Tribute to Puneeth Rajkumar: ಅಪ್ಪು ನೆನಪಲ್ಲಿ ನಿರ್ಮಿಸಿರುವ ಒಳಾಂಗಣ ಕ್ರೀಡಾಂಗಣ ಲೋಕಾರ್ಪಣೆ!

*ನಾಗರಬಾವಿಯಲ್ಲಿ ಪುನೀತ್‌ ನೆನಪಲ್ಲಿ ನಿರ್ಮಿಸಿರುವ ಒಳಾಂಗಣ ಕ್ರೀಡಾಂಗಣ ಲೋಕಾರ್ಪಣೆ
*ನೇತ್ರದಾನಮೂಲಕ ಪುನೀತ್‌ ರಾಜ್‌ಕುಮಾರ್‌ ಅವರ ಆದರ್ಶಗಳನ್ನು ಜೀವಂತ: ಸೊಮಣ್ಣ

V Somanna Inaugurated Indoor stadium built in the memory of Puneeth Rajkumar in Bengaluru mnj

ಬೆಂಗಳೂರು (ಜ. 31):  ಸಾವಿರಾರು ಅಭಿಮಾನಿಗಳು ಸ್ವಯಂ ಪ್ರೇರಿತರಾಗಿ ನೇತ್ರದಾನ ಮಾಡುವ ಮೂಲಕ ಪುನೀತ್‌ ರಾಜ್‌ಕುಮಾರ್‌ (Puneeth Rajkumar)ಅವರ ಆದರ್ಶಗಳನ್ನು ಜೀವಂತವಿರಿಸಿದ್ದಾರೆ ಎಂದು ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ಸಚಿವ ವಿ.ಸೋಮಣ್ಣ (V Somanna) ತಿಳಿಸಿದ್ದಾರೆ. ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ನಾಗರಬಾವಿ ಬಿಬಿಎಂಪಿ ಕಚೇರಿಯಲ್ಲಿ ಪುನೀತ್‌ ರಾಜ್‌ಕುಮಾರ್‌ ಅವರ ಸವಿನೆನಪಿಗಾಗಿ ನಿರ್ಮಿಸಲಾದ ಒಳಾಂಗಣ ಕ್ರೀಡಾಂಗಣವನ್ನು ಭಾನುವಾರ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ನಟ ಪುನೀತ್‌ ತಮ್ಮ ಸಾವಿನ ಬಳಿಕವೂ ಸಾಕಷ್ಟುಜನರಿಗೆ ಪ್ರೇರಣೆಯಾಗಿದ್ದಾರೆ. ಅವರ ಅಕಾಲಿಕ ನಿಧನದ ಬಳಿಕ ಅವರ ಸಾವಿರಾರು ಅಭಿಮಾನಿಗಳು ಸ್ವಯಂ ಪ್ರೇರಿತರಾಗಿ ನೇತ್ರದಾನ ಮಾಡುವ ಮೂಲಕ ನಟನೊಬ್ಬನ ಆದರ್ಶಗಳನ್ನು ಜೀವಂತವಿರಿಸಿದ್ದಾರೆ ಎಂದರು.

ನಟ ಪುನೀತ್‌ ರಾಜ್‌ಕುಮಾರ್‌ ಅವರ ಸಾಧನೆ ಮುಂದಿನ ಪೀಳಿಗೆಗೆ ತಿಳಿಯಬೇಕು. ಅವರ ಆದರ್ಶದ ಜೀವನ, ಸಾಧನೆ, ಜೀವನ ಮೌಲ್ಯಗಳಿಂದ ಅವರು ಇಂದಿಗೂ ನಮ್ಮೆಲ್ಲರ ಮನದಲ್ಲಿ ಜೀವಂತವಾಗಿದ್ದಾರೆ. ಯುತ್‌ ಐಕಾನ್‌ ಎಂತಲೇ ಖ್ಯಾತರಾಗಿದ್ದ, ಚಿಕ್ಕ ವಯಸ್ಸಿನಲ್ಲಿಯೇ ಅಗಾಧ ಸಾಧನೆ ಮಾಡಿ ಕರ್ನಾಟಕ ರತ್ನ ಪ್ರಶಸ್ತಿಗೆ ಭಾಜನರಾದ ಪುನೀತ್‌ ಅವರ ಹೆಸರಿನಲ್ಲಿ ಸುಸಜ್ಜಿತವಾದ ಒಳಾಂಗಣ ಕ್ರೀಡಾಂಗಣವನ್ನು ನಿರ್ಮಿಸಲಾಗಿದೆ. ಈ ಮೂಲಕ ಈ ಭಾಗದ ಕ್ರೀಡಾಸಕ್ತ ಯುವಕರಿಗೆ ಅನುಕೂಲ ಮಾಡಿಕೊಡಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: Puneeth Rajkumar ಅಗಲಿ ಇಂದಿಗೆ ಮೂರು ತಿಂಗಳು: ಕುಟುಂಬದಿಂದ ಸಮಾಧಿಗೆ ಪೂಜೆ

ಬಿಜೆಪಿ ಯುವ ಮುಖಂಡ ಡಾ.ಅರುಣ್‌ ಸೋಮಣ್ಣ ಮಾತನಾಡಿ, ಪುನೀತ್‌ ಹಲವು ವಲಯಗಳ ಸಾಮಾಜಿಕ ಕಾರ್ಯಕ್ರಮಗಳಿಗೆ ರಾಯಭಾರಿಯಾಗಿದ್ದರು. ಇಂಥ ಸಾಕಷ್ಟುಕಾರಣಗಳಿಂದ ಲಕ್ಷಾಂತರ ಜನರು ರಾಜ್‌ಕುಮಾರ್‌ ಅವರನ್ನು ತಮ್ಮ ಆದರ್ಶವನ್ನಾಗಿ ಸ್ವೀಕರಿಸಿದ್ದಾರೆ. ಸಿನಿಮಾ, ನಟನೆ, ಗ್ಲಾಮರ್‌, ಸ್ಟಾರ್‌ ಗಿರಿಗಳನ್ನು ಮೀರಿ ಒಬ್ಬ ಮಹಾ ಮಾನವತಾವಾದಿಯಾಗಿ ಪುನೀತ್‌ ನಮ್ಮೆಲ್ಲರ ಮನದಲ್ಲಿದ್ದಾರೆ ಎಂದರು. ಈ ವೇಳೆ ಬಿಬಿಎಂಪಿ ಮಾಜಿ ಸದಸ್ಯರಾದ ಮೋಹನ್‌ ಕುಮಾರ್‌, ದಾಸೇಗೌಡ, ಉಮೇಶ್‌ ಶೆಟ್ಟಿ, ವಾಗೀಶ್‌ ಸೇರಿದಂತೆ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

 

 

Latest Videos
Follow Us:
Download App:
  • android
  • ios