ಯೋಗರಾಜ್‌ ಭಟ್‌ ನಿರ್ದೇಶನದ ‘ಪಂಚತಂತ್ರ’ ಚಿತ್ರದಲ್ಲಿ ಪಕ್ಕಾ ಲವರ್‌ ಬಾಯ್‌ ಆಗಿ ಕಾಣಿಸಿಕೊಂಡಿದ್ದ ವಿಹಾನ್‌ ಈಗ ಹೊಸ ಇಮೇಜ್‌ ಮೂಲಕ ತೆರೆಗೆ ಬರಲು ರೆಡಿ ಆಗುತ್ತಿದ್ದಾರೆ.

'ಇಷ್ಟ ಇಲ್ಲದಿದ್ರೂ ಒತ್ತಾಯಕ್ಕೆ ಶಿವಣ್ಣ 'ಪೋಲೀಸ್‌ ಬೇಬಿ' ಹಾಡು ಒಪ್ಕೊಂಡೆ'!

ಚಿತ್ರದ ಮೋಷನ್‌ ಪೋಸ್ಟರ್‌ ಆರಂಭದಲ್ಲಿ ತೆರೆ ಮೇಲೆ ‘1990’ ಎಂಬುದಾಗಿ ಇಸವಿಯ ಅಂಕೆಗಳು ಕಾಣಿಸಿಕೊಳ್ಳುತ್ತಿದ್ದಂತೆ ದೊಡ್ಡ ಬಂಗಲೆಯೊಂದು ರಿವೀಲ್‌ ಆಗುತ್ತದೆ. ಕೈಯಲ್ಲಿ ಗನ್ನು, ಆಯುಧ, ತೋಳಿನಿಂದ ಇಳಿಯುವ ರಕ್ತದ ಜತೆಗೆ ಡಾನ್‌ ರೀತಿ ಕುಳಿತಿರುವ ಭಂಗಿಯಲ್ಲಿ ವಿಹಾನ್‌ ಖಡಕ್‌ ಲುಕ್‌ ನೀಡುತ್ತಾರೆ. ಅಲ್ಲಿಗೆ ‘ಲೆಗಸಿ’ ವಿಹಾನ್‌ ಇಮೇಜ್‌ ಚೇಂಜ್‌ ಮಾಡುವ ಸಿನಿಮಾ ಎಂಬಂತೆ ಕಾಣಿಸಿಕೊಳ್ಳುತ್ತಾರೆ.

ಚಿತ್ರಕ್ಕಾಗಿ ಗಂಟಲು ಆಪರೇಷನ್‌ ಮಾಡಿಸಿಕೊಂಡ್ರಾ ವಿನೋದ್‌ ಪ್ರಭಾಕರ್‌?

ಚಿತ್ರದ ನಿರ್ದೇಶಕ ಸುಭಾಶ್‌ ಚಂದ್ರ ಪ್ರಕಾರ ಇದೊಂದು ಪಕ್ಕಾ ಆ್ಯಕ್ಷನ್‌, ಥ್ರಿಲ್ಲರ್‌ ಸಿನಿಮಾ. ಗ್ರೇಟ್‌ ಬ್ರೋಸ್‌ ಪಿಚ್ಚರ್‌ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಕಳೆದ ತಿಂಗಳಿನಿಂದಲೇ ಚಿತ್ರೀಕರಣ ಶುರುವಾಗಿದೆ.