Asianet Suvarna News Asianet Suvarna News

ಕರಿಮಣಿ ಮಾಲಿಕ ನೀನಲ್ಲ... ಸಡನ್ನಾಗಿ ಉಪೇಂದ್ರ ಹಳೇ ಹಾಡು ಸಖತ್ ಟ್ರೆಂಡಿಂಗ್ ಆಗ್ತಿದೆ, ಏನು ಕಾರಣ?

ಕಳೆದ ಕೆಲವು ದಿನಗಳಿಂದ ಉಪೇಂದ್ರ ಹಳೇ ಹಾಡುಗಳು ಸಖತ್ ವೈರಲ್ ಆಗ್ತಿವೆ. ಎಲ್ ನೋಡಿದ್ರೂ ನೀನಲ್ಲ ನೀನಲ್ಲ ಕರಿಮಣಿ ಮಾಲಿಕ ನೀನಲ್ಲ ಹಾಡು. ಸಡನ್ ಹೈಪ್‌ಗೆ ಕಾರಣ ಏನು?

 

upendra movie karimani malika nanna song goes viral reason behind old son getting viral bni
Author
First Published Feb 5, 2024, 4:03 PM IST

'ಏನಿಲ್ಲ.. ಏನಿಲ್ಲ ನನ್ನ ನಿನ್ನ ನಡುವೆ ಏನಿಲ್ಲ.. ಏನೇನಿಲ್ಲ..' ಅನ್ನೋ ಹಾಡು ಬೇಡ ಬೇಡ ಅಂದ್ರೂ ಹತ್ತಾರು ಸಲ ನಿಮ್ಮ ಕಿವಿಗೆ ಬಿದ್ದಿರಬಹುದು. ಸುಮಾರು 25 ವರ್ಷಗಳ ಹಿಂದೆ ರಿಲೀಸ್ ಆದ ಕನ್ನಡ ಸಿನಿಮಾದ ಹಾಡು ಈ ಪಾಟಿ ಟ್ರೆಂಡ್ ಆಗೋದಕ್ಕೂ ಒಂದು ಕಾರಣ ಇದೆ. ಶುರುವಿಗೆ ಈ ಹಾಡು ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಳ್ಳೋದಕ್ಕೆ ಏನೇ ಕಾರಣ ಇರಬಹುದು, ಆದರೆ ಆ ಬಳಿಕ ಸಿಕ್ಕಾಪಟ್ಟೆ ಜನ 'ಏನಿಲ್ಲ ಏನಿಲ್ಲ..' ಹಾಡಿಗೆ ರೀಲ್ಸ್ ಮಾಡಿ ಮಾಡಿ ಪೋಸ್ಟ್ ಮಾಡುತ್ತಿದ್ದಾರೆ. ಉಪೇಂದ್ರ ನಾಯಕನಾಗಿ ನಟಿಸಿದ್ದ 'ಉಪೇಂದ್ರ' ಸಿನಿಮಾದ ಹಾಡುಗಳು ಆ ಕಾಲಕ್ಕೆ ಸಿಕ್ಕಾಪಟ್ಟೆ ಫೇಮಸ್ ಆಗಿದ್ದವು. ಪ್ರೇಮ, ರವೀನಾ ಟಂಡನ್ ಹಾಗೂ ದಾಮಿನಿ ಈ ಸಿನಿಮಾದಲ್ಲಿ ನಾಯಕಿಯರಾಗಿ ನಟಿಸಿದ್ದರು. ಈ ಸಿನಿಮಾದಲ್ಲಿ ಒಬ್ಬೊಬ್ಬ ನಾಯಕಿಗೆ ಒಂದೊಂದು ಹಾಡನ್ನು ಇಡಲಾಗಿತ್ತು. ಅದರಲ್ಲಿ ಉಪ್ಪಿ ಹಾಗೂ ಪ್ರೇಮಗೆ ಅಂತ ಕಂಪೋಸ್ ಮಾಡಿದ್ದ ಹಾಡೇ 'ಏನಿಲ್ಲ.. ಏನಿಲ್ಲ..'. ಆಗತಾನೇ 'ಎ' ಸಿನಿಮಾಗೆ ಭರ್ಜರಿ ಮ್ಯೂಸಿಕ್ ಕೊಟ್ಟು ಗೆದ್ದಿದ್ದ ಗುರುಕಿರಣ್ 'ಉಪೇಂದ್ರ'ಗೂ ಮಸ್ತ್ ಟ್ಯೂನ್ ಹಾಕಿದ್ದರು.

ಅಂದಹಾಗೆ 'ಉಪೇಂದ್ರ' ಸಿನಿಮಾ ಬಿಡುಗಡೆಯಾಗಿ 25 ವರ್ಷ ಆದ ಬಳಿಕ ಈಗ ಈ ಹಾಡು ದಿಢೀರನೇ ಟ್ರೆಂಡಿಂಗ್‌ನಲ್ಲಿದೆ. ಅದಕ್ಕೆ ಕಾರಣ ಉತ್ತರ ಕರ್ನಾಟಕದ ಒಬ್ಬ ಯುವಕ.

ಸದ್ಯದಲ್ಲೇ ಅಧಿಕೃತ ಮಾಹಿತಿ ನೀಡುತ್ತೇವೆ, ಅಲ್ಲಿಯವರೆಗೆ ಯಾವುದನ್ನೂ ನಂಬಬೇಡಿ; 'ಡೆವಿಲ್' ಪ್ರಕಾಶ್ ವೀರ್ ಮನವಿ

ಈ 'ಉಪೇಂದ್ರ' ಸಿನಿಮಾದ ಏನಿಲ್ಲ ಏನಿಲ್ಲ ಹಾಡಿನ ಸಾಲು ಬಳಸಿ ಡೈಲಾಗ್ ಹೊಡೆದು ರೀಲ್ಸ್ ಹಾಕಿದ್ದರು. ಈ ಮೂಲಕ ಕೈಕೊಟ್ಟಿದ್ದ ಹುಡುಗಿ ಬಗ್ಗೆ ಮಾತನಾಡಿದ್ದರು. ಇದೀಗ ಆ ಯುವಕನ ಈ ಒರಿಜಿನಲ್ ಡೈಲಾಗ್ ಮತ್ತು ಏನಿಲ್ಲ ಏನಿಲ್ಲ ಸಾಂಗ್ ಎಲ್ಲೆಲ್ಲೂ ವೈರಲ್ ಆಗುತ್ತಿದೆ. ಹಾಗೆಯೆ ಅಭಿಮಾನಿಗಳ ಬಾಯಲ್ಲಿ ಮತ್ತೊಮ್ಮೆ ಹಳೇ ಹಾಡು ಗುನುಗುವಂತೆ ಮಾಡಿದೆ. ಈ ಮೂಲಕ ಅಭಿಮಾನಿಗಳು ಏನಿಲ್ಲ ಏನಿಲ್ಲ ಹಾಡನ್ನು ಮತ್ತೊಮ್ಮೆ ಎಂಜಾಯ್ ಮಾಡ್ತಿದ್ದಾರೆ. 'ಏನಿಲ್ಲ ಏನಿಲ್ಲ' ಹವಾ ಜೋರು ಇನ್ನು ಹೀಗೆ 'ಏನಿಲ್ಲ ಏನಿಲ್ಲ' ಹಾಡು ವೈರಲ್ ಆಗಿದ್ದೇ ತಡ, ಸೋಷಿಯಲ್ ಮೀಡಿಯಾ ತುಂಬಾ ಇದೇ ಹಾಡು ಧೂಳೆಬ್ಬಿಸಿದೆ. ಹಾಗೇ ರೀಲ್ಸ್ ಸ್ಟಾರ್‌ಗಳು ಕೂಡ ಈ ಹಾಡಿಗೆ ಈಗ ತುಟಿ ಪೋಣಿಸಿ, ರೀಲ್ಸ್ ಮಾಡುತ್ತಾ 'ಏನಿಲ್ಲ ಏನಿಲ್ಲ' ಹಾಡಿನ ಸಂಭ್ರಮದಲ್ಲಿ ಕೈಜೋಡಿಸಿ ಸಂಭ್ರಮಿಸಿದ್ದಾರೆ. ಈ ಮೂಲಕ ಬರೋಬ್ಬರಿ 25 ವರ್ಷಗಳ ನಂತರ ಮತ್ತೊಮ್ಮೆ ಇದೀಗ, ಉಪೇಂದ್ರ ಅವರ ಸಿನಿಮಾ ಹಾಡು ಫುಲ್ ವೈರಲ್ ಆಗುತ್ತಿದೆ.

ಅಷ್ಟಕ್ಕೂ ಈ ಹಾಡು ಹುಟ್ಟಿದ ಬಗ್ಗೆ ಒಂದು ಸುದ್ದಿ ಹರಿದಾಡ್ತಾ ಇದೆ. ಈ ಸಿನಿಮಾ ಬರುವ ಸಂದರ್ಭದಲ್ಲಿ ಉಪೇಂದ್ರ ಹಾಗೂ ನಟಿ ಪ್ರೇಮ ನಡುವೆ ಏನೋ ನಡೀತಿದೆ ಅಂತ ಗಾಳಿಸುದ್ದಿಗಳು ಹಬ್ಬಿದ್ದವು. ಇದಕ್ಕೆ ಹಾಡಿನ ರೂಪದಲ್ಲಿ ಉತ್ತರ ಕೊಡೋಣ ಅಂತ ಉಪ್ಪಿ ನಿರ್ಧರಿಸಿದ್ದರು. ಅದಕ್ಕಾಗಿ ಕಂಪೋಸ್ ಮಾಡಿದ ಹಾಡಿದು ಎಂಬ ಮಾತಿದೆ. ಅಂದಹಾಗೆ ಈ ಸಿನಿಮಾದ ಆಡಿಯೋ ಹಕ್ಕು ಆ ಕಾಲಕ್ಕೆ ಅತೀ ಹೆಚ್ಚು ಬೆಲೆಗೆ ಸೇಲ್ ಆಗಿತ್ತು. ಸುಮಾರು 54 ಲಕ್ಷ ರೂಪಾಯಿಗೆ ಆಡಿಯೋ ಹಕ್ಕು ಮಾರಾಟ ಆಗುವ ಮೂಲಕ ಆವರೆಗಿನ ಕನ್ನಡ ಚಿತ್ರರಂಗದ ಇತಿಹಾಸಕ್ಕೆ ಅತಿ ಹೆಚ್ಚು ಮೊತ್ತಕ್ಕೆ ಮಾರಾಟವಾದ ಆಡಿಯೋ ರೈಟ್ಸ್ ಅನ್ನೋ ಹೆಗ್ಗಳಿಕೆಯೂ ಪಾತ್ರವಾಗಿತ್ತು.

ಸದ್ಯ ಮತ್ತೆ ಕರಿಮಣಿ ಮಾಲಿಕ ನಾನಲ್ಲ ಹಾಡನ್ನು ಕರಿಮಣಿ ಹಾಕದ ನವನಾಗರಿಕ ಹೆಣ್ಮಕ್ಕಳೂ ಖುಷಿಯಿಂದ ರೀಲ್ಸ್ ಮಾಡ್ತಿದ್ದಾರೆ. ಅಲ್ಲಿಗೆ ಉಪ್ಪಿ ಹಾಡು ಸಾರ್ವಕಾಲಿಕ ಅನ್ನೋ ಮಾತು ಮತ್ತೊಮ್ಮೆ ಪ್ರೂವ್ ಆಗಿದೆ.

'ಮಲೆನಾಡ ಗೊಂಬೆ'ಗೆ ಮನಸೋತ ಮನೆಹಾಳನಿಗೆ ರಿಯಲ್ ಸ್ಟಾರ್ ಉಪೇಂದ್ರ ಸಾಥ್..!

Follow Us:
Download App:
  • android
  • ios