ಹೊಸಪೇಟೆ: ಲಾಕ್‌​ಡೌನ್‌ ಹಿನ್ನೆ​ಲೆ​ಯ​ಲ್ಲಿ ಕಳೆದ ತಿಂಗಳಿಂದ ಹಂಪಿಯ ಹೋಟೆಲ್‌ವೊಂದರಲ್ಲಿದ್ದ ಹಿರಿಯ ನಟಿ ಜಯಂತಿ ಮತ್ತು ಅವರ ಪುತ್ರ ಕೃಷ್ಣಕುಮಾರ್‌ ಅವರು ಸೋಮವಾರ ಬೆಳಗ್ಗೆ ಬೆಂಗಳೂರಿಗೆ ವಾ​ಪ​ಸ್‌ ತೆರಳಿದರು.

ಹಂಪಿ ಪ್ರವಾಸದಲ್ಲಿ ಸಿಲುಕಿರುವ ನಟಿ ಜಯಂತಿ ಹಾಗೂ ಪುತ್ರ ಫುಲ್‌ ಸೇಫ್‌!

‘ಹಂಪಿ ಬೈನೈಟ್‌’ಯೋಜನೆಯ ಕಾಮಗಾರಿ ವೀಕ್ಷಣೆಗಾಗಿ ಇಬ್ಬರು ಹಂಪಿಗೆ ಬಂದಿದ್ದರು. ಕಮಲಾಪುರದ ಮಯೂರ ಭುವನೇಶ್ವರಿ ಹೋಟೆಲ್‌ನಿಂದ ಹೊರಟ ಜಯಂತಿ ಕಾರಿನ ಹಿಂದೆ ಆ್ಯಂಬುಲೆನ್ಸ್‌ ಸಹ ತೆರಳಿತು. ಜಯಂತಿ ಅವರ ಆರೋಗ್ಯ ದೃಷ್ಟಿಯಿಂದ ಆ್ಯಂಬುಲೆನ್ಸ್‌ ಕರೆದುಕೊಂಡ ಹೋಗಲಾಯಿತು ಎಂದು ಕೃಷ್ಣಕುಮಾರ್‌ ತಿಳಿಸಿದರು.

ಎಲ್ಲೀದ್ದೀರೋ ಅಲ್ಲೇ ಇರಿ ಎಂದ ಮೋದಿ: ಓಕೆ ಎಂದ ಜಯಂತಿ ಹಂಪೆಯಲ್ಲಿ!