರ್ ತಿಂಗಳು ಕನ್ನಡ ರಾಜ್ಯೋತ್ಸವದ ಹಿನ್ನಲೆಯಲ್ಲಿ ಈಗ #poetryreadingchallenge ಎಲ್ಲಾ ಕಡೆ ಟ್ರೆಂಡ್ ಆಗ್ತಾಯಿದೆ. ಒಬ್ಬರು ಅವರಿಷ್ಟದ ಕವಿಯ ಕವನಗಳನ್ನು ವಾಚಿಸಿ ಅದನ್ನು ಇನ್ನೊಬ್ಬರಿಗೆ ಕೋ ಕೊಡ್ತಾ ಹೋಗುವುದೇ ಇದರ ವಿಶೇಷ.  

ಕೋ ಕೊಟ್ಟವರು ಯಾವುದಾದರೊಂದು ಕನ್ನಡ ಪದ್ಯವನ್ನು ಹೇಳಬೇಕು.  ಗೋಲ್ಡನ್ ಸ್ಟಾರ್ ಗಣೇಶ್ ಕ್ರಿಕೆಟಿಗ ಅನಿಲ್ ಕುಂಬ್ಳೆಗೆ ಈ ಚಾಲೆಂಜನ್ನು ಕೊಟ್ಟಿದ್ದಾರೆ. ಚಾಲೆಂಜ್ ಸ್ವೀಕರಿಸಿದ ಕುಂಬ್ಳೆ ರಾಷ್ಟ್ರಕವಿ  ಕುವೆಂಪು ಅವರ 'ಎಲ್ಲಾದರೂ ಇರು. ಎಂತಾದರೂ ಇರು' ಕವನವನ್ನು ವಾಚಿಸಿದ್ದಾರೆ.  

 

ಇದನ್ನು ಮುಂದುವರೆಸಲು ಕಿಚ್ಚ ಸುದೀಪ್, ಪುನೀತ್ ರಾಜ್‌ಕುಮಾರ್ ಹಾಗೂ ವಿಜಯ್ ಪ್ರಕಾಶ್‌ಗೆ ಕೋ ಕೊಟ್ಟಿದ್ದಾರೆ.  ವಿಜಯ್ ಪ್ರಕಾಶ್ ಡಿವಿಜಿಯವರ ಮಂಕುತಿಮ್ಮನ ಕಗ್ಗವನ್ನು ಹಾಡಿನ ಮೂಲಕ ಹೇಳಿದ್ದಾರೆ. 

ಗೋಲ್ಡರ್ ಸ್ಟಾರ್ ಗಣೇಶ್ ಬೇಂದ್ರೆಯವರ 'ನೀ ಹಿಂಗ ನೋಡಬ್ಯಾಡ ನಿನ್ನ' ಕವನವನ್ನು ವಾಚಿಸಿದ್ದಾರೆ.