ಕನ್ನಡ ಚಿತ್ರರಂಗದ ಬ್ಲಾಕ್ ಬಸ್ಟರ್, ಸೂಪರ್ ಹಿಟ್ ನಿರ್ದೇಶಕ ರೇಣುಕಾ ಶರ್ಮಾ ನಿನ್ನೆ ತಡರಾತ್ರಿ ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಎರಡು ದಿನಗಳ ಹಿಂದೆಯೇ ಕೊರೋನಾ ಸೋಂಕು ಇರುವುದು ದೃಢವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಶ್ವಾಸಕೋಶದಲ್ಲಿ ಸೋಂಕು ಹೆಚ್ಚಾಗಿದ್ದ ಕಾರಣ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.

2007-08ರ ಸಾಲಿನ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ ವಿಜೇತರೂ ಆಗಿರುವ ರೇಣುಕಾ ಶರ್ಮಾ ಅವರ ರಕ್ತದ ಒತ್ತಡದಿಂದ ಬಳಲುತ್ತಿದ್ದು, ಅವರ ಮೇಲೂ ನಿಗಾ ವಹಿಸಲಾಗಿತ್ತು. ರೇಣುಕಾ ಶರ್ಮಾ ಇನ್ನಿಲ್ಲ ಎಂಬ ವಿಚಾರ ತಿಳಿಯುತ್ತಿದ್ದಂತೆ ಕನ್ನಡ ಚಿತ್ರರಂಗ ಕಂಬನಿ ಮಿಡಿದಿದೆ.

ಕೊರೋನಾಕ್ಕೆ ಕೋಟಿ ನಿರ್ಮಾಪಕ ರಾಮು ಬಲಿ, ಮಾಲಾಶ್ರೀ ಪತಿ ಇನ್ನಿಲ್ಲ 

ಆ ಬಳಿಕ ಕವಿರತ್ನ ಕಾಳಿದಾಸ, ಶಬರಿಮಲೈ ಸ್ವಾಮಿ ಅಯ್ಯಪ್ಪ, ಅಂಜದ ಗಂಡು, ಅದೃಷ್ಟ ರೇಖೆ, ದೈವ ಶಕ್ತಿ, ಭದ್ರಕಾಳಿ, ನಮ್ಮ ಊರ ದೇವತೆ, ಹಠಮಾರಿ ಹೆಣ್ಣು ಕಿಲಾಡಿ ಗಂಡು, ಭರ್ಜರಿ ಗಂಡು, ಮುತ್ತೈದೆ, ಕಿಂದರಜೋಗಿ, ಕೊಲ್ಲೂರು ಶ್ರೀ ಮೂಕಾಂಬಿಕೆ ಸೇರಿದಂತೆ 20ಕ್ಕೂ ಹೆಚ್ಚು ಚಿತ್ರಗಳನ್ನು ಶರ್ಮಾ ಅವರು ನಿರ್ದೇಶಿಸಿದ್ದಾರೆ. ಯಶಸ್ವೀ ಪೌರಾಣಿಕ, ಭಕ್ತಿ ಪ್ರಧಾನ ಸಿನಿಮಾಗಳನ್ನ ನಿರ್ದೇಶನ ಮಾಡಿದ ಖ್ಯಾತಿ ಇವರದ್ದು. 

ಕೆಲವು ದಿನಗಳ ಹಿಂದೆ ನಿರ್ಮಾಪಕ ಕೋಟಿ ರಾಮು, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಸಹೋದರ ಕಿರಣ್, ನಿರ್ದೇಶಕ ರಾಜಶೇಖರ್, ಯುವ ನಿರ್ದೇಶಕ ನವೀನ್ ಹಾಗೂ ನಿರ್ಮಾಪಕ ರಾಮ್‌ ಕೊರೋನಾಗೆ ಬಲಿಯಾಗಿದ್ದಾರೆ.

ರೇಣುಕಾ ಶರ್ಮಾ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸೋಣ...