ಕನ್ನಡದ ಬ್ಲಾಕ್​ಬಸ್ಟರ್​ ಚಿತ್ರ ಕಾಂತಾರದ ವರಾಹ ರೂಪಂ ಮತ್ತು ಸಿಂಗಾರ ಸಿರಿಯೆ ಹಾಡುಗಳು ಹೊಸ ದಾಖಲೆ ಬರೆದಿದೆ. ಏನದು? 

ಕನ್ನಡದ ಬ್ಲಾಕ್​ಬಸ್ಟರ್​ ಚಿತ್ರ ಕಾಂತಾರ-2 (Kantara) ಹವಾ ಇದೀಗ ಜೋರಾಗಿರುವ ನಡುವೆಯೇ ಕಾಂತಾರ-1 ಕೂಡ ಇಂದಿಗೂ ಸದ್ದು ಮಾಡುತ್ತಲೇ ಇದೆ. ಕಾಡಿನ ಕಥೆಯನ್ನು ಆಧರಿಸಿರುವ ಕಾಂತಾರ, ಕರ್ನಾಟಕದ ಗಡಿಯನ್ನಷ್ಟೇ ಅಲ್ಲದೇ ಭಾರತದ ಎಲ್ಲೆಯನ್ನೂ ಮೀರಿ ಕರುನಾಡಿನ ಜನಪದ (Folk) ಸಂಸ್ಕೃತಿಯನ್ನು ಜಗತ್ತಿನಾದ್ಯಂತ ಪಸರಿಸಿದೆ. ಅದ್ಧೂರಿ ಬಜೆಟ್​ ಹಾಕಿ ವಾಸ್ತವ ಬದುಕಿಗೆ ತಾಳಮೇಳವೇ ಇಲ್ಲದೇ ಏನೇನೋ ಕಾಲ್ಪನಿಕ ಕಥೆಗಳನ್ನು ಇಟ್ಟುಕೊಂಡು ಮಾಡುವ ಚಿತ್ರಗಳು ಇಂದು ಭಾರಿ ಸದ್ದು ಮಾಡುತ್ತಿರುವ ನಡುವೆಯೇ, ಒಂದು ಪ್ರಾಂತ್ಯದ ಸೊಗಡನ್ನು ವಿವರಿಸುವ ಕಡಿಮೆ ಬಜೆಟ್​ನ ಪ್ರಾದೇಶಿಕ ಚಿತ್ರವೊಂದು ವಿದೇಶಗಳಲ್ಲಿಯೂ ಮಿಂಚಬಹುದು ಎನ್ನುವುದಕ್ಕೆ ಉದಾಹರಣೆಯಾಗಿದೆ ಕಾಂತಾರ. ಇದರ ತಾಕತ್ತು ಎಷ್ಟಿದೆ ಎಂದರೆ ಈ ಚಿತ್ರರಂಗದ ಯಶಸ್ಸನ್ನು ಸಹಿಸದೇ ಹಲವಾರು ರೀತಿಯಲ್ಲಿ 'ಆಕ್ರಮಣಗಳೂ' ನಡೆದವು. ಅದೇ ಇನ್ನೊಂದೆಡೆ, ದೈವನರ್ತಕರು ಮಾತ್ರವೇ ಧರಿಸುವಂಥ ವಸ್ತ್ರಗಳನ್ನು ಧರಿಸಿಕೊಂಡು, ಅವರಂತೆಯೇ ನಟಿಸಲು ಪ್ರಯತ್ನ ಮಾಡಿ ತುಳು (Tulu) ಜನರ ಭಾವನೆ ಘಾಸಿಗೊಂಡಿರುವ ಘಟನೆಗಳು ನಡೆದಿವೆ. ಅದಕ್ಕಾಗಿಯೇ ರಿಷಬ್​ ಶೆಟ್ಟಿಯವರಲ್ಲಿ ಕೆಲವರು ಮನವಿ ಮಾಡಿಕೊಂಡು ಇದರ ಪಾರ್ಟ್​-2 ಮಾಡಬೇಡಿ ಎಂದು ಕೇಳಿಕೊಳ್ಳುತ್ತಿದ್ದಾರೆ.

ಅದೇನೇ ಇದ್ದರೂ, ಕಾಂತಾರ ಇನ್ನೊಂದು ಗುಡ್​ ನ್ಯೂಸ್​ (Good News) ಕೊಟ್ಟಿದೆ. ಇದರ ಹಾಡುಗಳಿಗೆ ಮನಸೋಲದವರೇ ಇಲ್ಲವೆನ್ನಬಹುದೇನೋ. ಇಂದಿನ ದಿನಗಳಲ್ಲಿ ಬರುವ ಹಲವು ಚಲನಚಿತ್ರದ ಹಾಡುಗಳು ಯಾವ ಭಾಷೆಯದ್ದು ಎಂದು ತಿಳಿದುಕೊಳ್ಳುವುದೇ ಕಷ್ಟವೆನಿಸುವುದು ಉಂಟು. ಅಸಹ್ಯ ಅರ್ಥ ಕೊಡುವ, ಅಸಭ್ಯ, ಕರ್ಕಶ, ಅರ್ಥಗಳೇ ಇಲ್ಲದ ಹಾಡುಗಳು ಇಂದು ಸರ್ವೇ ಸಾಮಾನ್ಯವಾಗಿದೆ. ಜನರಿಗೆ ಅವುಗಳು ಬೇಕೋ, ಅಥವಾ ಅವುಗಳನ್ನು ಸಿನಿಮಾದವರ ಕೊಡುತ್ತಿರುವುದಕ್ಕಾಗಿ ಜನರು ಅದನ್ನು ಸ್ವೀಕರಿಸುತ್ತಿದ್ದಾರೋ ಅಥವಾ ತಮ್ಮ ನೆಚ್ಚಿನ ನಾಯಕ ಆ ಹಾಡಿಗೆ ಕುಣಿದಿರುವುದಕ್ಕೆ ಅದನ್ನು ಪ್ರೀತಿಸುತ್ತಾರೆಯೋ ಆ ದೇವರೇ ಬಲ್ಲ. ಆದರೆ ಅವೆಲ್ಲವನ್ನೂ ಮೀರಿದ್ದು ಕಾಂತಾರ ಚಿತ್ರದ ಸಿಂಗಾರ ಸಿರಿಯೇ.... (Singara Siriye) ಹಾಗೂ ವರಾಹ ರೂಪಂ ಹಾಡು. ಈ ಸುಮಧುರ ಹಾಡನ್ನು ಜನರು ಹೇಗೆ ಸ್ವೀರಕರಿಸಿದ್ದಾರೆ ಎನ್ನುವುದಕ್ಕೆ ಯುಟ್ಯೂಬ್​ ಸಾಕ್ಷಿಯಾಗಿದೆ. ಇವೆರೆಡೂ ಹಾಡುಗಳು 100 ಮಿಲಿಯನ್​ಗೂ ಮೀರಿ ಅಂದರೆ 10 ಕೋಟಿಗೂ ಅಧಿಕ ವ್ಯೂಸ್​ ಅನ್ನು ಯೂಟ್ಯೂಬ್​ನಲ್ಲಿ ಕಂಡಿದೆ. ಈ ಮೂಲಕ ಕಾಂತಾರ ಇನ್ನೊಂದು ಹೊಸ ಭಾಷ್ಯ ಬರೆದಿದೆ. 

'ರಿಷಭ್‌ ಶೆಟ್ರೇ.. ಪ್ಲೀಸ್‌ ಕಾಂತಾರ-2 ಮಾಡ್ಬೇಡಿ..' ಐಪಿಎಲ್‌ ಮ್ಯಾಚ್‌ ಮುಗಿದ ಮೇಲೆ ತುಳುವರ ಮನವಿ!

 ಗಾಯಕ ವಿಜಯ್‌ ಪ್ರಕಾಶ್‌ ಸಿಂಗಾರ ಸಿರಿಯೇ 100 ಮಿಲಿಯನ್‌ ವ್ಯೂವ್ಸ್‌ ದಾಟಿದೆ ಎಂದು ಬರೆದುಕೊಂಡಿದ್ದರು. ಇದೀಗ ಚಿತ್ರದ ನಾಯಕಿ ಸಪ್ತಮಿ ಗೌಡ ಕೂಡಾ ಇದಕ್ಕೆ ಪ್ರತಿಕ್ರಿಯಿಸಿ ಎರಡೂ ಹಾಡುಗಳು 100 ಮಿಲಿಯನ್​ ವೀಕ್ಷಣೆ ದಾಟಿದ್ದು, ಅಭಿಮಾನಿಗಳಿಗೆ ಧನ್ಯವಾದ ಎಂದು ಹೇಳಿದ್ದಾರೆ. ಸಿಂಗಾರ ಸಿರಿಯೇ... ಹಾಗೂ ವರಾಹ ರೂಪಂ.. ಎರಡೂ ಹಾಡುಗಳು 100 ಮಿಲಿಯನ್ ಗಡಿ ಗಾಟಿವೆ. ನಿಜಕ್ಕೂ ಇದನ್ನೂ ಕನಸಿನಲ್ಲೂ ಊಹಿಸಿರಲಿಲ್ಲ. ಈ ಹಾಡುಗಳ ಬಗ್ಗೆ ನೀವು ತೋರಿದ ಪ್ರೀತಿಗೆ ಬಹಳ ಧನ್ಯವಾದಗಳು" ಎಂದು ಬರೆದುಕೊಂಡಿದ್ದಾರೆ. ತಮ್ಮ ಟ್ವೀಟನ್ನು ರಿಷಬ್‌ ಶೆಟ್ಟಿ, ಹೊಂಬಾಳೆ ಫಿಲ್ಸ್ಮ್‌ (Homable Films)ಹಾಗೂ ವಿಜಯ್‌ ಕಿರಗಂದೂರು ಅವರಿಗೆ ಟ್ಯಾಗ್‌ ಮಾಡಿದ್ದಾರೆ. ಕಾಂತಾರ ಸಿನಿಮಾ ಬಂದು 7 ತಿಂಗಳು ಕಳೆದಿದೆ. ಆದರೂ ಸಿಂಗಾರ ಸಿರಿಯೇ ಹಾಡಿನ ಕ್ರೇಜ್ ಹಾಗೆ ಇದೆ ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ. 


 ಈ ಸಿನಿಮಾದ ಕ್ಲೈಮ್ಯಾಕ್ಸ್‌ ನೋಡಿದ ಎಷ್ಟೋ ಮಂದಿ, ಈ ಚಿತ್ರದ ಮುಂದುವರಿದ ಭಾಗ ಯಾವಾಗ? ಎಂದು ಪ್ರಶ್ನಿಸಿದ್ದರು. 'ಕಾಂತಾರ' ಚಿತ್ರದ ಪ್ರೀಕ್ವೆಲ್‌ಗೆ ರಿಷಬ್‌ ಶೆಟ್ಟಿ ಯುಗದ ಆದಿಯ ದಿನವೇ ಶುಭಾರಂಭ ಮಾಡಿದ್ದಾರೆ. ಆದರೆ ಇದು ಕೆಲವರಿಗೆ ಬೇಸರ ತರಿಸಿದೆ. ಐಪಿಎಲ್‌ನಲ್ಲಿ ಆರ್‌ಸಿಬಿ ತಂಡದ ಅಭಿಮಾನಿಯೊಬ್ಬ ಕಾಂತಾರ ಚಿತ್ರದಲ್ಲಿ ರಿಷಭ್‌ ಶೆಟ್ಟಿಯ ದೈವನರ್ತಕನ ಪಾತ್ರದ ರೀತಿ ವಸ್ತ್ರ ಧರಿಸಿ ಬಂದಿದ್ದ. ಇದನ್ನು ಸ್ವತಃ ಆರ್‌ಸಿಬಿ ಟೀಮ್‌ ಕೂಡ ತನ್ನ ಟ್ವಿಟರ್‌ ಹ್ಯಾಂಡಲ್‌ನಲ್ಲಿ ಪ್ರಕಟ ಮಾಡಿತ್ತು. ಇದನ್ನು ಟ್ವಿಟರ್‌ನಲ್ಲಿ (Twitter) ಹಂಚಿಕೊಂಡಿರುವ ದುರ್ಗಾದಾಸ್‌ ರಾಮದಾಸ್‌ ಕಟೀಲ್‌ ಎನ್ನುವವರು, ಇಂಥ ಚಿತ್ರಗಳನ್ನು ನೋಡೋದಕ್ಕೆ ಬಹಳ ಬೇಸರವಾಗುತ್ತದೆ. ರಿಷಬ್​ ಶೆಟ್ಟಿ ಹಾಗೂ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವನ್ನೂ ಟ್ಯಾಗ್‌ ಮಾಡಿದ್ದಾರೆ. ಇನ್ನೂ ಕೆಲವರು ರಿಷಬ್​ ಶೆಟ್ಟಿಯವರೆ ನೀವು ಕಾಂತಾರದ 2ನೇ ಭಾಗದ ಚಿತ್ರವನ್ನು ಮಾಡೋದು ಬೇಡ ಇದು ನಮ್ಮ ಕಳಕಳಿಯ ಮನವಿ ಎಂದು ಬರೆದುಕೊಂಡಿದ್ದಾರೆ.

Kantara ಸಿಂಗಾರ ಸಿರಿಯೇ ಹಾಡಿನಲ್ಲಿರುವ 'ಕೊಂಗಾಟ' ಪದಕ್ಕೇನರ್ಥ? ಪ್ರಮೋದ್ ಹೇಳ್ತಾರೆ ಕೇಳಿ..

ಕಾಂತಾರ ಚಿತ್ರದ ಸಿಂಗಾರ ಸಿರಿಯೇ ಹಾಡನ್ನ ಯುವ ಲಿರಿಕ್ ರೈಟರ್ ಪ್ರಮೋದ್ ಮರವಂತೆ ಬರೆದಿದ್ದಾರೆ. ಹೊಸ ಪದಗಳನ್ನ ಬಳಕೆ ಮಾಡಿ ಚೆಂದದ ಹಾಡನ್ನ ಕಟ್ಟಿಕೊಟ್ಟಿದ್ದಾರೆ. 'ಕಾಂತಾರ' ಚಿತ್ರದ ಹಾಡುಗಳಿಗೆ ಅಜನೀಶ್‌ ಲೋಕನಾಥ್‌ ಸಂಗೀತ ನೀಡಿದ್ದಾರೆ. ಅನನ್ಯಾ ಭಟ್‌ ಹಾಗೂ ವಿಜಯ್‌ ಪ್ರಕಾಶ್‌ ದನಿಯಲ್ಲಿ ಸಿಂಗಾರ ಸಿರಿಯೇ ಹಾಡುಗಳು ಮೂಡಿಬಂದರೆ, ಸಾಯಿ ವಿಘ್ನೇಸ್‌ ವರಾಹ ರೂಪಂ ಹಾಡನ್ನು ಹಾಡಿದ್ದಾರೆ. ಅಂದಹಾಗೆ ಈ ಚಿತ್ರ ಕೇವಲ 16 ಕೋಟಿ ರೂಪಾಯಿ ಬಜೆಟ್​ನಲ್ಲಿ ತಯಾರಾಗಿದೆ.

Scroll to load tweet…