ಯಂಗ್ ಹುಡುಗರು ಬಂದು ನಟಿ ಸುಧಾರಾಣಿ ಹತ್ರ ಹಂಗಾ ಕೇಳೋದು!?

ನಟಿ ಸುಧಾರಾಣಿ ಅವರ ಬಗ್ಗೆ ಸೋಷಿಯಲ್ ಮೀಡಯಾದಲ್ಲಿ ಅದೊಂದು ವಿಡಿಯೋ ವೈರಲ್ ಆಗುತ್ತಿದೆ. ಯಂಗ್ ಹುಡುಗರು ಬಂದು ಸುಧಾರಾಣಿ ಅವರ ಬಳಿ ಹಂಗೆ ಹೇಳ್ತಾರೆ ಅಂದ್ರೆ ನಂಬೋದೇ ಕಷ್ಟ. ಆದರೆ, ಅದು ನಿಜ, ಏಕೆಂದರೆ ಸ್ವತಃ ಸುಧಾರಾಣಿ ಅವರೇ ಆ ಬಗ್ಗೆ ಹೇಳಿಕೊಂಡಿರುವ..

Actress Sudharani reveals the fact about her role janaki in Manedevru movie

ಕನ್ನಡ ಚಿತ್ರರಂಗ ಕಂಡ ಅತ್ಯದ್ಭುತ ಹಾಗೂ ಸುಂದರಿ ನಟಿಯರಲ್ಲಿ ಸುಧಾರಾಣಿ (Sudha Rani) ಕೂಡ ಒಬ್ಬರು. 1970ರ ದಶಕದಲ್ಲಿ ಬಾಲಕಲಾವಿದೆಯಾಗಿ ಚಿತ್ರರಂಗ ಪ್ರವೇಶಿಸಿದ ನಟಿ ಸುಧಾರಾಣಿ ಅವರು 80ರ ದಶಕದಲ್ಲಿ ನಾಯಕಿ ನಟಿಯಾಗಿ ಚಿತ್ರರಂಗದಲ್ಲಿ ಭಾರೀ ಮಿಂಚು ಹರಿಸಿದ್ದಾರೆ. ಬಳಿಕ 90ರ ದಶಕದಲ್ಲಿ ಕೂಡ ಸ್ಟಾರ್ ನಟಿಯಾಗಿ ಮರೆದವರು ನಟಿ ಸುಧಾರಾಣಿ. ಮದುವೆ ಬಳಿಕ ನಾಯಕಿಯಾಗಿ ತೆರೆಯ ಮೇಲೆ ಕಡಿಮೆ ಕಾಣಿಸಿಕೊಂಡಿರುವ ಸುಧಾರಾಣಿ ಅವರು ಪೋಷಕ ಪಾತ್ರದ ನಟನೆಯಿಂದ ಈಗಲೂ ದೂರ ಸರಿದವರಲ್ಲ. ಈಗ ಕಿರುತೆರೆಯಲ್ಲಿ ಕೂಡ ಬ್ಯಸಿಯಾಗಿದ್ದಾರೆ 

ಇಂಥ ನಟಿ ಸುಧಾರಾಣಿ ಅವರ ಬಗ್ಗೆ ಸೋಷಿಯಲ್ ಮೀಡಯಾದಲ್ಲಿ ಅದೊಂದು ವಿಡಿಯೋ ವೈರಲ್ ಆಗುತ್ತಿದೆ. ಯಂಗ್ ಹುಡುಗರು ಬಂದು ಸುಧಾರಾಣಿ ಅವರ ಬಳಿ ಹಂಗೆ ಹೇಳ್ತಾರೆ ಅಂದ್ರೆ ನಂಬೋದೇ ಕಷ್ಟ. ಆದರೆ, ಅದು ನಿಜ, ಏಕೆಂದರೆ ಸ್ವತಃ ಸುಧಾರಾಣಿ ಅವರೇ ಆ ಬಗ್ಗೆ ಹೇಳಿಕೊಂಡಿರವ ವಿಡಿಯೋ ವೈರಲ್ ಅಗ್ತಿದೆ, ನೋಡಿ ಕನ್ಫರ್ಮ್ ಮಾಡ್ಕೊಳ್ಳಿ.. ಹೌದು, ಸುಧಾರಾಣಿಯ ಆ ಪಾತ್ರದ ಬಗ್ಗೆ ಮಾತಾಡ್ತಾರೆ, ಅದನ್ನು ಇವತ್ತಿಗು ಇಷ್ಟಪಡ್ತಾರೆ ಅಂತಾಯ್ತು!

ಬೆನ್ನಿನ ಮೇಲೆ ಅಂಬರೀಷ್ ಎತ್ತಿಕೊಂಡು ಕೋಪ ಕಮ್ಮಿಆಗಲೆಂದು ಬಯಸಿದ್ರಾ ಸುಧಾರಾಣಿ!

ಹಾಗಿದ್ರೆ ನಟಿ ಸುಧಾರಾಣಿ ಅವ್ರು ಆ ಬಗ್ಗೆ ಅದೇನು ಹೇಳಿದ್ದಾರೆ? ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.. ಈ ಬಗ್ಗೆ ನಟಿ ಸುಧಾರಾಣಿ 'ಅದ್ಭುತವಾದ ಕ್ಯಾರಕ್ಟರೈಜೇ‍ಶನ್ ಜಾನಕಿ ಪತ್ರ ಅಂತೂನೂ.. ಇವತ್ತಿಗೂನೂ ಅದೆಷ್ಟೋ ಜನ ನಂಗೆ ಹೇಳ್ತಾರೆ.. ಅದರಲ್ಲೂ ಈ ಯಂಗರ್ ಜನರೇಶನ್‌ ಕೂಡ.. 'ನಂಗೆ ನಿಮ್ ಜಾನಕಿ ತರ ಹೆಂಡ್ತಿ ಬೇಕು ಅಂತ..'. ನಾನು 'ಹುಶಾರು, ಹೇಗ್ ಕೇಳ್ಕೊತೀರಾ?' ಅಂತ ಹೇಳ್ತೀನಿ ಅಂದಿದಾರೆ ನಟಿ ಸುಧಾರಾಣಿ. ಹುಡುಗ್ರಿಗೆ ಅಷ್ಟೊಂದು ಹುಚ್ಚು ಹಿಡಿಸಿದ್ದಾಳಾ ಜಾನಕಿ?

ಹೌದು, ಸುಧಾರಾಣಿಯವರು ತಮ್ಮ ನಟನೆಯ 'ಮನೆದೇವ್ರು' ಚಿತ್ರದಲ್ಲಿ ಜಾನಕಿ ಪಾತ್ರದಲ್ಲಿ ಅಮೋಘ ಅಭಿನಯ ನೀಡಿದ್ದರು. ಆ ಪಾತ್ರದಲ್ಲಿನ ಸುಧಾರಾಣಿ ಅಭಿನಯ ಅದೆಷ್ಟು ಸಿನಿಪ್ರೇಕ್ಷಕರಿಗೆ ಇಷ್ಟವಾಗಿತ್ತು ಎಂದರೆ, ಇವತ್ತಿಗೂ ಅದನ್ನು ಯಾರೂ ಮರೆತಿಲ್ಲ, ಮರೆಯಲು ಸಾಧ್ಯವೂ ಇಲ್ಲ ಎನ್ನಬಹುದು. ಈಗಲೂ ಕೂಡ ಆ ಬಗ್ಗೆ ಜನರು ಮಾತಾಡ್ತಾರೆ, ಅದ್ರಲ್ಲೂ ಯಂಗ್ ಹುಡುಗರು ಮಾತಾಡ್ತಾರೆ ಅಂದ್ರೆ ನಿಜವಾಗಿಯೂ ಅದು ಅಚ್ಚರಿಯ ಸಂಗತಿಯೇ ಸರಿ ಬಿಡಿ!

ಎಪಿಎಸ್ ಕಾಲೇಜು ಸ್ನೇಹ-ಸಮ್ಮಿಲನಕ್ಕೆ ಕರೆದರೆ ತಲೈವಾ ಬ್ಯಾಂಕಾಕ್‌ಗೆ ಹೋಗಿದ್ಯಾಕೆ?

 

 

Latest Videos
Follow Us:
Download App:
  • android
  • ios