Asianet Suvarna News Asianet Suvarna News

ದರ್ಶನ್ 55ನೇ ಸಿನಿಮಾಗೆ ಆಕ್ಷನ್ ಕಟ್ ಹೇಳ್ತಾರೆ ವಿ. ಹರಿಕೃಷ್ಣ

  • ಸದ್ಯದಲ್ಲೇ ಸೆಟ್ಟೇರಲಿದೆ ಡಿ55 ಸಿನಿಮಾ
  • ಚಾಲೆಂಜಿಂಗ್ ಸ್ಟಾರ್ ನಟನೆಯ ಮುಂದಿನ ಸಿನಿಮಾಗೆ ವಿ. ಹರಿಕೃಷ್ಣ ನಿರ್ದೇಶನದ, ಶೈಲಜಾ ನಾಗ್ ನಿರ್ಮಾಣ
V Harikrishna to direct Darshan 55th movie dpl
Author
Bangalore, First Published Jul 15, 2021, 12:32 PM IST
  • Facebook
  • Twitter
  • Whatsapp

ನಟ ದರ್ಶನ್ ಅವರ ಮುಂದಿನ ಚಿತ್ರಕ್ಕೆ ಯಾರ ನಿರ್ದೇಶನ ಎನ್ನುವ ಕುತೂಹಲಕ್ಕೆ ತೆರೆ ಬಿದ್ದಿದೆ. ವಿ. ಹರಿಕೃಷ್ಣ ನಿರ್ದೇಶನದ, ಶೈಲಜಾ ನಾಗ್ ನಿರ್ಮಾಣದ ಚಿತ್ರವೇ ಚಾಲೆಂಜಿಂಗ್ ಸ್ಟಾರ್ ನಟನೆಯ ಮುಂದಿನ ಸಿನಿಮಾ ಎಂಬುದು ಅಧಿಕೃತವಾಗಿದೆ.

ಈ ಬಗ್ಗೆ ನಿರ್ಮಾಪಕಿ ಶೈಲಜಾ ನಾಗ್ ಅವರೇ ಟ್ವೀಟ್ ಮಾಡಿದ್ದು, ‘ಸದ್ಯದಲ್ಲೇ ಡಿ55 ಸಿನಿಮಾ ಸೆಟ್ಟೇರಲಿದೆ. ಆ ನಿಟ್ಟಿನಲ್ಲಿ ತಯಾರಿಗಳು ನಡೆಯುತ್ತಿವೆ’ ಎಂದಿದ್ದಾರೆ. ‘ಯಜಮಾನ’ ಜೋಡಿ ಮತ್ತೆ ಜತೆಯಾಗುತ್ತಿರುವುದಕ್ಕೆ ಡಿ ಬಾಸ್ ಅಭಿಮಾನಿಗಳಲ್ಲಿ ಕ್ರೇಜ್ ಹೆಚ್ಚಾಗಿದೆ.

600 ಮಂದಿ ಸಹ ಕಲಾವಿದರಿಗೆ ದಿನಸಿ ಕಿಟ್ ವಿತರಿಸಿದ ವಿಜಯ್

ಇದು ದರ್ಶನ್ ಅವರ 55ನೇ ಸಿನಿಮಾ. ಆಗಸ್‌ಟ್ ತಿಂಗಳಿಂದ ದರ್ಶನ್ ಅವರು ಸಿನಿಮಾ ಶೂಟಿಂಗ್ ಕೆಲಸಗಳಿಗೆ ಜತೆಯಾಗಲಿದ್ದಾರೆ. ಆ ನಿಟ್ಟಿನಲ್ಲಿ ಅವರೂ ಕೂಡ ತಯಾರಿ ಮಾಡಿಕೊಳ್ಳುತ್ತಿದ್ದಾರಂತೆ. ಆ ಮೂಲಕ ದರ್ಶನ್ ಅವರ ಮುಂದಿನ ಚಿತ್ರಕ್ಕೆ ತರುಣ್ ಸುಧೀರ್ ಅವರೇ ನಿರ್ದೇಶನ ಮಾಡಲಿದ್ದಾರೆಯೇ ಎನ್ನುವ ಅನುಮಾನಗಳಿಗೂ ತೆರೆ ಬಿದ್ದಿದೆ.

ಸದ್ಯಕ್ಕೆ ತರುಣ್ ಸುಧೀರ್ ಅವರು ‘ಸಿಂಧೂರ ಲಕ್ಷ್ಮಣ’ ಕತೆ ಹಾಗೂ ಚಿತ್ರಕಥೆಯಲ್ಲಿ ಬ್ಯುಸಿ ಆಗಿದ್ದಾರೆ. ಶೈಲಜಾ ನಾಗ್ ನಿರ್ಮಾಣದ ಸಿನಿಮಾ ಮುಗಿಯುತ್ತಿರುವಂತೆಯೇ ಉಮಾಪತಿ ನಿರ್ಮಾಣ, ತರುಣ್ ಸುಧೀರ್ ಅವರ ನಿರ್ದೇಶನದ ಸಿನಿಮಾ ಸೆಟ್ಟೇರಲಿದೆ. ಈ ಚಿತ್ರದ ನಂತರ ಮಿಲನ ಪ್ರಕಾಶ್ ನಿರ್ದೇಶನದ ಚಿತ್ರಕ್ಕೆ ದರ್ಶನ್ ಅವರು ಜತೆಯಾಗಲಿದ್ದಾರೆ.

 

ಎರಡು ಕಮರ್ಷಿಯಲ್ ಹಾಗೂ ಒಂದು ಐತಿಹಾಸಿಕ ಚಿತ್ರದ ನಂತರ ಮತ್ತೆ ಕಮರ್ಷಿಯಲ್ ಚಿತ್ರಕ್ಕೆ ಮರಳಲಿದ್ದು, ಈ ಚಿತ್ರಕ್ಕೆ ಉಮಾಪತಿ ಅವರಿಗೇ ಕಾಲ್‌ಶೀಟ್ ಕೊಟ್ಟಿದ್ದಾರೆ ಚಾಲೆಂಜಿಂಗ್ ಸ್ಟಾರ್. ಈ ಚಿತ್ರಗಳ ನಡುವೆ ರಾಕ್‌ಲೈನ್ ವೆಂಕಟೇಶ್ ನಿರ್ಮಾಣದ ಚಿತ್ರಗಳು ಯಾವಾಗ ಟೇಕಪ್ ಆಗುತ್ತವೆ ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಬೇಕಿ 

Follow Us:
Download App:
  • android
  • ios