ನಂ.1 ಟ್ರೆಂಡಿಂಗ್‌ನಲ್ಲಿ ಕಬ್ಜ ಟೀಸರ್‌...ಸಿನಿಮಾದಲ್ಲಿ ಏನೆಲ್ಲಾ ಸ್ಪೆಷಲ್ ಇದೆ ಎಂದು ಟೀಸರ್ ರಿಲೀಸ್ ಕಾರ್ಯಕ್ರಮದಲ್ಲಿ ಬಹಿರಂಗ ಪಡಿಸಿದ ನಿರ್ದೇಶಕರು 

ನಟರಾದ ಉಪೇಂದ್ರ ಹಾಗೂ ಸುದೀಪ್‌ ಅವರ ಕಾಂಬಿನೇಶನ್‌ನ ‘ಕಬ್ಜ’ ಚಿತ್ರದ ಟೀಸರ್‌ ಬಿಡುಗಡೆ ಆದ 24 ಗಂಟೆ ಅವಧಿಯಲ್ಲಿ 10 ಮಿಲಿಯನ್‌ ಹಿಟ್ಸ್‌ ಪಡೆದುಕೊಂಡಿದೆ. ಆನಂದ್‌ ಯೂಟ್ಯೂಬ್‌ ಚಾನಲ್‌ನಲ್ಲಿ ಟೀಸರ್‌ ಅಧಿಕೃತವಾಗಿ ಬಿಡುಗಡೆ ಆಗಿದ್ದು, ಈ ಒಂದೇ ಆನಂದ್‌ ಯೂಟ್ಯೂಬ್‌ನಲ್ಲೇ ಟೀಸರ್‌ 10 ಮಿಲಿಯನ್‌ ಗಡಿ ದಾಟುವ ಮೂಲಕ ಹೊಸ ದಾಖಲೆ ಮಾಡಿದೆ. ಆರ್‌ ಚಂದ್ರು ನಿರ್ದೇಶಿಸಿ, ನಿರ್ಮಿಸಿರುವ ಈ ಚಿತ್ರದ ಟೀಸರ್‌ ದೃಶ್ಯಗಳು ಹಾಗೂ ಹಿನ್ನೆಲೆ ಸಂಗೀತ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿವೆ. ಅದರಲ್ಲೂ ಸಂಗೀತ ನಿರ್ದೇಶಕ ರವಿ ಬಸ್ರೂರು ಅವರ ರೀರೇಕಾರ್ಡಿಂಗ್‌ಗೆ ನೋಡುಗರರು ಫಿದಾ ಆಗಿದ್ದಾರೆ.

ಒಂದೇ ದಿನದಲ್ಲಿ ಯೂಟ್ಯೂಬ್‌ನಲ್ಲಿ ನಂ.1 ಟ್ರೆಂಡಿಂಗ್‌ ಪಟ್ಟಕ್ಕೇರಿರುವ ‘ಕಬ್ಜ’ ಚಿತ್ರದ ಟೀಸರ್‌ ಸೆ.17ರಂದು ಬಹುಭಾಷಾ ನಟ ರಾಣಾ ದಗ್ಗುಬಾಟಿ ಬಿಡುಗಡೆ ಮಾಡಿದ್ದರು. ಉಪೇಂದ್ರ ಅವರ ಹುಟ್ಟು ಹಬ್ಬದ ಅಂಗವಾಗಿ ಐದು ಭಾಷೆಗಳಲ್ಲಿ ಅದ್ದೂರಿಯಾಗಿ ಬಿಡುಗಡೆ ಆಗಿದ್ದ ಟೀಸರ್‌ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ರಾಣಾ ದಗ್ಗುಬಾಟಿ ಹಾಗೂ ನಟಿ ಶ್ರೀಯಾ ಶರಣ್‌ ಅವರು ಆಗಮಿಸಿದ್ದರು. ಉಪೇಂದ್ರ, ನಿರ್ದೇಶಕ ಆರ್‌ ಚಂದ್ರು, ನಿರ್ಮಾಪಕ ಕೆ ಪಿ ಶ್ರೀಕಾಂತ್‌, ಉದ್ಯಮಿ ಬಿ ಆರ್‌ ಶೆಟ್ಟಿ, ಛಾಯಾಗ್ರಾಹಕ ಎ ಜೆ ಶೆಟ್ಟಿ, ಕಲಾ ನಿರ್ದೇಶಕ ಶಿವಕುಮಾರ್‌ ಸೇರಿದಂತೆ ಹಲವರು ಹಾಜರಿದ್ದರು. ಟೀಸರ್‌ ಈವೆಂಟ್‌ನಲ್ಲಿ ಚಿತ್ರತಂಡ ಹೇಳಿದ ಮಾತುಗಳು ಇಲ್ಲಿವೆ.

ಉಪೇಂದ್ರ 1990ರಲ್ಲೇ ಪ್ಯಾನ್ ಇಂಡಿಯಾ ಸಿನಿಮಾ ಮಾಡಿದ್ರು: Rana Daggubati

ನಾನು ಉಪ್ಪಿ ಅಭಿಮಾನಿ: ರಾಣಾ ದಗ್ಗುಬಾಟಿ

ಉಪೇಂದ್ರ ಅವರ ಚಿತ್ರದ ಟೀಸರ್‌ ಬಿಡುಗಡೆ ಮಾಡುವುದಕ್ಕೆ ಬೆಂಗಳೂರಿಗೆ ಬಂದಿದ್ದು ನನಗೆ ಹೆಮ್ಮೆ ಆಗುತ್ತಿದೆ. ಅವರ ಮುಂದೆ ನಾವು ಪ್ಯಾನ್‌ ಇಂಡಿಯಾ ಸಿನಿಮಾ, ಸ್ಟಾರ್‌ಗಳು ಅಂತ ನಿಲ್ಲಕ್ಕೆ ಭಯ ಆಗುತ್ತದೆ. ಯಾಕೆಂದರೆ 90ರಲ್ಲೇ ಅವರ ಚಿತ್ರಗಳನ್ನು ತೆಲುಗಿನಲ್ಲಿ ಡಬ್‌ ವರ್ಷನ್‌ ನೋಡುತ್ತಿದ್ದೆ. ಆಗಲೇ ಅವರು ಪ್ಯಾನ್‌ ಇಂಡಿಯಾ ಸಿನಿಮಾ ಮಾಡಿದ್ದಾರೆ. ನಾನು ಉಪೇಂದ್ರ ಅವರ ದೊಡ್ಡ ಅಭಿಮಾನಿ ಕೂಡ. ಅವರ ನಟನೆಯ ‘ಕಬ್ಜ’ ಸಿನಿಮಾ ಖಂಡಿತ ದೊಡ್ಡ ಮಟ್ಟದಲ್ಲಿ ಗೆಲ್ಲುತ್ತದೆ. ‘ಕಬ್ಜ’ ಚಿತ್ರದ ನಂತರ ಕನ್ನಡ ಚಿತ್ರರಂಗದಂತ್ತ ಇನ್ನಷ್ಟುದೊಡ್ಡ ಮಟ್ಟದಲ್ಲಿ ಇಡೀ ಇಂಡಿಯಾ ತಿರುಗಿ ನೋಡುತ್ತದೆ.

ಬೆಂಗಳೂರಿನಲ್ಲಿ ನನ್ನ ಹೃದಯವಿದೆ, ಮಸಾಲ ದೋಸೆ ಸೂಪರ್: Shriya Sharan

ಕಿಚ್ಚ ಬಂಗಾರದ ಕಿರೀಟದಲ್ಲಿ ಡೈಮಂಡ್‌ನಂತೆ: ಆರ್‌ ಚಂದ್ರು

ಇದು ಕನ್ನಡಿಗರ ಪ್ಯಾನ್‌ ಇಂಡಿಯಾ ಸಿನಿಮಾ. ಅದ್ದೂರಿ ಮೇಕಿಂಗ್‌, ಯಾವ ಭಾಷೆಗೂ ಕಡಿಮೆ ಇಲ್ಲ ಎನ್ನುವಂತೆ ವಿಷುವಲ್‌ ಕ್ವಾಲಿಟಿ ಕೊಡಬೇಕು ಎಂಬುದು ನನ್ನ ಕನಸು ಆಗಿತ್ತು. ಅದು ‘ಕಬ್ಜ’ ಚಿತ್ರದಲ್ಲಿ ಈಡೇರಿದೆ. ಟೀಸರ್‌ ನೋಡಿ ಬೇರೆ ಬೇರೆ ಚಿತ್ರಗಳ ಜತೆಗೆ ಹೋಲಿಕೆ ಮಾಡುವವರಿಗೆ ನಾನು ಉತ್ತರಿಸಲ್ಲ. ಹೋಲಿಕೆ ಮಾಡೋದಿದ್ದರೆ ಎವರೆಸ್ಟ್‌ಗೆ ಹೋಲಿಸಿ, ಗುಡ್ಡಕ್ಕೆ ಹೋಲಿಕೆ ಮಾಡಬೇಡಿ. ಈ ಚಿತ್ರದಲ್ಲಿ ನಟ ಸುದೀಪ್‌ ಪಾತ್ರ ಹೇಗಿರುತ್ತದೆ ಎಂದರೆ ಬಂಗಾರದ ಕಿರೀಟದಲ್ಲಿ ಡೈಮಂಡ್‌ ಇದ್ದಂತೆ.

ಫುಲ್‌ ಆಫ್‌ ಎಮೋಷನ್‌ ಪಾತ್ರ: ಶ್ರೀಯಾ ಶರಣ್‌

ನನ್ನ ಪಾತ್ರದ ಬಗ್ಗೆ ನಾನು ಏನೂ ಹೇಳುವಂತಿಲ್ಲ. ಟೀಸರ್‌ ನೋಡಿದ ಮೇಲೆ ಅನಿಸಿದ್ದು. ತುಂಬಾ ಎಮೋಷನ್‌ ಆಗಿ ಸಾಗುವ ಪಾತ್ರ ನನ್ನದು. ಅತ್ಯಂತ ದುಬಾರಿ ಮತ್ತು ಆಪ್ತವಾದ ಪಾತ್ರವನ್ನು ನನಗೆ ಕೊಟ್ಟಿದ್ದಾರೆ. ‘ಕಬ್ಜ’ ಚಿತ್ರದಲ್ಲಿ ನಟಿಸುತ್ತಿದ್ದು ಖುಷಿ ಆಯಿತು. ನಿರ್ದೇಶಕರಿಗೆ ಭಾಷೆ ಬರದೆ ಹೋದರು, ಅವರು ಬಾಡಿ ಲಾಗ್ವೇಜ್‌ನಲ್ಲೇ ನನಗೆ ಹೇಳಿಕೊಡುತ್ತಿದ್ದರು. ಪ್ಯಾನ್‌ ಇಂಡಿಯಾ ಚಿತ್ರಗಳಿಂದ ನಾತ್‌ರ್‍, ಸೌತ್‌ ಎನ್ನುವ ಗಡಿ ಇರಲ್ಲ. ಎಲ್ಲ ಒಂದೇ. ಅದು ಇಂಡಿಯಾ.