ಚಿಂತನ್‌ ನಿರ್ದೇಶಿಸಿ, ನಟ ದರ್ಶನ್‌ ಅವರು ಅಭಿನಯಿಸಿದ ‘ಚಕ್ರವರ್ತಿ’ ಸಿನಿಮಾ ಕೂಡ ಮುತ್ತಪ್ಪ ರೈ ಜೀವನ ಪುಟಗಳಿಂದ ಸ್ಫೂರ್ತಿ ಪಡೆದುಕೊಂಡಿದ್ದೇ ಅಂತಾರೆ. ಆದರೆ, ಅವರ ಅಧಿಕೃತ ಜೀವನ ಚರಿತ್ರೆ ಸಿನಿಮಾ ಆಗಬೇಕು ಎಂದು ಆ ನಿಟ್ಟಿನಲ್ಲಿ ತಯಾರಿ ಮಾಡಿಕೊಂಡು ಚಿತ್ರವನ್ನೂ ಘೋಷಣೆ ಮಾಡಿದ್ದು ನಿರ್ದೇಶಕ ರಾಮಾ ಗೋಪಾಲ್‌ ವರ್ಮಾ. ರೈ ಹೆಸರಿನಲ್ಲೇ ಬಹು ಭಾಷೆಯಲ್ಲಿ ಸೆಟ್ಟೇರಿದ ಈ ಚಿತ್ರಕ್ಕೆ ಬೆಂಗಳೂರಿನ ಬಿಡದಿ ಸಮೀಪ ಇರುವ ಮುತ್ತಪ್ಪ ರೈ ಅವರ ಮನೆಯ ಮುಂದೆಯೇ ಅದ್ದೂರಿಯಾಗಿ ಮುಹೂರ್ತ ಕೂಡ ನಡೆಯಿತು.

ಮರೆಯಾದ ಮಾಜಿ ಡಾನ್; ಜಯ ಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷ ಜಗದೀಶ್ ಸಂತಾಪ

ಸಾವಿರಾರು ಜತೆ ಸೇರಿದ್ದರು. ಬಾಲಿವುಡ್‌ ನಟ ವಿವೇಕ್‌ ಒಬೆರಾಯ್‌ ಅವರು ಇದಕ್ಕೆ ನಾಯಕನಾಗಿ ಬಂದರು. ಚಿತ್ರದ ಫಸ್ಟ್‌ ಲುಕ್‌ ಕೂಡ ಬಿಡುಗಡೆ ಆಯ್ತು. ಆದರೆ, ಅದೇನಾಯಿತೋ ಗೊತ್ತಿಲ್ಲ, ಚಿತ್ರ ಮತ್ತೆ ಟೇಕಪ್‌ ಆಗಲೇ ಇಲ್ಲ. ಈಗ ಮುತ್ತಪ್ಪ ರೈ ಅವರು ಬಾರದ ಲೋಕಕ್ಕೆ ಹೋಗಿದ್ದಾರೆ. ಅವರ ಕನಸಿನ ಸಿನಿಮಾ ರೈ, ಕೊನೆಗೂ ಬರಲೇ ಇಲ್ಲ.

ಮುತ್ತಪ್ಪ ರೈ ಅವರ ಆತ್ಮೀಯ ಸ್ನೇಹಿತರು ಹಾಗೂ ನಿರ್ಮಾಪಕ ಪದ್ಮನಾಭ್‌ ಅವರು ಈ ಚಿತ್ರವನ್ನು ಕೈಗೆತ್ತಿಕೊಳ್ಳುತ್ತಾರೆಂಬ ಸುದ್ದಿ ಇದೆ. ಆದರೂ ರೈ ಅವರು ಇದ್ದಾಗಲೇ ಅವರ ಬಯೋಗ್ರಫಿ ತೆರೆ ಮೇಲೆ ಮೂಡಲೇ ಇಲ್ಲ.

ಆತ್ಮೀಯ ಸ್ನೇಹಿತ ಮುತ್ತಪ್ಪ ರೈ ಅವರನ್ನು ಮುನಿರತ್ನ ಸ್ಮರಿಸಿಕೊಂಡಿದ್ದು ಹೀಗೆ

ನನ್ನ ಸಾಯಿಸಿಬಿಡಿ : ಸಾವಿರಾರು ಮಂದಿ ಸೇರಿದ್ದ, ಕನ್ನಡದ ಹಲವು ನಟರು ಹಾಜರಿದ್ದ ರೈ ಚಿತ್ರದ ಮುಹೂರ್ತ ಕಾರ್ಯಕ್ರಮದಲ್ಲಿ ನಿರ್ದೇಶಕ ರಾಮ್‌ ಗೋಪಾಲ್‌ ವರ್ಮಾ ಕೊಟ್ಟಹೇಳಿಕೆಗೆ ಎಲ್ಲರೂ ಅಚ್ಚರಿಗೊಂಡರು.

ನೀವು ಬೇರೆ ಯಾವ ನಿರ್ದೇಶಕರನ್ನೂ ನಂಬದೇ ನನ್ನ ಮೇಲೆ ನಂಬಿಕೆ ಇಟ್ಟು ನಿಮ್ಮ ಜೀವನ ಕತೆಯನ್ನು ಸಿನಿಮಾ ಮಾಡಿ ಎಂದಿದ್ದೀರಿ. ನಿಮ್ಮ ನಂಬಿಕೆಯನ್ನು ಉಳಿಸಿಕೊಳ್ಳುತ್ತೇನೆ. ಈ ಚಿತ್ರದಿಂದ ನಿಮಗೆ ಯಾವುದೇ ರೀತಿಯಲ್ಲೂ ಕೆಟ್ಟಹೆಸರು ಬರಲ್ಲ. ಅಥವಾ ಸುಳ್ಳು ಸಂಗತಿಗಳನ್ನು ಈ ಚಿತ್ರದಲ್ಲಿ ಹೇಳಲ್ಲ. ಹಾಗೇನಾದರೂ ಹೇಳಿ ಸಿನಿಮಾ ಮಾಡಿದ್ದರೆ, ನೀವು ನನಗೆ ಸುಪಾರಿ ಕೊಟ್ಟು ಸಾಯಿಸಿಬಿಡಿ ಎಂದು ವೇದಿಕೆಯ ಮೇಲೆ ರಾಮ್‌ ಗೋಪಾಲ್‌ ವರ್ಮಾ ಹೇಳಿಕೊಂಡಿದ್ದರು.

ಮುತ್ತಪ್ಪ ರೈ ಸಾವಿನ ಬೆನ್ನಲ್ಲೇ ಜಯರಾಜ್ ಪುತ್ರನ ಫೇಸ್ಬುಕ್ ಪೋಸ್ಟ್ ವೈರಲ್!