ಎಂಟು ತಿಂಗಳ ಈ ಸಿಂಹದ ಮರಿ ಡಾ.ರಾಜ್‌ಕುಮಾರ್‌ ಅವರ ಜನ್ಮದಿನದಂದೇ ಹುಟ್ಟಿರೋದು ವಿಶೇಷ.

ಈ ಸಂದರ್ಭ ಮಾತನಾಡಿದ ವಶಿಷ್ಠ ಸಿಂಹ, ‘ನನಗೆ ಮೊದಲಿಂದಲೂ ಕಾಡು ಅಂದರೆ ಬಹಳ ಇಷ್ಟ. ವನ್ಯಜೀವಿಗಳ ಸಂರಕ್ಷಣೆ ನನ್ನ ಹೊಸ ವರ್ಷದ ರೆಸಲ್ಯೂಶನ್‌. ಈ ಹಿನ್ನೆಲೆಯಲ್ಲಿ ಪ್ರಕೃತಿಯ ಆಹಾರ ಸರಪಣಿಯ ಮಹತ್ವದ ಕೊಂಡಿಯಂತಿರುವ ಸಿಂಹದ ಮರಿಯನ್ನು ದತ್ತು ಪಡೆದಿದ್ದೇನೆ. ಇದಕ್ಕೆ ನನ್ನ ತಂದೆಯವರ ಹೆಸರನ್ನೇ ಇಟ್ಟಿದ್ದೇನೆ. ನಮಗೆ ಇಷ್ಟೆಲ್ಲ ನೀಡಿದ ಪ್ರಕೃತಿಗೆ ನಾನು ಕೊಡುತ್ತಿರುವ ಕಿಂಚಿತ್‌ ಕೊಡುಗೆ ಇದು. ಹಿಂದಿನ ಸಲ ಬನ್ನೇರುಘಟ್ಟಕ್ಕೆ ಭೇಟಿ ನೀಡಿದ್ದಾಗಲೇ ಈ ನಿರ್ಧಾರಕ್ಕೆ ಬಂದಿದ್ದೆ. ಈಗ ಕಾಲ ಕೂಡಿಬಂತು’ ಎಂದರು. ಕಬಿನಿ ಕುರಿತಾದ ಡಾಕ್ಯುಮೆಂಟರಿಯಲ್ಲೂ ಭಾಗಿಯಾಗಿರುವುದಾಗಿ ಅವರು ಹೇಳಿದರು.

ದುನಿಯಾ v/s ಸಿಂಹ; ಹೊಸ ಚಿತ್ರಕ್ಕೆ ಜತೆಯಾದ ಇಬ್ಬರು ಖಡಕ್‌ ಕಲಾವಿದರು! 

ಈ ವೇಳೆಗೆ ವಸಿಷ್ಠ ಸಿಂಹ ಬನ್ನೇರುಘಟ್ಟರಾಷ್ಟ್ರೀಯ ಉದ್ಯಾನವನದ ಮುಖ್ಯಸ್ಥೆ ವನಶ್ರೀ ವಿಪಿನ್‌ ಸಿಂಗ್‌ ಅವರಿಗೆ 1,25,000 ರು.ಗಳ ಚೆಕ್‌ ನೀಡಿದರು. ‘ಬನ್ನೇರುಘಟ್ಟಉದ್ಯಾನವನದಲ್ಲಿ ಪ್ರಾಣಿ ದತ್ತು ಪಡೆದ ಮೊದಲ ನಟ ವಶಿಷ್ಠ ಸಿಂಹ. ಈ ಸ್ಫೂರ್ತಿಯಲ್ಲಿ ಇನ್ನಷ್ಟುಮಂದಿ ಪ್ರಾಣಿಗಳನ್ನು ದತ್ತು ಪಡೆಯುವ ಕಾರ್ಯಕ್ಕೆ ಮುಂದಾಗಬೇಕು’ ಎಂದು ವನಶ್ರೀ ಹೇಳಿದರು.