Asianet Suvarna News Asianet Suvarna News

ಚಿತ್ರರಂಗದಲ್ಲಿ ಒಗ್ಗಟ್ಟಿಲ್ವಾ?: ರಾಕ್​​ಲೈನ್, ದೊಡ್ಡಣ್ಣ ಯಾರಿಗಾಗಿ ಕಲಾವಿದರ ಸಂಘದಲ್ಲಿ ಪೂಜೆ ಮಾಡಿಸುತ್ತಿದ್ದಾರೆ?

ಡಾ. ರಾಜ್​ಕುಮಾರ್ ಅಧ್ಯರಕ್ಷರಾದ ನಂತರ ಕಲಾವಿಧರ ಸಂಘದ ಜವಾಬ್ಧಾರಿ ರೆಬೆಲ್ ಸ್ಟಾರ್ ಅಂಬರೀಶ್ ಹೆಗಲೇರಿತ್ತು. ಅಂಬರೀಶ್​​ ನಮಗೊಂದು ಭವನ ಬೇಕು ಅಂತ ಚಾಮರಾಜ ಪೇಟೆಯಲ್ಲಿ ಕಲಾವಿಧರ ಬೃಹತ್​ ಬಂಗಲೆಯನ್ನ ಸರ್ಕಾರದ ಹಣದಿಂದ ಕಟ್ಟಿಸಿದ್ರು. 

United in the film industry Rockline venkatesh Doddanna who is worshiping in the artistes association gvd
Author
First Published Aug 13, 2024, 4:17 PM IST | Last Updated Aug 13, 2024, 4:17 PM IST

ದರ್ಶನ್ ಈ ಹೆಸ್ರು ಪರಪ್ಪನ ಅಗ್ರಹಾರ ಜೈಲಿಗೆ ಸೆಲೆಬ್ರಿಟಿ ಫೀಲ್ ಕೊಟ್ಟಿದೆ. ದರ್ಶನ್​​​​ನ ನೋಡೋಕೆ ಜೈಲಿಗೆ ಹೋದ ಸಿನಿ ಮಂದಿಯ ಸಂಖ್ಯೆ ದೊಡ್ಡದಿದೆ. ದರ್ಶನ್ ಹೊರ ಬರಲಿ ಅಂತ ಹರಕೆ, ಪೂಜೆ, ಹೋಮ ಎಲ್ಲವನ್ನು ಫ್ಯಾನ್ಸ್​​ ಮಾಡುತ್ತಿದ್ದಾರೆ, ಮತ್ತು ಅವರ ಮನೆಯವರೂ ಮಾಡಿದ್ದಾರೆ. ಆದ್ರೆ ಅದಕ್ಕು ಒಂದು ಹೆಜ್ಜೆ ಮುಂದೆ ಹೋಗಿ ದರ್ಶನ್​​ಗಾಗಿ ಸ್ಯಾಂಡಲ್​ವುಡ್​​​​ನಲ್ಲಿ ಹೋಮ ಹವನ ಶುರುವಾಗಿದೆ ಅನ್ನೋ ಟಾಕ್ ಕೂಡ ಶುರುವಾಗಿದೆ. ಇದರ ಬಗ್ಗೆ ಈಗ ಸ್ಯಾಂಡಲ್​ವುಡ್​​ನಲ್ಲಿ ಪರ ವಿರೋಧದ ಚರ್ಚೆಗಳು ಶುರುವಾಗಿವೆ. ಸ್ಯಾಂಡಲ್​​ವುಡ್​​ನ ಕಲಾವಿಧರ ಸಂಘ ಈಗ ಯಜಮಾನನಿಲ್ಲದ ಮನೆ. 

ಡಾ. ರಾಜ್​ಕುಮಾರ್ ಅಧ್ಯರಕ್ಷರಾದ ನಂತರ ಕಲಾವಿಧರ ಸಂಘದ ಜವಾಬ್ಧಾರಿ ರೆಬೆಲ್ ಸ್ಟಾರ್ ಅಂಬರೀಶ್ ಹೆಗಲೇರಿತ್ತು. ಅಂಬರೀಶ್​​ ನಮಗೊಂದು ಭವನ ಬೇಕು ಅಂತ ಚಾಮರಾಜ ಪೇಟೆಯಲ್ಲಿ ಕಲಾವಿಧರ ಬೃಹತ್​ ಬಂಗಲೆಯನ್ನ ಸರ್ಕಾರದ ಹಣದಿಂದ ಕಟ್ಟಿಸಿದ್ರು. ಕಲಾವಿಧರೆಲ್ಲರಿಗೂ ಸೇರಿರೋ ಈ ಬಂಗಲೆಯಲ್ಲಿ ಈಗ ದರ್ಶನ್​​ಗಾಗಿ ಪೂಜೆ ನಡೆಯುತ್ತಿದೆ ಅಂತ ಟಾಕ್​ ಆಗಿದೆ. ಈ ಬಗ್ಗೆ ಕಲಾವಿಧರ ಸಂಘದ ಕಾರ್ಯದರ್ಶಿ ಆದ ರಾಕ್​ಲೈನ್​ ವೆಂಕಟೇಶ್​ ಹಾಗು ಕಜಾಂಚಿ ಆಗಿರೋ ದೊಡ್ಡಣ್ಣ ಸ್ಪಷ್ಟನೆ ಕೊಟ್ಟಿದ್ದಾರೆ. ಈ ಪೂಜೆ ದರ್ಶನ್​ಗಾಗಿ ಅಲ್ಲ ಕಲಾವಿಧರಿಗಾಗಿ ಎಂದಿದ್ದಾರೆ. ಆದ್ರೆ ದಿಢೀರ್​ ಸುದ್ದಿಗೋಷ್ಟಿ ಮಾಡಿ ಈ ವಿಚಾರ ಹೇಳಿಕೊಂಡಿದ್ದು ಯಾಕೆ ಅನ್ನೋ ಪ್ರಶ್ನೆಯೂ ಹುಟ್ಟಿದೆ. 

ಕಲಾವಿಧರು ಒಂದು ಕುಟುಂಬ ಅಂತ ಅಣ್ಣಾವ್ರ ಕಾಲದಿಂದಲೂ ಹೇಳುತ್ತಾ ಬಂದಿದ್ದಾರೆ. ಆದ್ರೆ ಕಲಾವಿಧರಿಗೆ ಕಷ್ಟ ಬಂದಾಗ ಮಾತ್ರ ಯಾವ್ ಕುಟುಂಬರೂ ಜೊತೆ ಇರೋದಿಲ್ಲ. 90 ರ ದಶಕದ ಹೊಸ್ತಿಲ್ಲಲಿರೋ ಕನ್ನಡ ಚಿತ್ರರಂಗಕ್ಕೆ ಹತ್ತಾರು ಬಾರಿ ಬರ ಸಿಡಿಲು ಬಡಿದಿದೆ. ಸಂಕಷ್ಟ ಎದುರಾಗಿದೆ. ಆಗೆಲ್ಲಾ ಇಲ್ಲದ ಪೂಜೆ ಈಗೇಕೆ ಅಂತ ಕಲಾವಿಧರೇ ಪೂಜೆ ಮಾಡೋ ಬಗ್ಗೆ ಅಪಸ್ವರ ಎತ್ತಿದ್ದಾರೆ. ದರ್ಶನ್​​ಗಾಗಿ ಪೂಜೆ ಮಾಡಿದ್ರೆ ಕಂಡಿತ ನಾವು ಬರೋದಿಲ್ಲ ಎನ್ನುತ್ತಿದ್ದಾರೆ. ಹೀಗಾಗೆ ದಿಢೀರ್ ಅಂತ ಸುದ್ದಿಗೋಷ್ಟಿ ಮಾಡಿ ಇದು ದರ್ಶನ್​​ಗಾಗಿ ಆಗುತ್ತಿರೋ ಪೂಜೆ ಅಲ್ಲ ಅಂತ ರಾಕ್​​ಲೈನ್​ ಹಾಗು ದೊಡ್ಡಣ್ಣ ಹೇಳುತ್ತಿದ್ದಾರೆ. 

ನಿರ್ಮಾಪಕ ರಾಕ್​​​ಲೈನ್​​ ಕಲಾವಿಧರ ಸಂಘದಲ್ಲಿ ಪೂಜೆ ಮಾಡೋಕೆ  ಅಂತ ಸಮಸ್ಯೆ ನಮ್ಮ ಚಿತ್ರರಂಗಕ್ಕೆ ಏನು ಬಂದಿಲ್ಲ ಅನ್ನೋ ಕೆಲ ಕಲಾವಿಧರು, ನಮ್ಮ ಸಂಘದಲ್ಲಿ ಮಲತಾಯಿ ಧೋರಣೆ ಇದೆ ಅನ್ನುತ್ತಾರೆ. ಆದ್ರೆ ಯಾರು ಆನ್ ಸ್ಕ್ರೀನ್​ನಲ್ಲಿ ಮಾತನಾಡೋಕೆ ಇಷ್ಟ ಪಡುತ್ತಿಲ್ಲ. ಅಷ್ಟೆ ಅಲ್ಲ ಅಗಸ್ಟ್​ 14ಕ್ಕೆ ಏನಾದ್ರು ದರ್ಶನ್​​ ಗಾಗಿ ಪೂಜೆ ಮಾಡಿದ್ರೆ ನಾವು ಪ್ರೊಟೆಸ್ಟ್ ಮಾಡುತ್ತೇವೆ ಅನ್ನೋ ಮಾತುಗಳನ್ನ ಕೆಲ ಸ್ಟಾರ್ ನಟರು ಹೇಳಿಕೊಳ್ಳುತ್ತಿದ್ದಾರಂತೆ. ಅಣ್ಣಾವ್ರು 108 ದಿನ ಕಾಡಿನಲ್ಲಿದ್ದಾಗಲೇ ಕಲಾವಿಧರೆಲ್ಲಾ ಸೇರಿ ಒಂದು ಪೂಜೆ ಮಾಡಿಸಿಲ್ಲ. ಈಗ ಅದರ ಅವಶ್ಯಕತೆ ಏನಿದೆ ಅಂತ ಕೆಲವರು ಕೇಳುತ್ತಿದ್ದಾರೆ. 

ಜೈಲಲ್ಲಿ ದರ್ಶನ್ ‘ಅವರ’ಜೊತೆ ಮಾತ್ರ ಮಾತುಕತೆ.. ಯಾರವನು..?: ನಟನ ಬಿಡುಗಡೆ ಭವಿಷ್ಯ ಹೇಳ್ತು ನಿಗೂಢ ಕಲ್ಲು!

ಈಗ ನಮ್ಮ ಚಿತ್ರರಂಗ ಬೆಳೆದಿದೆ. ಪ್ಯಾನ್​ ಇಂಡಿಯಾ ಸ್ಟಾರ್ ಯಶ್​ ರಿಷಬ್, ಸುದೀಪ್​​ಮ ಧ್ರುವ ನಂತಹ ದಿಗ್ಗಜ ನಟರಿದ್ದಾರೆ. ಸ್ಟಾರ್ ಹೀರೋಯಿನ್​ಗಳು ಇದ್ದಾರೆ. ಕಂಟೆಂಟ್ ಸಿನಿಮಾಗಳನ್ನ ಮಾಡೋ ಬಗ್ಗೆ ಗಮನ ಕೊಡದೇ ಕಲಾವಿಧರ ಸಂಘದಲ್ಲಿ ಕಲಾವಿಧರಿಗಾಗಿ ಪೂಜೆ ಹೋಮ ಹವನ ಅಂತ ಹೋಗುತ್ತಿದ್ದಾರೆ ಅನ್ನೋ ಟಾಕ್​ ಈಗ ಸ್ಯಾಂಡಲ್​ವುಡ್​​ಅನ್ನ ಆವರಿಸಿಕೊಳ್ಳುತ್ತಿದೆ. ಒಟ್ಟಿನಲ್ಲಿ ನಿರ್ಮಾಪಕ ರಾಕ್​ಲೈನ್ ವೆಂಕಟೇಶ್​ ಹಾಗು ನಟ ದೊಡ್ಡಣ್ಣ ಈಗ ಕಲಾವಿಧರ ಹೆಸರಲ್ಲಿ ಕಲಾವಿಧರ ಭವನದಲ್ಲೇ ಹೋಮ ಹವನಾ ಪೂಜೆ ಅಂತ ತಲೆ ಕೆಡಿಸಿಕೊಂಡಿದ್ದಾರೆ. ಇದು ಹೊಸ ವಿವಾದಕ್ಕೆ ಎಡೆಮಾಡಿಕೊಡೋ ಎಲ್ಲಾ ಸಾಧ್ಯತೆ ಇದೆ.

Latest Videos
Follow Us:
Download App:
  • android
  • ios