ಬಿಗ್‌ಬಾಸ್‌ನಿಂದ ಜನಪ್ರಿಯತೆ ಗಳಿಸಿದ ವರ್ತೂರ್ ಸಂತೋಷ್, ಹಳ್ಳಿ ಪ್ರತಿಭೆಗಳಿಗೆ ಬೆಂಬಲ ನೀಡುತ್ತಿದ್ದಾರೆ. ಹೊಸಕೋಟೆಯಲ್ಲಿ ಹಳ್ಳಿಕಾರ್ ರೇಸ್ ಆಯೋಜಿಸುವ ಯೋಜನೆಯಿದೆ. ವೀರೇಶ್ ವಿರೋಧದ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಸಿಟ್ಟಾದ ಸಂತೋಷ್, ವೈಯಕ್ತಿಕ ವಿಚಾರಗಳನ್ನು ಪ್ರಚಾರ ಮಾಡದಂತೆ ತಿಳಿಸಿದರು. ಉಪಯುಕ್ತ ಸುದ್ದಿಗಳನ್ನು ಪ್ರಸಾರ ಮಾಡುವಂತೆ ಮಾಧ್ಯಮಗಳಿಗೆ ಕರೆ ನೀಡಿದರು.
ಹಳ್ಳಿಕಾರ್ ಒಡೆಯ ವರ್ತೂರ್ ಸಂತೋಷ್ ಬಿಗ್ ಬಾಸ್ ಸೀಸನ್ 10ರಲ್ಲಿ ಮಿಂಚಿದ ನಂತರ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದರು. ಅದರಲ್ಲೂ ಹುಲಿ ಉಗುರು ದೊಡ್ಡ ನ್ಯೂಸ್ ಕ್ರಿಯೇಟ್ ಮಾಡಿತ್ತು. ಬಿಗ್ ಬಾಸ್ ಮುಗಿದ ಮೇಲೆ ವರ್ತೂರ್ ಸಂತೋಷ್ ಸಿಕ್ಕಾಪಟ್ಟೆ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ. ಹಳ್ಳಿ ಪ್ರತಿಭೆಗಳು ಹಾಗೂ ಟ್ಯಾಲೆಂಟ್ ಹೊಂದಿರುವ ಯುವಕರಿಗೆ ಸಿಕ್ಕಾಪಟ್ಟೆ ಸಪೋರ್ಟ್ ಮಾಡುತ್ತಿದ್ದಾರೆ. ಇದೀಗ ಹೊಸಕೋಟೆಯಲ್ಲಿ ಹಳ್ಳಿಕಾರ್ ರೇಸ್ ಆಯೋಜಿಸುವ ಪ್ಲ್ಯಾನಿಂಗ್ ನಡೆಯುತ್ತಿದೆ. ಆದರೆ ರೇಸ್ ನಡೆಸಲು ಬಿಡುವುದಿಲ್ಲ ಎಂದು ವೀರೇಶ್ ಹೇಳಿದ್ದರು ಎಂದು ಪತ್ರಕರ್ತರೊಬ್ಬರು ಪ್ರಶ್ನೆ ಮಾಡುತ್ತಾರೆ. ಆಗ ವರ್ತೂರ್ ಸಂತೋಷ್ ಗರಂ ಆಗುತ್ತಾರೆ.
'ವೀರೇಶ್ ಮತ್ತು ನಾವು ಷೆನ್ನಾಗಿ ಆಗಿದ್ದೀವಿ ...ಅವರು ನಮ್ಮ ಜೊತೆಗೆ ಬಂದು ಊಟ ಕೂಡ ಮಾಡಿದ್ದು ಅಯ್ತು. ಅದರ ಬಗ್ಗೆ ನಿಮಗೆ ಅಪ್ಡೇಟ್ ಗೊತ್ತಿಲ್ಲ. ಕೆಲಸ ಬರುವ ವಿಡಿಯೋಗಳನ್ನು ಮಾಡಬೇಕು...ನಿಮಗೆ ವ್ಯೂಸ್ ಬರಬೇಕು ಎಂದು ಸುಮ್ಮನೆ ವಿಡಿಯೋ ಹಾಕಬಾರದು. ನಾವು ವೀರೇಶ್ ವ್ಯವಹಾರ ಮಾಡಿರುವುದು ನೀವು ನೋಡಿದ್ದೀರಾ? ಇದನ್ನು ಪಬ್ಲಿಕ್‌ಗೆ ಕೊಟ್ಟಿದ್ದಕ್ಕೆ ನಿಮಗೆ ಏನಾದರೂ ಸಿಕ್ತಾ? ನಾಲ್ಕು ಜನರಿಗೆ ಸಹಾಯ ಆಗುವಂತೆ ನ್ಯೂಸ್ ಮಾಡಿ. ವೈಯಕ್ತಿಕವಾಗಿ ಸಾವಿರ ನಡೆದಿರುತ್ತದೆ ಆದರೆ ಅದನ್ನು ಪಬ್ಲಿಕ್‌ನಲ್ಲಿ ಮಾತನಾಡುವ ಅವಶ್ಯಕತೆ ಇಲ್ಲ. ಮನೆಯಲ್ಲಿ ಸಂಸಾರದಲ್ಲಿ ಮೂರು ನಡೆಯುತ್ತಿರುತ್ತದೆ ಆದರೆ ಅದನ್ನು ಪಬ್ಲಿಕ್‌ನಲ್ಲಿ ಹೇಳುವ ಅವಶ್ಯಕತೆ ಇದ್ಯಾ? ನಮ್ಮ ವೀರೇಶ್ ಬಗ್ಗೆ ಪ್ರಶ್ನೆ ಮಾಡುವ ಅಧಿಕಾರ ನಿಮಗೆ ಇದ್ಯಾ' ಎಂದು ವರ್ತೂರ್ ಸಂತೋಷ್ ಮಾತನಾಡಿದ್ದಾರೆ.
2ನೇ ಮದುವೆ ಬೇಕಾ ಎಂದು ಕೀಳು ಕಾಮೆಂಟ್ ಮಾಡುತ್ತಿದ್ದವರಿಗೆ ಉತ್ತರ ಕೊಟ್ಟ ಚೈತ್ರಾ ವಾಸುದೇವನ್
'ಬಿಗ್ ಬಾಸ್ ಮುಗಿದು ಒಂದು ವರ್ಷ ಆಗಿದೆ ನಾವು ಕಾರ್ಯಕ್ರಮಗಳನ್ನು ಮಾಡುತ್ತಲೇ ಇದ್ದೀವಿ. ಇದಕ್ಕೆ ಕಾರಣ ಜನರಿಗೆ ನನ್ನ ಮೇಲೆ ಇರುವ ಪ್ರೀತಿ ಮತ್ತು ನಾನು ಅವರೊಟ್ಟಿಗೆ ನಡೆದುಕೊಳ್ಳುತ್ತಿರುವ ರೀತಿಯಿಂದ. ನಾಲಿಗೆ ಮತ್ತು ಹಾರ್ಡ್ ಎರಡೂ ಕರೆಕ್ಟ್ ಆಗಿದ್ದರೆ ಕಲ್ಲು ಮೇಲೆ ನಿಂತು ಭಗವಂತನಲ್ಲಿ ಬೇಡಿದರೆ ಏನಾದರೂ ಸೃಷ್ಟಿ ಮಾಡುತ್ತಾನೆ. ಮೀಡಿಯಾದವರಿಂದ ಹೊರಗಡೆ ಒಳಗೆ ಇರುವ ಪ್ರತಿಯೊಂದು ಸುದ್ದಿ ಬರುವುದು ಹೀಗಾಗಿ ದಯವಿಟ್ಟು ಉಪಯೋಗ ಇರುವುದು ಕೊಡಿ' ಎಂದು ವರ್ತೂರ್ ಸಂತೋಷ್ ಹೇಳಿದ್ದಾರೆ.
ಪುಟ್ಟ ಕಂದಮ್ಮನನ್ನು ಊರು ಜಾತ್ರೆಗೆ ಕರ್ಕೊಂಡು ಹೋದ್ರು ಕವಿತಾ ಗೌಡ; ನಾನು ಎಂದು ಕಾಮೆಂಟ್ ಮಾಡಿದ ಚಂದು!
