ನಿರ್ಮಾಪಕ ಸ್ವಾತಿ ಅಂಬರೀಶ್ ಕೋವಿಡ್‌ಗೆ ಬಲಿ
ಸ್ಯಾಂಡಲ್‌ವುಡ್‌ನ ಮತ್ತೋರ್ವ ನಟ, ನಿರ್ಮಾಪಕ ಸ್ವಾತಿ ಅಂಬರೀಶ್ (43) ಕೋವಿಡ್‌ಗೆ ಬಲಿಯಾಗಿದ್ದಾರೆ.
ಕೊರೋನಾ ಅಲೆ ಹೆಚ್ಚು ಭೀಕರವಾಗಿದೆ. ಕನ್ನಡ ಚಿತ್ರರಂಗದ ಅನೇಕ ಕಲಾವಿದರು, ನಿರ್ದೇಶಕರು ಹಾಗೂ ನಿರ್ಮಾಪಕರಿಗೆ ಕೊರೋನಾ ಬೆಂಬಿಡದೇ ಕಾಡುತ್ತಿದೆ. ಇದೀಗ ಸ್ಯಾಂಡಲ್‌ವುಡ್ ನಿರ್ದೇಶಕ ಸ್ವಾತಿ ಅಂಬರೀಶ್ ಕೊರೋನಾದಿಂದ ಮೃತಪಟ್ಟಿದ್ದಾರೆ.
ಕೆಲ ದಿನಗಳ ಹಿಂದೆ ಕೊರೋನಾ ಸೋಂಕಿರುವುದು ತಿಳಿದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಆದರೆ ವಿಧಿ ಬೇರೆಯೇ ಇತ್ತು. ತಾಂಡವ, ದೇವದಾಸಿ, ರಾಮ್‌ಸೇತು ಚಿತ್ರಗಳ ನಿರ್ದೇಶನ, ನಿರ್ಮಾಣ ಹಾಗೂ ನಟನೆಯಲ್ಲಿ ತೊಡಗಿಸಿಕೊಂಡಿದ್ದರು. ದೇವದಾಸಿ 2019ರಲ್ಲಿ ಬಿಡುಗಡೆಯಾಗಿದೆ. ಇವರ ಮೂಲ ಹೆಸರು ಕುಮಾರಸ್ವಾಮಿ. ನಟ ಅಂಬರೀಶ್ ಅವರ ಮೇಲಿನ ಪ್ರೀತಿಯಿಂದ ತಮ್ಮ ಹೆಸರನ್ನು ಸ್ವಾತಿ ಅಂಬರೀಶ್ ಎಂದು ಬದಲಿಸಿಕೊಂಡಿದ್ದರು.
'ಕವಿರತ್ನ ಕಾಳಿದಾಸ', 'ಅಂಜದ ಗಂಡು' ನಿರ್ದೇಶಕ ರೇಣುಕಾ ಶರ್ಮಾ ಕೊರೋನಾಗೆ ಬಲಿ
ನಟ ಯೋಗಿ ಅವರ ಸಹೋದರ ಮಹೇಶ್ ಅವರ ಜೊತೆಗೆ ‘ತಮಸ್’ ಎಂಬ ಚಿತ್ರ ನಿರ್ಮಿಸಲು ಮುಂದಾಗಿದ್ದರು. ಸ್ವಾತಿ ಅಂಬರೀಶ್ ಅವರ ನಿಧನಕ್ಕೆ ಚಿತ್ರರಂಗ ಕಂಬನಿ ಮಿಡಿದಿದೆ.