ಕಲಾವಿದರ ಸಂಘದ ವತಿಯಿಂದ ದಿನಸಿ ಕಿಟ್‌ಗಳನ್ನು ವಿತರಣೆ ಸುಮಾರು 600 ಮಂದಿ ಸಹ ಕಲಾವಿದರಿಗೆ ರೇಶನ್ ಕಿಟ್

ಹೊಂಬಾಳೆ ಫಿಲಂಸ್‌ನ ವಿಜಯ್ ಕಿರಗಂದೂರು ಸಹ ಕಲಾವಿದರ ಸಂಘಕ್ಕೆ 4 ಲಕ್ಷ ರುಪಾಯಿಗಳನ್ನು ನೀಡಿ, ಈ ಹಣದಲ್ಲಿ ಸುಮಾರು 600 ಮಂದಿ ಸಹ ಕಲಾವಿದರಿಗೆ ರೇಶನ್ ಕಿಟ್ ನೀಡುವಂತೆ ಸೂಚಿಸಿದ್ದರು.

ಅದರಂತೆ ಸಹ ಕಲಾವಿದರ ಸಂಘದ ವತಿಯಿಂದ ದಿನಸಿ ಕಿಟ್‌ಗಳನ್ನು ವಿತರಣೆ ಮಾಡಲಾಗಿದೆ. ರೇಶನ್ ಜತೆಗೆ ಸಾರಿಗೆ ಭತ್ಯೆ ಎಂದು ತಲಾ 200 ರುಪಾಯಿಗಳನ್ನೂ ಸಹ ನೀಡಲಾಯಿತು ಎಂದು ಕರ್ನಾಟಕ ಸಹ ಕಲಾವಿದರ ಸಂಘದ ಖಜಾಂಚಿ ದಿವಾಕರ್ ಆರಗ ತಿಳಿಸಿದ್ದಾರೆ.

ಹಾಡಿನ ಶೂಟಿಂಗ್‌ಗೆ 3 ಕೋಟಿ ವೆಚ್ಚದ ಸೆಟ್: ಜು.19ರಿಂದ ಮದಗಜ ಶೂಟಿಂಗ್ ಶುರು

ತಮ್ಮ ಸಂಘದ ಸದಸ್ಯರ ಸಂಕಷ್ಟಕ್ಕೆ ಮಿಡಿದ ಹೊಂಬಾಳೆ ಫಿಲಮ್‌ಸ್ನ ವಿಜಯ್ ಕಿರಗಂದೂರು ಹಾಗೂ ಸಹಕಾರ ನೀಡಿದ ಕರ್ನಾಟಕ ಚಲನಚಿತ್ರ ಕಾರ್ಮಿಕರ, ಕಲಾವಿದರ ಹಾಗೂ ತಂತ್ರಜ್ಞರ ಒಕ್ಕೂಟದ ಅಧ್ಯಕ್ಷ ಸಾ.ರಾ. ಗೋವಿಂದು, ಕಾರ್ಯದರ್ಶಿ ರವೀಂದ್ರನಾಥ್ ಹಾಗೂ ನಿರ್ಮಾಣ ನಿರ್ವಾಹಕ ಚಂಪಕಧಾಮ ಬಾಬು ಅವರಿಗೆ ಸಹ ಕಲಾವಿದರ ಸಂಘ ಕೃತಜ್ಞತೆ ಸಲ್ಲಿಸಿದೆ.