ಅನ್‌ಲಾಕ್‌ ರಾಘವ 2025 ರ ಫೆಬ್ರವರಿ 7 ಕ್ಕೆ ತೆರೆಗೆ ಸ್ಯಾಂಡಲ್‌ವುಡ್‌ ಭರವಸೆ ನಾಯಕ ಮಿಲಿಂದ್‌ ಆಂಡ್ ಲವ್‌ ಮಾಕ್ಟೇಲ್‌ 2 ಬೆಡಗಿ ರಚೆಲ್‌ ಡೇವಿಡ್‌ ಜೊತೆಯಾಗಿ ಅಭಿನಯ ವಿಭಿನ್ನ ಹಾಸ್ಯಪಾತ್ರದಲ್ಲಿ ಮಿಂಚಿರುವ ಸಾಧು ಕೋಕಿಲ ಕಥೆ, ಚಿತ್ರಕತೆ ರಾಮಾ ರಾಮಾ ರೇ ಖ್ಯಾತಿಯ ಡಿ.ಸತ್ಯಪ್ರಕಾಶ್‌ ನಿರ್ದೇಶನ ದೀಪಕ್‌ ಮಧುವನಹಳ್ಳಿ ಮಯೂರ ಮೋಷನ್ ಪಿಕ್ಚರ್ಸ್ ಬ್ಯಾನರ್‌ ಅಡಿ ಮಂಜುನಾಥ ಡಿ ಹಾಗೂ ಗಿರೀಶ್ ಕುಮಾರ್ ಜಂಟಿಯಾಗಿ ಚಿತ್ರ ನಿರ್ಮಾಣ ಜೆ ಅನೂಪ್ ಸೀಳಿನ್ ಸಂಗೀತ ಸಂಯೋಜನೆ  

ಬೆಂಗಳೂರು : ವಿಭಿನ್ನ ಕಥಾ ಹಂದರ ಹೊಂದಿರುವ ಬಹುನಿರೀಕ್ಷಿತ ʻಅನ್‌ಲಾಕ್‌ ರಾಘವʼ ಚಿತ್ರ 2025 ರ ಫೆಬ್ರವರಿ 7 ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಚಿತ್ರದ ನಾಯಕನಿಗೆ ಯಾವುದೇ ರೀತಿಯ ಬೀಗಗಳನ್ನು ಕೈ ಗೆ ಸಿಗುವ ವಸ್ತುಗಳನ್ನು ಬಳಸಿ ಸಲೀಸಾಗಿ ಅನ್‌ಲಾಕ್‌ ಮಾಡುವ ಟ್ಯಾಲೆಂಟ್‌ ಇರುತ್ತದೆ. ಆದರೆ, ಲೈಫ್‌ ಎಂಬ ಜರ್ನಿಯಲ್ಲಿ ಅವನು ಲಾಕ್‌ ಆದಾಗ, ಹೇಗೆ ಅದನ್ನು ಅನ್‌ಲಾಕ್‌ ಮಾಡಿಕೊಂಡು ಹೊರಬರುತ್ತಾನೆ ಎನ್ನುವುದೇ ಚಿತ್ರದ ಒನ್‌ ಲೈನ್‌ ಸ್ಟೋರಿ.

ಒಂದು ಕ್ಯೂಟ್‌ ಲವ್‌ ಸ್ಟೋರಿ, ಮೈ ನವಿರೇಳಿಸುವ ಸಾಹಸ ದೃಷ್ಯಗಳು, ಇಂಪಾದ ಹಾಡುಗಳು, ವಿಶೇಷ ಪಾತ್ರದೊಂದಿಗೆ ಸಾಧು ಕೋಕಿಲ ಅವರ ಹೊಟ್ಟೆ ಹುಣ್ಣಾಗಿಸುವ ಕಾಮಿಡಿ, ಅದ್ಭುತ ಛಾಯಾಗ್ರಹಣ, ಕಲಾವಿದರ ಮನಮೋಹಕ ಅಭಿನಯ ಹಾಗೂ ಅತ್ಯದ್ಭುತ ನಿರ್ದೇಶನದಿಂದ ಕೂಡಿದ ಒಂದು ಕಂಪ್ಲೀಟ್‌ ಮನರಂಜನಾ ಪ್ಯಾಕೇಜ್‌ ʻಅನ್‌ಲಾಕ್‌ ರಾಘವʼ.

Nan Hudugi Song - ನನ್ನ ಹುಡುಗಿ ಹಾಡು ನೋಡಲು ಇಲ್ಲಿ ಕ್ಲಿಕಿಸಿ.

ತಮ್ಮ ಮೊದಲ ಸಿನಿಮಾ ʻವೀಕೆಂಡ್‌ʼ ನಲ್ಲೇ ಹಿರಿಯ ನಟ ಅನಂತ್‌ ನಾಗ್‌ ಅವರೊಂದಿಗೆ ಪರದೆ ಹಂಚಿಕೊಂಡು ಅದ್ಭುತ ಅಭಿನಯದಿಂದ ನಿಸಿ ಪ್ರೇಕ್ಷಕರ ಮನ ಗೆದ್ದಿರುವ ಚಂದನವನದ ಭರವಸೆಯ ನಾಯಕ ಮಿಲಿಂದ್ ಗೌತಮ್‌, ಅನ್‌ಲಾಕ್‌ ರಾಘವ ಚಿತ್ರದಲ್ಲಿ ನಾಯಕನಾಗಿ ಗ್ರ್ಯಾಂಡ್‌ ಎಂಟ್ರಿ ಕೊಟ್ಟಿದ್ದಾರೆ. ಈ ಚಿತ್ರಕ್ಕಾಗಿ ಪೂರ್ಣ ಪ್ರಮಾಣದಲ್ಲಿ ತಮ್ಮನ್ನು ಹುರಿಗೊಳಿಸಿಕೊಳ್ಳಲು ನೃತ್ಯ, ಸಾಹಸ, ನಟನೆಯ ಕುರಿತು ಪರಿಣಿತರಿಂದ ಒಂದು ವರ್ಷ ತರಬೇತಿ ಪಡೆದಿದ್ದಾರೆ. ಲವ್‌ ಮಾಕ್ಟೇಲ್‌ 2 ಬೆಡಗಿ ರೇಚಲ್‌ ಡೇವಿಡ್‌, ಮಿಲಿಂದ್‌ಗೆ ಜೋಡಿಯಾಗಿ ಅಭಿನಯಿಸಿದ್ದು, ಇವರಿಬ್ಬರ ಕೆಮೆಸ್ಟ್ರಿ ತೆರೆ ಮೇಲೆ ಮೋಡಿಮಾಡಲಿದೆ.

Lock Lock Song - ಲಾಕ್ ಲಾಕ್ ಹಾಡು ನೋಡಲು ಇಲ್ಲಿ ಕ್ಲಿಕಿಸಿ. 

ರಾಮಾ ರಾಮಾ ರೇ ಆಂಡ್ ಮ್ಯಾನ್ ಆಫ್‌ ದಿ ಮ್ಯಾಚ್ ಖ್ಯಾತಿಯ ಡಿ.ಸತ್ಯಪ್ರಕಾಶ್‌ ಅನ್‌ಲಾಕ್‌ ರಾಘವನಿಗೆ ಕಥೆ, ಚಿತ್ರಕಥೆ ಹೆಣೆದಿದ್ದಾರೆ. ರಿಯಲ್‌ ಸ್ಟಾರ್‌ ಉಪೇಂದ್ರ ಅವರ ಗರಡಿಯಲ್ಲಿ ಕೆಲಸ ಮಾಡಿರುವ, ʻರಾಜು ಜೇಮ್ಸ್‌ ಬಾಂಡ್‌ʼ ಚಿತ್ರದ ನಿರ್ದೇಶಕ ದೀಪಕ್‌ ಮಧುವನಹಳ್ಳಿ ʻಅನ್‌ಲಾಕ್‌ ರಾಘವʼಗೆ ಆಕ್ಷನ್‌ ಕಟ್‌ ಹೇಳಿದ್ದಾರೆ. ಛಾಯಾಗ್ರಾಹಕ ಲವಿತ್‌, ಪ್ರತಿಯೊಂದು ದೃಷ್ಯಗಳನ್ನೂ ಮನೋಜ್ಞವಾಗಿ ಸೆರೆ ಹಿಡಿದಿದ್ದಾರೆ. ಚಿತ್ರದಲ್ಲಿ ʻನನ್‌ ಹುಡುಗಿʼ, ʻಲಾಕ್‌ ಲಾಕ್‌ ಲಾಕ್‌ʼ, ʻರಾಘವ ರಾಘವʼ ಎಂಬ ಮೂರು ಬ್ಯೂಟಿಫುಲ್‌ ಹಾಡುಗಳಿದ್ದು, ವರಾಹ ರೂಪಂ ಖ್ಯಾತಿಯ ಸಾಯಿ ವಿಘ್ನೇಶ್‌, ಸಂಗೀತ ಲೋಕದ ಪುರುಷ ಸರಸ್ವತಿ ಎಂದೇ ಖ್ಯಾತರಾಗಿರುವ ವಿಜಯ್‌ ಪ್ರಕಾಶ್‌ ಹಾಗೂ ಅಂಕಿತಾ ಕುಂಡು ಅವರ ಕಂಠಸಿರಿಯಲ್ಲಿ ಮೂಡಿ ಬಂದಿವೆ. ಹೃದಯಶಿವ, ಪ್ರಮೋದ್‌ ಮರವಂತೆ ಹಾಗೂ ವಾಸುಖಿ ವೈಭವ್‌ ಹಾಡುಗಳಿಗೆ ಸುಂದರವಾದ ಸಾಲುಗಳ ತೋರಣ ಕಟ್ಟಿದ್ದಾರೆ.

Raghava Raghava Song - ರಾಘವ ರಾಘವ ಹಾಡ ನೋಡಲು ಇಲ್ಲಿ ಕ್ಲಿಕಿಸಿ. 

ಮಯೂರ ಮೋಷನ್ ಪಿಕ್ಚರ್ಸ್ ಬ್ಯಾನರ್‌ ಅಡಿ ಮಂಜುನಾಥ ಡಿ ಹಾಗೂ ಗಿರೀಶ್ ಕುಮಾರ್ ಎನ್‌ ನಿರ್ಮಿಸಿರುವ ಅನ್‌ಲಾಕ್‌ ರಾಘವ ಚಿತ್ರಕ್ಕೆ ಜೆ ಅನೂಪ್ ಸೀಳಿನ್ ಸಂಗೀತ ಸಂಯೋಜನೆ ಇದೆ. ಅಜಯ್ ಕುಮಾರ್ ಮತ್ತು ಮಧು ತುಂಬಕೆರೆ ಸಂಕಲನ, ವಿನೋದ್ ಹಾಗೂ ಅರ್ಜುನ್ ಸಾಹಸ ನಿರ್ದೇಶನ, ಮುರುಳಿ ಮತ್ತು ಧನಂಜಯ ಅವರ ನೃತ್ಯ ನಿರ್ದೇಶನವಿದೆ. ಕೋಟೆನಗರಿ ಚಿತ್ರದುರ್ಗದ ಬೆಟ್ಟ, ಗುಡ್ಡ, ರಸ್ತೆ, ಗಲ್ಲಿಗಳು ಹಾಗೂ ಬೆಂಗಳೂರಿನ ಸುಂದರ ತಾಣಗಳು, ಕಲರ್‌ಫುಲ್‌ ಸೆಟ್‌ಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಪ್ರಮುಖ ಪಾತ್ರಗಳಲ್ಲಿ ಶೋಭರಾಜ್, ಅವಿನಾಶ್, ರಮೇಶ್ ಭಟ್, ವೀಣಾ ಸುಂದರ್‌, ಧರ್ಮಣ್ಣ ಕಡೂರು, ಸಾಯಿ ಕುಡ್ಲ, ಭೂಮಿ ಶೆಟ್ಟಿ ಮೊದಲಾದವರು ಅಭಿನಯಿಸಿರುವ ʻಅನ್‌ಲಾಕ್‌ ರಾಘವʼ ಚಿತ್ರ ಆರಂಭದಿಂದ ಕೊನೆವರೆಗೂ‌ ಪ್ರೇಕ್ಷಕರಿಗೆ ಪೈಸಾ ವಸೂಲ್‌ ಅನುಭವ ನೀಡುವುದಂತೂ ಗ್ಯಾರಂಟಿ.

YouTube video player