ಕನ್ನಡ ಚಿತ್ರರಂಗದ ಅಭಿನಯ ಶಾರದೆ ಜಯಂತಿ ಹಾಗೂ ಪುತ್ರ  ಕೃಷ್ಣ ಕುಮಾರ್‌ ಹಂಪಿ ಪ್ರವಾಸಕ್ಕೆಂದು ತೆರಳಿ ಕೊರೋನಾ ಲಾಕ್‌ಡೌನ್‌ನಲ್ಲಿ ಸಿಲುಕಿಕೊಂಡಿದ್ದಾರೆ. ಈ ಬಗ್ಗೆ ಸ್ವತಃ ಜಯಂತಿ ಹಾಗೂ ಪುತ್ರ ಮಾತನಾಡಿದ್ದಾರೆ . 

' ಲಾಕ್‌ಡೌನ್‌ ಹೇರುವ ಮೊದಲೇ ಹಂಪಿಗೆ ಭೇಟಿ ಕೊಟ್ಟಿದ್ದೆವು. ಇಲ್ಲಿ ಬಂದ ನಂತರ ಲಾಕ್‌ಡೌನ್‌ ಘೋಷಣೆ ಮಾಡಿದರು. ಪ್ರಧಾನ ಮಂತ್ರಿಗಳ ಮಾತಿನಂತೆ ನಾವು ಇರುವ ಜಾಗದಲ್ಲೇ ಉಳಿದುಕೊಂಡಿದ್ದೇವೆ.  ಸದ್ಯಕ್ಕೆ ನಾವಿಲ್ಲಿ ಆರಾಮಾಗಿದ್ದೇವೆ ಯಾವುದೇ ತೊಂದರೆ ಆಗಿಲ್ಲ. ಪೊಲೀಸರು ಬಿಗಿ ಬಂದೋಬಸ್ತ್‌ ಮಾಡಿದ್ದಾರೆ  ಹೀಗಾಗಿ ನಾವು ಬೆಂಗಳೂರಿಗೆ ಹೋಗಲು ಸಹಾಯ ಮಾಡುವಂತೆ ಕೇಳಿಲ್ಲ' ಎಂದು ಮಾತನಾಡಿದ್ದಾರೆ. 

ಕೊರೋನಾ ದೂರವಾಗಲಿ.. ಸ್ವಾಮೀಜಿಗಳು ಮತ್ತು ನಾಯಕರಿಂದ ಇಷ್ಟಲಿಂಗ ಪೂಜೆ

ಜಯಂತಿ ಹಾಗೂ ಪುತ್ರ ಕೃಷ್ಣ ಕುಮಾರ್‌ ಹಂಪಿ ಸಮೀಪದಲ್ಲಿರುವ ಕಮಲಾಪುರದ ಮಯೂರ ಭುವನೇಶ್ವರಿ ಪ್ರವಾಸಿ ಮಂದಿರಲ್ಲಿ ಉಳಿದುಕೊಂಡಿದ್ದಾರೆ.  ಪರಿಸ್ಥಿತಿ ಗಂಭೀರಗೊಂಡ ಕಾರಣ ಇದ್ದಲ್ಲಿಯೇ ಇರಲು ತೀರ್ಮಾನ ಮಾಡಿದ್ದಾರೆ. ಈಗೀರುವ  ವಸತಿಯಲ್ಲಿ ಯಾವುದೇ ತೊಂದರೆಯಿಲ್ಲ  ಹಾಗೂ ಇರುವುದರಲ್ಲೇ ದಿನ ಕಳೆಯುತ್ತಿದ್ದೇವೆ ಎಂದು ಹೇಳಿದ್ದಾರೆ.